ಆ್ಯಕ್ಷನ್ ಕಿಂಗ್ ಜಾಕಿಜಾನ್​ಗೆ ಕೊರೊನಾ ವೈರಸ್ ತಗುಲಿರುವುದು ನಿಜವಾ? ಇಲ್ಲಿದೆ ಮಾಹಿತಿ

jackie chan: ಅಭಿಮಾನಿಗಳು ಜಾಕಿಜಾನ್​ ಮೇಲಿನ ಪ್ರೀತಿಗಾಗಿ ಮಾಸ್ಕ್​ ಜೊತೆಗೆ ಹಲವು ಉಡುಗೊರೆಯನ್ನು ನೀಡುತ್ತಿದ್ದಾರಂತೆ.

ನಟ ಜಾಕಿ ಚಾನ್

ನಟ ಜಾಕಿ ಚಾನ್

 • Share this:
  ಮಹಾಮಾರಿ ಕೊರೊನಾ ವೈರಸ್​ ದಾಳಿಯಿಂದ ಚೀನಾ ದೇಶ ಅಕ್ಷರಶಃ ನಲುಗಿ ಹೋಗಿದೆ. ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಈ ನಡುವೆ ಹಾಲಿವುಡ್ ಆ್ಯಕ್ಷನ್​ ​ಕಿಂಗ್​​ ನಟ ಜಾಕಿ ಜಾನ್​​ ಕೊರಾನಾ ವೈರಸ್​ ದಾಳಿಯಿಂದ ಬಳಲುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ವಿಚಾರದ ಬಗ್ಗೆ ವೈದ್ಯರಾಗಲಿ, ಜಾಕಿಜಾನ್​ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಈ ಸುದ್ದಿಗೆ ಜಾಕಿಜಾನ್​ ಅವರೇ ಸ್ಪಷ್ಟನೆ ನೀಡಿದ್ದಾರೆ.

  ಜಾಕಿಜಾನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ‘ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು. ನಾನು ಸದ್ಯ ಚೇತರಿಸಿಕೊಂಡು ಆರೋಗ್ಯವಾಗಿದ್ದೇನೆ. ದಯಮಾಡಿ ಯಾರೂ ಗಾಬರಿಯಾಗಬೇಡಿ ನನ್ನನ್ನು ಈ ವೈರಸ್​​ ಮೂಲೆಗುಂಪು ಮಾಡಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ:  ಬಾ..ಬಾ..ಬಾ..ನಾ ರೆಡಿ; ಮಾರ್ಚ್ 3ಕ್ಕೆ ರಾಬರ್ಟ್ ಅಡ್ಡದಿಂದ‌‌ ಬರಲಿದೆ ಮೊದಲ ಸಾಂಗ್

   
  ಇನ್ನು ಅಭಿಮಾನಿಗಳು ಜಾಕಿಜಾನ್​ ಮೇಲಿನ ಪ್ರೀತಿಗಾಗಿ ಮಾಸ್ಕ್​ ಜೊತೆಗೆ ಹಲವು ಉಡುಗೊರೆಯನ್ನು ನೀಡುತ್ತಿದ್ದಾರಂತೆ. 65 ವರ್ಷದ ನಟ ಜಾಕಿ ಚಾನ್ ಚೀನಾದ ಹಾಂಕಾಂಗ್​​ನಲ್ಲಿ ಜನಿಸಿದ್ದರು. ಚೀನಾದಲ್ಲಿ ಇದುವರೆಗೂ ಬರೋಬ್ಬರಿ 2,924 ಮಂದಿ ಕೊರೊನಾ ವೈರೆಸ್​​​ ದಾಳಿಗೆ ತುತ್ತಾಗಿದ್ದಾರೆ, 85,469 ಮಂದಿಗೆ ಕೊರೊನಾದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: ನಿಮಗೆ ವಯಸ್ಸಾಗಿದೆ ಎಂದ ಟ್ವೀಟಿಗನಿಗೆ ಮೈಚಳಿ ಬಿಡಿಸಿದ ಸ್ಯಾಂಡಲ್​ವುಡ್​ ಹಿರೋಯಿನ್!

   
  First published: