ಗದಗ​ದಲ್ಲಿ ಕೊರೋನಾ ಪ್ರಕರಣ ಇದ್ದರೂ ಟೆಸ್ಟಿಂಗ್ ಕಿಟ್ ಲಭ್ಯವಿಲ್ಲ: ಹೆಚ್.ಕೆ. ಪಾಟೀಲ್​​ ಆಕ್ರೋಶ

ಗದಗ ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಮೂರು ಉಪಕರಣಗಳಿವೆ .ಆದರೆ ಇವತ್ತಿನವರೆಗೂ ಐಸಿಎಂ ಯವರು ಪರವಾನಿಗೆ‌ ನೀಡುತ್ತಿಲ್ಲ. ನೊಡಲ್ ಆಫೀಸರ್ ನಿಷ್ಕಾಳಜಿಯ ಉತ್ತರ‌ ನೀಡುತ್ತಿದ್ದಾರೆ.

ಮಾಜಿ ಸಚಿವ ಹೆಚ್ ಕೆ ಪಾಟೀಲ​​​

ಮಾಜಿ ಸಚಿವ ಹೆಚ್ ಕೆ ಪಾಟೀಲ​​​

 • Share this:
  ಗದಗ(ಏ. 17): ಗದಗ ಜಿಲ್ಲೆಯಲ್ಲಿ ಈಗಾಗಲೇ ಎರಡು ಕೊರೋನಾ ಪಾಸಿಟಿವ್ ಪ್ರಕರಣ ಬಂದೀವೆ. ಸರ್ಕಾರ ಗದಗ ಜಿಲ್ಲೆಗೆ ಈವರೆಗೂ ಟೆಸ್ಟಿಂಗ್ ಕಿಟ್ ಕೊಡದೇ‌ ಇರುವುದು ದುರ್ದೈವ ಎಂದು ಶಾಸಕ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

  ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬೊರೇಟರಿ ಆಗಲಿ ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ. ಕಳೆದ ಮಾರ್ಚ್ 23 ರಂದೇ ಹೇಳಿದ್ದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದೆ. ಇವತ್ತಿಗೆ ಕೆಎಂಸಿಯಲ್ಲಿ‌ ಲ್ಯಾಬೊರೇಟರಿ ಬಿಟ್ರೆ ಎಲ್ಲಿಯೂ ಲ್ಯಾಬ್ ಆಗಿಲ್ಲ. ಇದು ಸರಕಾರದ ಬೇಜವಾಬ್ದಾರಿತನ ಎಂದು ಸರ್ಕಾರದ ವಿರುದ್ಧ ಶಾಸಕ ಹೆಚ್ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

  ಗದಗ ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಮೂರು ಉಪಕರಣಗಳಿವೆ .ಆದರೆ ಇವತ್ತಿನವರೆಗೂ ಐಸಿಎಂ ಯವರು ಪರವಾನಿಗೆ‌ ನೀಡುತ್ತಿಲ್ಲ. ನೊಡಲ್ ಆಫೀಸರ್ ನಿಷ್ಕಾಳಜಿಯ ಉತ್ತರ‌ ನೀಡುತ್ತಿದ್ದಾರೆ. ಮೂರು ಕುಟುಂಬದಲ್ಲಿ ಈವರೆಗೂ ಶವಗಳನ್ನು ಅಂತ್ಯ ಸಂಸ್ಕಾರ ಮಾಡಿಲ್ಲ. ಆಕಸ್ಮಿಕವಾಗಿ ಸಾವನ್ನಪ್ಪಿದ ಮೂರು ಜನರ ಅಂತ್ಯಸಂಸ್ಕಾರ ಇನ್ನೂ ಆಗಿಲ್ಲ. ಅದಕ್ಕೆ ಕಾರಣ ಅವರ ಟೆಸ್ಟ್ ರಿಪೋರ್ಟ್ ಬರದೇ ಇರೋದು. ಹೀಗಾದ್ರೆ ಸಾವನಪ್ಪಿದ ಕುಟುಂಬಗಳ ಪರಿಸ್ಥಿತಿ ಏನು  ಎಂದು ಪ್ರಶ್ನಿಸಿದ್ದಾರೆ.

  ಇನ್ನು ಪಿಪಿಇ ಕಿಟ್ ಗಳು ಎಲ್ಲ ಕಡೆಯೂ ಲಭ್ಯವಾಗುವಂತಾಗಲಿ. ಆಸ್ಪತ್ರೆಗಳು ಸಿದ್ಧವಾಗಲಿ ಅಂತಾ ಪದೇ ಪದೇ ಹೇಳುತ್ತಿದ್ದೇನೆ. ಐಸಿಎಂಆರ್ ನೆಪ‌ ಹೇಳುವ ಬದಲು ಪ್ರತ್ಯೇಕವಾದ ದಾರಿ ಹುಡುಕಿ. ಐಸಿಎಂಆರ್ ನಮ್ಮ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ. ಹೀಗೆ ಕಾಯುತ್ತಾ ಕುಳಿತರೆ ರಾಜ್ಯದಲ್ಲಿ ಕೊರೋನಾ ಸಂಖ್ಯೆ‌‌ ಜಾಸ್ತಿ ಯಾಗುತ್ತದೆ. ಸಮುದಾಯವಾಗಿ ಕೊರೋನಾ ಹಬ್ಬುತ್ತಿದೆ. ಇಷ್ಟೆಲ್ಲ ಆದರೂ ಸರಕಾರ ಸುಮ್ಮನೆ ಕೂರುವುದು ಸರಿಯಲ್ಲ ಎಂದರು.

  ಇದನ್ನೂ ಓದಿ : Lockdown Effects: ಗದಗ್​ನಲ್ಲಿ ನೆಲಕಚ್ಚಿದ್ದಾನೆ ಯಾಲಕ್ಕಿ ಬಾಳೆ ಬೆಳೆದ ರೈತ

  ಮೈಸೂರಿನಂಥ ಜಿಲ್ಲೆಯಲ್ಲಿನ ಟೆಸ್ಟ್ ಗಳು 400 ರಷ್ಟು ಬಾಕಿಯಿದ್ದು ಟೆಸ್ಟಿಂಗ್ ಕಿಟ್ ತರಿಸಲು ಇಷ್ಟೊಂದು ದಿನ ತೆಗೆದುಕೊಂಡರೇ ಹೇಗೆ. ಜನರ ಮನಸ್ಥಿತಿಯನ್ನು‌ ಯಾಕೆ‌ ಗಮನಿಸುತ್ತಿಲ್ಲ. ಮುಖ್ಯಮಂತ್ರಿಗಳ ಬಳಿ ಈ‌ ಎಲ್ಲ ವಿಷಯಗಳ ಬಗ್ಗೆ ನಾಳೆ ಮುಖ್ಯಮಂತ್ರಿ ಅರ ಬಳಿ ಈ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಚರ್ಚಿಸುತ್ತೇನೆ  ಎಂದು ತಿಳಿಸಿದರು.
  First published: