HOME » NEWS » Coronavirus-latest-news » HONG KONG BANS AIR INDIA FLIGHTS TILL AUGUST END REPORT MAK

ಭಾರತೀಯ ಪ್ರಯಾಣಿಕರಲ್ಲಿ ಕೊರೋನಾ ಸೋಂಕು; ಆಗಸ್ಟ್‌ ಅಂತ್ಯದವರೆಗೆ ಏರ್‌ ಇಂಡಿಯಾ ವಿಮಾನಕ್ಕೆ ಹಾಂಕಾಂಗ್ ನಿಷೇಧ

ಭಾರತದ ಹೊರತಾಗಿ, ಹಾಂಕಾಂಗ್ ಸರ್ಕಾರದ ನಿಯಮಗಳ ಪ್ರಕಾರ ಬಾಂಗ್ಲಾದೇಶ, ಇಂಡೋನೇಷ್ಯಾ, ಕಜಕಿಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪೈನ್ಸ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾದಿಂದ ಬರುವ ಎಲ್ಲ ಪ್ರಯಾಣಿಕರು ಪ್ರಯಾಣಕ್ಕೆ ಮುನ್ನ COVID-19 ನಕಾರಾತ್ಮಕ ಪರೀಕ್ಷಾ ಫಲಿತಾಂಶ ಪ್ರಮಾಣಪತ್ರ ಕಡ್ಡಾಯವಾಗಿದೆ.

MAshok Kumar | news18-kannada
Updated:August 19, 2020, 2:47 PM IST
ಭಾರತೀಯ ಪ್ರಯಾಣಿಕರಲ್ಲಿ ಕೊರೋನಾ ಸೋಂಕು; ಆಗಸ್ಟ್‌ ಅಂತ್ಯದವರೆಗೆ ಏರ್‌ ಇಂಡಿಯಾ ವಿಮಾನಕ್ಕೆ ಹಾಂಕಾಂಗ್ ನಿಷೇಧ
ಏರ್ ಇಂಡಿಯಾ
  • Share this:
ನವ ದೆಹಲಿ (ಆಗಸ್ಟ್‌ 19); ಭಾರತದಿಂದ ಹಾಂಕಾಂಗ್ ತೆರಳಿದ್ದ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹಾಂಕಾಂಗ್ ಸರ್ಕಾರ ಆಗಸ್ಟ್ ತಿಂಗಳ ಅಂತ್ಯದವರೆಗೆ ಭಾರತದ ಏರ್ ಇಂಡಿಯಾ ವಿಮಾನಗಳನ್ನು ನಿಷೇಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಹಾಂಕಾಂಗ್ ಕಳೆದ ಜುಲೈ ತಿಂಗಳಲ್ಲೇ ಕೆಲವು ನಿಯಮಗಳನ್ನು ಹೊರಡಿಸಿತ್ತು. ಈ ನಿಯಮದ ಪ್ರಕಾರ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕೋವಿಡ್ ಪರೀಕ್ಷೆಯನ್ನು ನಡೆಸಿ ನಕಾರಾತ್ಮಕ ಪ್ರಮಾಣಪತ್ರವನ್ನು ಪಡೆದಿರಬೇಕು. ಈ ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಹಾಂಕಾಂಗ್ ಪ್ರವೇಶ ನೀಡಲಾಗುವುದು ಎಂದು ನಿಯಮ ಮಾಡಲಾಗಿತ್ತು.

ಇದಲ್ಲದೆ, ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಂಕಾಂಗ್ ವಿಮಾನ ನಿಲ್ದಾಣದ ಆವರಣಕ್ಕೆ ಆಗಮಿಸಿದ ನಂತರವೂ ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಲಾಗಿತ್ತು.

ಆದರೆ, ಏರ್ ಇಂಡಿಯಾ ವಿಮಾಣವೊಂದರಲ್ಲಿ ಹಾಂಕಾಂಗ್‌ಗೆ ಬಂದಿಳಿದ ಕೆಲವು ಪ್ರಯಾಣಿಕರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಹೀಗಾಗಿ ಹಾಂಕಾಂಗ್ ಸರ್ಕಾರ ಭಾರತದ ಏರ್ ಇಂಡಿಯಾ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎನ್ನಲಾಗುತ್ತಿದೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಏರ್ ಇಂಡಿಯಾ, “"ಹಾಂಕಾಂಗ್ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳಿಂದಾಗಿ, ಎಐ 310/315, ದೆಹಲಿ – ಹಾಂಕಾಂಗ್ - 2020 ಆಗಸ್ಟ್ 18 ರ ವಿಮಾನ ಪ್ರಯಾಣವನ್ನು ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ನವೀಕರಣವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಪ್ರಯಾಣಿಕರು ದಯವಿಟ್ಟು ಸಹಕರಿಸಿ ಮತ್ತು ಸಹಾಯಕ್ಕಾಗಿ ಏರ್ ಇಂಡಿಯಾ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿ" ಎಂದು ತಿಳಿಸಿದೆ.

ಭಾರತದ ಹೊರತಾಗಿ, ಹಾಂಕಾಂಗ್ ಸರ್ಕಾರದ ನಿಯಮಗಳ ಪ್ರಕಾರ ಬಾಂಗ್ಲಾದೇಶ, ಇಂಡೋನೇಷ್ಯಾ, ಕಜಕಿಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪೈನ್ಸ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾದಿಂದ ಬರುವ ಎಲ್ಲ ಪ್ರಯಾಣಿಕರು ಪ್ರಯಾಣಕ್ಕೆ ಮುನ್ನ COVID-19 ನಕಾರಾತ್ಮಕ ಪರೀಕ್ಷಾ ಫಲಿತಾಂಶ ಪ್ರಮಾಣಪತ್ರ ಕಡ್ಡಾಯವಾಗಿದೆ.

ಇದನ್ನೂ ಓದಿ : SSR Death Case: ಸುಶಾಂತ್​ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆದೇಶ ನೀಡಿದ ಸುಪ್ರೀಂಕೋರ್ಟ್​..!ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಮಾರ್ಚ್ 23 ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ಆದಾಗ್ಯೂ, ವಾಯುಯಾನ ನಿಯಂತ್ರಕ ಡಿಜಿಸಿಎ ಅನುಮೋದನೆಯೊಂದಿಗೆ ವಿಶೇಷ ಅಂತರರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
Youtube Video

ಅಲ್ಲದೆ, ಜುಲೈನಿಂದ ಭಾರತವು ಅಮೆರಿಕ, ಜರ್ಮನಿ, ಫ್ರಾನ್ಸ್, ಸೌದಿ ಅರೇಬಿಯಾ, ಮಾಲ್ಡೀವ್ಸ್‌ ಮತ್ತು ಲಂಡನ್ ದೇಶಗಳೊಂದಿಗೆ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಾಗಿ ಎರಡು ದೇಶಗಳ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳ ಮೂಲಕ ವಿಮಾನ ಸೇವೆಯನ್ನು ಮುಂದುವರೆಸಲಾಗುತ್ತಿದೆ.
Published by: MAshok Kumar
First published: August 19, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories