ರಾಜ್ಯದಲ್ಲೀಗ ಹೋಮ್ ಐಸೊಲೇಶನ್ ಪ್ಯಾಕೇಜ್​​ಗಳಿಗೆ ಭಾರೀ ಬೇಡಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ಭರ್ಜರಿ ಮಾರಾಟ

ಆದರೀಗ, ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಈಗ ಹೋಮ್ ಐಸೊಲೇಶನ್ ಪ್ಯಾಕೇಜ್ ಗಳು ಆರಂಭವಾಗಿದೆ. ಈ ಪ್ಯಾಕೇಜ್‌ಗಳಿಗೆ ಈಗ ಭಾರೀ ಬೇಡಿಕೆ ಕೂಡಾ ಉಂಟಾಗಿದೆ. ಆಕ್ಸಿಮೀಟರ್, ಔಷಧಗಳು, ಡಾಕ್ಟರ್ ಕನ್ಸಲ್ಟೇಶನ್, ಬ್ಲಡ್ ಟೆಸ್ಟ್ ಮುಂತಾದ ಸೌಕರ್ಯಗಳು ಈ ಪ್ಯಾಕೇಜ್ ನಲ್ಲಿ ಇರುತ್ತದೆ.

news18-kannada
Updated:July 11, 2020, 12:41 PM IST
ರಾಜ್ಯದಲ್ಲೀಗ ಹೋಮ್ ಐಸೊಲೇಶನ್ ಪ್ಯಾಕೇಜ್​​ಗಳಿಗೆ ಭಾರೀ ಬೇಡಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ಭರ್ಜರಿ ಮಾರಾಟ
ಸಾಂದರ್ಭಿ ಚಿತ್ರ
  • Share this:
ಬೆಂಗಳೂರು(ಜು.11): ಸಿಂಪ್ಟಮ್ಸ್ ಇಲ್ಲದ ಸೋಂಕಿತರಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡುವಂತೆ ಸರ್ಕಾರ ಈಗಾಗಲೇ ಆದೇಶಿಸಿದೆ. ಈಗಾಗಲೇ ನಮ್ಮ ರಾಜ್ಯದ ಮುಕ್ಕಾಲು ಪಾಲು ಜನ ಇದೇ ಗುಂಪಿಗೆ ಸೇರಿರುವುದರಿಂದ ಬಹುಪಾಲು ಚಿಕಿತ್ಸೆ ಮನೆಗಳಲ್ಲೇ ಆಗುವುದರಿಂದ ಅತ್ಯಗತ್ಯ ಇರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಆರೈಕೆ ಸಿಗುತ್ತದೆ. ಈ ಉದ್ದೇಶದಿಂದಲೇ ಏ-ಸಿಂಪ್ಟಮ್ಯಾಟಿಕ್ ರೋಗಿಗಳಿಗೆ ಮನೆಗಳಲ್ಲಿ ಚಿಕಿತ್ಸೆ ನೀಡುವ ಅನುಕೂಲ ಕಲ್ಪಿಸಲಾಗಿದೆ.

ಆದರೀಗ, ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಈಗ ಹೋಮ್ ಐಸೊಲೇಶನ್ ಪ್ಯಾಕೇಜ್ ಗಳು ಆರಂಭವಾಗಿದೆ. ಈ ಪ್ಯಾಕೇಜ್‌ಗಳಿಗೆ ಈಗ ಭಾರೀ ಬೇಡಿಕೆ ಕೂಡಾ ಉಂಟಾಗಿದೆ. ಆಕ್ಸಿಮೀಟರ್, ಔಷಧಗಳು, ಡಾಕ್ಟರ್ ಕನ್ಸಲ್ಟೇಶನ್, ಬ್ಲಡ್ ಟೆಸ್ಟ್ ಮುಂತಾದ ಸೌಕರ್ಯಗಳು ಈ ಪ್ಯಾಕೇಜ್ ನಲ್ಲಿ ಇರುತ್ತದೆ.

ಇವುಗಳನ್ನು ಜನ ಅದೆಷ್ಟು ಆಸಕ್ತಿ ವಹಿಸಿಕೊಳ್ಳುತ್ತಿದ್ದಾರೆ ಎಂದರೆ ಅನೇಕ ಕಡೆ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳೇ ಈ ಪ್ಯಾಕೇಜ್​​ಗಳನ್ನು ಬುಕ್ ಮಾಡುತ್ತಿವೆ. ಅನೇಕ ಖಾಸಗಿ ಆಸ್ಪತ್ರೆಗಳು 7,14,21 ದಿನಗಳ ವಿಭಿನ್ನ ಪ್ಯಾಕೇಜ್​​ಗಳನ್ನು ನೀಡುತ್ತಿವೆ.‌ ಈ ದಿನಗಳಲ್ಲಿ ನಡುವೆ ಏನಾದರೂ ಆರೋಗ್ಯ ಹದಗೆಟ್ಟರೆ ಕರೆದೊಯ್ದು ಚಿಕಿತ್ಸೆ ನೀಡುವ ಜವಾಬ್ದಾರಿಯೂ ಅದೇ ಆಸ್ಪತ್ರೆಗಳದ್ದಾಗಿರುತ್ತದೆ.

ಒಟ್ಟಾರೆ ರೋಗಿಗಳಲ್ಲಿ 60-80% ಏ-ಸಿಂಪ್ಟಮ್ಯಾಟಿಕ್ ಇರುವುದರಿಂದ ಇಂಥಾ ಸೌಕರ್ಯಕ್ಕೆ ಭಾರೀ ಡಿಮ್ಯಾಂಡ್ ಇದೆ. ಮನೆಯಲ್ಲೇ ಚಿಕಿತ್ಸೆ ಪಡೆಯಲು ಅನೇಕರು ಇಚ್ಛಿಸುತ್ತಿದ್ದಾರೆ.‌‌ ಆದರೆ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಹೇಗೆ, ಬೇಕೆಂದಾಗ ವೈದ್ಯರ ಭೇಟಿ ಸಾಧ್ಯವಾ ಎನ್ನುವ ಬಗ್ಗೆ ಸಾಕಷ್ಟು ಅನುಮಾನಗಳಿರುತ್ತವೆ. ಹಾಗಾಗಿ ಹೋಮ್ ಐಸೊಲೇಶನ್ ಪ್ಯಾಕೇಜ್ ಕಿಟ್ ಗಳು ಜನರಿಗೆ ಸರಳ ಮಾರ್ಗವಾಗಿ ಕಂಡುಬಂದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾಂಗ್ರೆಸ್​ ನಾಯಕರೇ ಕಾರಣ; ಸಚಿವ ಬಿ.ಸಿ. ಪಾಟೀಲ್ ಆರೋಪ

ಹೋಮ್ ಐಸೊಲೇಶನ್ ಪ್ಯಾಕೇಜ್ ನಲ್ಲಿ ಏನೇನಿರುತ್ತದೆ?4 ಬಾರಿ ವೈದ್ಯರ ಕನ್ಸಲ್ಟೇಶನ್, ನ್ಯೂಟ್ರಿಶನ್ ಕನ್ಸಲ್ಟೇಶನ್, ಮಾನಸಿಕ ತಜ್ಞರ ಕನ್ಸಲ್ಟೇಶನ್, ದಿನಕ್ಕೊಂದು ಸಲ ವೈಟಲ್ ಮಾನಿಟರಿಂಗ್, ಒಂದು ಆಕ್ಸಿಮೀಟರ್, ಒಂದು ಥರ್ಮಾಮೀಟರ್ ಇರುತ್ತದೆ.
Published by: Ganesh Nachikethu
First published: July 11, 2020, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading