ದೆಹಲಿಯಲ್ಲಿ ಕೊರೋನಾ ಆರ್ಭಟ; ಸಿಎಂ ಕೇಜ್ರಿವಾಲ್‌-ಲೆಫ್ಟಿನೆಂಟ್‌ ಗವರ್ನರ್‌ ಜೊತೆ ನಾಳೆ ಅಮಿತ್‌ ಶಾ ಸಭೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಆತಂಕ ಈಗಾಗಲೇ ಕೈಮೀರಿದ್ದು 36,000 ಜನ ಈಗಾಗಲೇ ಸೋಂಕು ಪೀಡಿತರಾಗಿದ್ದಾರೆ. ಅಲ್ಲದೆ 1,200 ಜನ ಈ ಸೋಂಕಿಗೆ ಬಲಿಯಾಗಿದ್ದಾರೆ. ಪರಿಣಾಮ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಅಮಿತ್​ ಶಾ

ಅಮಿತ್​ ಶಾ

  • Share this:
ನವ ದೆಹಲಿ (ಜೂನ್‌ 13); ರಾಷ್ಟ್ರ ರಾಜಧಾನಿಯಲ್ಲಿನ COVID-19 ಪರಿಸ್ಥಿತಿ ಕೈಮೀರಿದ್ದು ಈ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಾಳೆ ಭಾನುವಾರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಾನ್‌ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಆತಂಕ ಈಗಾಗಲೇ ಕೈಮೀರಿದ್ದು 36,000 ಜನ ಈಗಾಗಲೇ ಸೋಂಕು ಪೀಡಿತರಾಗಿದ್ದಾರೆ. ಅಲ್ಲದೆ 1,200 ಜನ ಈ ಸೋಂಕಿಗೆ ಬಲಿಯಾಗಿದ್ದಾರೆ. ಪರಿಣಾಮ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದರು.ಈ ಹಿನ್ನೆಲೆ ದೆಹಲಿಯಲ್ಲಿನ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್‌ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ನೇತೃತ್ವದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಮಹತ್ವದ ಸಭೆ ನಡೆಯಲಿದೆ ಎಂದು ಗೃಹ ಇಲಾಖೆ ಸಚಿವಾಲಯ ಇಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ : ಮೈಸೂರಿನಲ್ಲಿ ಮತ್ತೆ ಕೊರೋನಾತಂಕ : ಸೋಂಕಿತ ಬಂದಿದ್ದ ಹೋಟೆಲ್ ಸೀಲ್‌ಡೌನ್.!
First published: