HOME » NEWS » Coronavirus-latest-news » HOME ISOLATED CORONA PATIENTS ARE DYING IN BANGALORE SHTV KVD

ಬೆಂಗಳೂರಿಗರೇ ಎಚ್ಚರ.. ಎಚ್ಚರ.. ಹೋಂ ಐಸೋಲೇಷನ್​​ನಲ್ಲಿರುವ ಸೋಂಕಿತರ ಸಾವು ಹೆಚ್ಚಳ!

24 ಗಂಟೆಗಳ ಅವಧಿಯಲ್ಲಿ ಬೆಂಗಳೂರಲ್ಲಿ 20,897 ಪಾಸಿಟಿವ್​ ಕೇಸ್ ಹಾಗೂ 281 ಸಾವು ಸಂಭವಿಸಿದ್ದು, 4 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

news18-kannada
Updated:May 10, 2021, 7:09 AM IST
ಬೆಂಗಳೂರಿಗರೇ ಎಚ್ಚರ.. ಎಚ್ಚರ.. ಹೋಂ ಐಸೋಲೇಷನ್​​ನಲ್ಲಿರುವ ಸೋಂಕಿತರ ಸಾವು ಹೆಚ್ಚಳ!
ಸೋಂಕಿತರ ಅಂತ್ಯಕ್ರಿಯೆ.
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಬೆಂಗಳೂರಿನಲ್ಲಿ ಸಮರ್ಪಕ ಚಿಕಿತ್ಸೆ ಸಿಗದೇ ಮನೆಯಲ್ಲೇ ಪ್ರಾಣಬಿಡುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದೆ.‌  ಕರ್ನಾಟಕದಲ್ಲಿ ಕೊರೊನಾ ಕೇಸ್ ಕಳೆದೊಂದು ವಾರಕ್ಕೆ ಹೋಲಿಸಿದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿಲ್ಲ. ಇಳಿಮುಖವಾಗದೇ‌ ಹೋದರೂ ಏರಿಕೆಯಾಗದೇ ಇರುವುದು ಕರುನಾಡಿಗೆ ಸಮಾಧಾನ ವಿಚಾರವೇ. ಆದರೆ ಕೊರೊನಾ‌ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಮನೆಯಲ್ಲಿ ಐಸೋಲೇಷನ್ ಇರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.

ಕಳೆದ ಎರಡೇ ದಿನಗಳಲ್ಲಿ 123 ಮಂದಿ ಮನೆಯಲ್ಲೇ ಪ್ರಾಣಬಿಟ್ಟಿದ್ದಾರೆ. ಮನೆಯಲ್ಲಿ ಸಾಯ್ತಿರೋರ ಪೈಕಿ ಬೆಂಗಳೂರಿನವರೇ ಹೆಚ್ಚು. ಬೆಂಗಳೂರಿನಲ್ಲಿ ಕಳೆದೊಂದು ವಾರದಲ್ಲಿ 180 ಮಂದಿ ಮನೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.  ಮೇ ತಿಂಗಳಿನಲ್ಲಿ ಮನೆಯಲ್ಲಿ ಸಾವಿಗೀಡಾಗ್ತಿರೋರ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಕೊರೊನಾ ಎರಡನೇ ಅಲೆ ತನ್ನ ಪರಾಕ್ರಮ ತೋರಿಸಿರುವುದು. ಕೋವಿಡ್ ಆರ್ ಟಿ ಪಿಸಿಆರ್ ಟೆಸ್ಟ್ ರಿಪೋರ್ಟ್ ವಿಳಂಬವಾಗುತ್ತಿರುವುದು, ಸೋಂಕಿನ ಲಕ್ಷಣಗಳಿದ್ದಾಗ್ಯೂ ಪರೀಕ್ಷೆ ಮಾಡಿ ನಾಲ್ಕೈದು ದಿನಗಳಾದ್ರೂ ರಿಪೋರ್ಟ್ ಬರುತ್ತಿಲ್ಲ. ಇದರಿಂದ ಸಾವನ್ನಪ್ಪುವವರ‌ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.

ಇನ್ನು ಬೆಡ್ ಸಿಗದೇ ಮನೆಯಲ್ಲೇ ಚಿಕಿತ್ಸೆ‌ ಪಡೆಯುತ್ತಿರುವುದರಿಂದ ಸಾವಿಗೀಡಾಗ್ತಿರೋ ಸೋಂಕಿತರು ಇದ್ದಾರೆ. ಮನೆಯಲ್ಲಿ ಐಸೋಲೇಟ್ ಆಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಬೆಡ್ ಗಾಗಿ ಹುಡುಕಾಡುವ ಸಮಸ್ಯೆ ಇನ್ನೂ ಮುಗಿದಿಲ್ಲ. ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದುಕೊಂಡು ಕೊವಿಡ್ ನಿಯಮ ಸರಿಯಾಗಿ ಪಾಲಿಸ ಪ್ರಾಣ ಹಾನಿಯಾಗುತ್ತದೆ. ಇನ್ನು ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗದೇ ಸೋಂಕಿತರು ಅಸುನೀಗುತ್ತಿದ್ದಾರೆ.  ಮನೆಯಲ್ಲಿ ಐಸೋಲೇಟ್ ಆದವೇಳೆ ಆಕ್ಸಿಜನ್ ಇಳಿಕೆಯಾಗ್ತಿರೋದು ಸೋಂಕಿತರಿಗೆ ಅರಿವಿಗೆ ಬರ್ತಿಲ್ಲ. ಈ ಬಗ್ಗೆ ವಾರ್ಡ್ ವಾರು ಹೆಚ್ಚು ಸಿಬ್ಬಂದಿ, ಅಧಿಕಾರಿಗಳ ನಿಯೋಜನೆ ಮಾಡಿ ನಿಗಾ ವಹಿಸಲಾಗುವುದು ಎಂದು ಬಿಬಿಎಂಪಿ ಕಮಿಷಿನರ್ ಗೌರವ್ ಗುಪ್ತ ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಇದೆ. ಕೊರೊನಾ ಕೇಸ್ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಜನತಾ ಕರ್ಫ್ಯೂ ಇದ್ದರೂ 50 ಸಾವಿರ ಆಸುಪಾಸಿನಲ್ಲಿ ದಿನನಿತ್ಯ ಕೇಸ್ ದಾಖಲಾಗುತ್ತಿರುವುದು ಸಾಕಷ್ಟು ಆತಂಕ‌ ಹೆಚ್ಚು ಮಾಡಿದೆ. ಪ್ರತಿನಿತ್ಯ 200ರ ಒಳಗೆ ದಾಖಲಾಗುತ್ತಿದ್ದ ಕೇಸ್ ಕಳೆದೊಂದು ವಾರದಿಂದ ಸಾವಿನ ಸಂಖ್ಯೆ ನಾಲ್ಕು ನೂರು ಹೆಚ್ಚಾಗುತ್ತಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ವೈದ್ಯರ ಸಲಹೆ ಮೇರೆಗೆ ಐಸೋಲೇಟ್ ಆಗಬೇಕು.‌ ಈ ಬಗ್ಡೆ ಹೆಚ್ಚು ಭಯ ಪಡಬೇಡಿ. ಆದರೆ ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ.

ನಿನ್ನೆ ಒಂದೇ ದಿನ ರಾಜ್ಯದಲ್ಲಿ 490 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 47,930 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 20, 897 ಪ್ರಕರಣಗಳು ಪತ್ತೆ ಯಾಗಿದೆ. ರಾಜ್ಯದಲ್ಲಿ 6.5 ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳಿವೆ. ಇನ್ನೂ ಬೆಂಗಳೂರು ಒಂದರಲ್ಲೇ 20,897 ಹೊಸ ಕೇಸ್ ಹಾಗೂ 281 ಸಾವು ಸಂಭವಿಸಿದ್ದು, 4 ಲಕ್ಷ ಸಕ್ರೀಯ ಸೋಂಕಿತರು ಬೆಂಗಳೂರಲ್ಲೆ ಇದ್ದಾರೆ.
Published by: Kavya V
First published: May 10, 2021, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories