ದಾವಣಗೆರೆ: ಆಹಾರ ಪದಾರ್ಥಕಿಟ್ ಕೊಡಲು ಕರೆಸಿ, ಜನರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವಮಾನ ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಹನಮಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ಕಿಟ್ ಬೇಡ ಅಂದ್ರೆ ಎದ್ದು ಹೋಗು ಎಂದು ಶಾಸಕರು ನಿಂದಿಸಿದ್ದಾರೆ.
ಆಹಾರ ಪದಾರ್ಥಗಳ ಕಿಟ್ಗಳನ್ನು ಪಡೆಯುವ ಸಲುವಾಗಿ ನೂರಾರು ಜನರು ಒಂದೆಡೆ ಸೇರಿದ್ದರು. ಎಲ್ಲರೂ ಬಿಸಿಲಿನಲ್ಲಿ ಗಂಟೆಗೂ ಹೆಚ್ಚು ಕಾದರೂ ಶಾಸಕ ರೇಣುಕಾಚಾರ್ಯ ಅವರು ಸ್ಥಳಕ್ಕೆ ಬರಲಿಲ್ಲ. ಇದರಿಂದ ಅಸಮಾಧಾಗೊಂಡ ಜನರು ತಾವು ಮನೆಗೆ ಹೋಗುವುದಾಗಿ ಹೇಳಿದ್ದಾರೆ.
ಆದಾದ ಬಳಿಕ ಸ್ಥಳಕ್ಕೆ ಬಂದ ರೇಣುಕಾಚಾರ್ಯ, ಅಷ್ಟು ಪುರುಸೋತ್ತಿಲ್ಲ ಅಂದ್ರೆ ಹೇಗೆ. ಸಮಸ್ಯೆ ಹೇಳಿಕೊಂಡು ನೂರಾರು ಜನರು ಮನೆಗೆ ಬರುತ್ತಿರುತ್ತಾರೆ. ಅವರ ಸಮಸ್ಯೆ ಆಲಿಸ್ತಾ ಇದ್ದೆ. ಹೀಗಾಗಿ ತಡ ಆಯ್ತು. ಕಾಯಕ್ಕೆ ಆಗಲ್ಲ ಅಂದ್ರೆ ಹೇಗೆ? ಎಂದು ಜನರಿಗೆ ಪ್ರಶ್ನಿಸಿದರು. ಅಲ್ಲದೇ, ಬಿಸಿಲಲ್ಲಿ ಕಾಯಲು ಆಗದೆ ಮನೆಗೆ ಹೋಗ್ತಿವಿ ಎಂದಿದ್ದ ಜನರಿಗೆ, ಕಾಯೋಕೆ ಆಗಲ್ಲ ಅಂದ್ರೆ ಎದ್ದು ಹೋಗು ಎಂದು ಶಾಸಕ ರೇಣುಕಾಚಾರ್ಯ ಅವಮಾನ ಮಾಡಿದ್ದಾರೆ.
ಇದನ್ನು ಓದಿ: ಚಾರ್ಟ್ ಆಫ್ ಡಿಮಾಂಡ್ ಸಲ್ಲಿಕೆಗೆ ವಿಪಕ್ಷ ನಿರ್ಧಾರ; ಕಾರ್ಯಗತಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ