ಕಾರ್ಗೋ ವಿಮಾನ ದರ ಏರಿಕೆಯಿಂದ ವಿದೇಶಕ್ಕೆ ರಫ್ತಾಗದ ಹಣ್ಣು, ತರಕಾರಿ; ರಫ್ತುದಾರರೊಂದಿಗೆ ಸಚಿವ ನಾರಾಯಣಗೌಡ ಸಭೆ

ಈ ವಿಚಾರವಾಗಿ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ, ರಫ್ತುದಾರರು ಹಾಗೂ ಎಪೆಡಾ, ಕೆಪೆಕ್ ಸೇರಿದಂತೆ ಇತರ ಸಂಸ್ಥೆಗಳ ಜೊತೆ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದರು.

news18-kannada
Updated:April 20, 2020, 9:32 PM IST
ಕಾರ್ಗೋ ವಿಮಾನ ದರ ಏರಿಕೆಯಿಂದ ವಿದೇಶಕ್ಕೆ ರಫ್ತಾಗದ ಹಣ್ಣು, ತರಕಾರಿ; ರಫ್ತುದಾರರೊಂದಿಗೆ ಸಚಿವ ನಾರಾಯಣಗೌಡ ಸಭೆ
ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ, ರಫ್ತುದಾರರು ಹಾಗೂ ಎಪೆಡಾ, ಕೆಪೆಕ್ ಸೇರಿದಂತೆ ಇತರ ಸಂಸ್ಥೆಗಳ ಜೊತೆ ಸಭೆ ನಡೆಸಿದರು.
  • Share this:
ಬೆಂಗಳೂರು: ಕೋವಿಡ್ 19 ಎಲ್ಲ ಕ್ಷೇತ್ರದಲ್ಲೂ ಸಮಸ್ಯೆ ಸೃಷ್ಟಿಸಿದೆ. ಹಣ್ಣು, ತರಕಾರಿ ವಿದೇಶಕ್ಕೆ ರಫ್ತು ಮಾಡಲೂ ಇದು ಅಡ್ಡಿಯಾಗಿದೆ. ಪ್ರತಿನಿತ್ಯ ಸಾವಿರಾರು ವಿಮಾನ ವಿದೇಶಕ್ಕೆ ಹೋಗಿ ಬರುತ್ತಿದ್ದ ಕಾರಣ ಹಣ್ಣು ತರಕಾರಿ ಕೂಡ ನಿರಾತಂಕವಾಗಿ ಸರಬರಾಜಾಗುತ್ತಿತ್ತು. ಆದರೆ ಕೋವಿಡ್ -19 ನಿಂದಾಗಿ ವಿಮಾನ ಸಂಚಾರ ಸ್ಥಗಿತವಾಗಿದೆ.

ವಿದೇಶದಿಂದಲೂ ಯಾವುದೇ ವಸ್ತು ಆಮದಾಗುತ್ತಿಲ್ಲ. ಹೀಗಾಗಿ ಹಣ್ಣು, ತರಕಾರಿ ಕೊಂಡೊಯ್ದ ಕಾರ್ಗೊ ವಿಮಾನ ವಾಪಸ್ ಬರುವಾಗ ಖಾಲಿ ಬರುವ ಸ್ಥಿತಿ ಇದೆ. ಇದರಿಂದಾಗಿ ಕಾರ್ಗೋ ವಿಮಾನಯಾನ ಸಂಸ್ಥೆಯವರು ದರವನ್ನು ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡಿದ್ದಾರೆ. ಇದರಿಂದಾಗಿಯೇ ರಫ್ತುದಾರರು ವಿದೇಶಕ್ಕೆ ಹಣ್ಣು, ತರಕಾರಿ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಚಾರವಾಗಿ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ, ರಫ್ತುದಾರರು ಹಾಗೂ ಎಪೆಡಾ, ಕೆಪೆಕ್ ಸೇರಿದಂತೆ ಇತರ ಸಂಸ್ಥೆಗಳ ಜೊತೆ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ್ದಾರೆ.

ಯಾವ ದೇಶಕ್ಕೆ ಎಷ್ಟು ಹಣ್ಣು, ತರಕಾರಿ ರಫ್ತಾಗುತ್ತೆ. ಪ್ರತಿ ನಿತ್ಯ ಎಷ್ಟು ಟನ್ ರಫ್ತು ಮಾಡುತ್ತೀರಿ. ಈ ಮೊದಲು ಕಾರ್ಗೋ ದರ ಏನಿತ್ತು, ಎಂಬಿತ್ಯಾದಿ ವಿವರವನ್ನು ನೀಡುವಂತೆ ಸಚಿವರು ಸಭೆಯಲ್ಲಿ ಸೂಚಿಸಿದರು. ಕಾರ್ಗೋದಲ್ಲಿ ರಾಜ್ಯದ ತರಕಾರಿ, ಹಣ್ಣುಗಳಿಗೆ ಆದ್ಯತೆ ನೀಡುವಂತೆ ಸೂಚಿಸಬೇಕು. ಸಾಕಷ್ಟು ಬಾರಿ ನಮ್ಮ ಬುಕಿಂಗ್ ರದ್ದು ಮಾಡಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ರಫ್ತುದಾರರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ ಕಾರ್ಗೋದವರಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

ಇದನ್ನು ಓದಿ: ರೈತರ ಸಮಸ್ಯೆ ಆಲಿಸದಿದ್ದರೆ ನಾಲ್ಕೈದು ದಿನದಲ್ಲಿ ಜೆಡಿಎಸ್​ನಿಂದ ಉಗ್ರ ಹೋರಾಟ; ಎಚ್​.ಡಿ.ರೇವಣ್ಣ ಎಚ್ಚರಿಕೆ

ರಫ್ತಿಗೆ ಸಂಬಂಧಿಸಿದಂತೆ ಇರುವ ಎಲ್ಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಅಲ್ಲದೆ ಎರಡು ದಿನಗಳೊಳಗೆ ರಫ್ತು ಮಾಡಲು ಇರುವ ತೊಡಕಿನ ಎಲ್ಲ ವಿವರ ನೀಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಫ್ತುದಾರರು ವಿವರ ನೀಡಿದ ಬಳಿಕ, ಸರ್ಕಾರದ ವತಿಯಿಂದ ಈ ಬಗ್ಗೆ ಬೇಕಾಗ ಕ್ರಮ ವಹಿಸಲಾಗುವುದು ಎಂದು ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.
First published: April 20, 2020, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading