Crime Alert: ಇಲ್ಲಿಂದ ಯಾವ ಕ್ರಿಮಿನಲ್ ಕೂಡಾ ತಪ್ಪಿಸಿಕೊಳ್ಳೋದು ಅಸಾಧ್ಯ, ಬೆಂಗ್ಳೂರಲ್ಲಿ ರೆಡಿಯಾಗ್ತಿದೆ ಹೈಟೆಕ್ ಸೆಕ್ಯುರಿಟಿ ಸಿಸ್ಟಮ್!

Latest Technology to Hunt Criminals: ಇದು ಎಷ್ಟೊಂದು ಕರೆಕ್ಟಾಗಿ ಕೆಲಸ ಮಾಡುತ್ತೆ ಅಂದ್ರೆ ಮುಖಕ್ಕೆ ಮಾಸ್ಕ್ ಹಾಕಿದ್ರೂ ಕ್ರಿಮಿನಲ್ ಗಳನ್ನು ಬಿಡೋದಿಲ್ಲ...ಒಂದು ವೇಳೆ ಕಮಾಂಡರ್ ಸೆಂಟರ್ ನಲ್ಲಿ WANTED ಅಂತಾ POPUP ಬಂದ್ರೆ ಕಮಾಂಡರ್ ಸೆಂಟರ್ ಸ್ಕ್ಯಾನಿಂಗ್ ಸೆಂಟರ್ ನಲ್ಲಿರೋರಿಗೆ ಮಾಹಿತಿ ರವಾನಿಸಿ ಕ್ರಿಮಿನಲ್ ಗಳನ್ನು ಸೆರೆ ಹಿಡಿಯಲು ಸಹಾಯ ‌ಮಾಡುತ್ತೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ಕ್ರೈಂ, ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗೋದು ಕ್ರಿಮಿನಲ್ (Criminals) ಗಳಿಗೆ ಕಾಮನ್ ..ಅದೂ ಹೆಚ್ಚಾಗಿ ರೈಲುಗಳಲ್ಲೇ ಊರು ಬಿಟ್ಟು ಪರಾರಿಯಾಗೋದು. ಆದ್ರೆ ಇನ್ಮುಂದೆ ಈ ಕ್ರಿಮಿನಲ್ಸ್ ರೈಲ್ವೆ ಸ್ಟೇಷನ್ ಗೆ ಬರೋ ಮೊದಲು ಸಾವಿರ ಸಲ ಯೋಚನೆ ಮಾಡಬೇಕಾಗತ್ತೆ.. ಹೌದು‌ ಬೆಂಗಳೂರಿನ‌ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (KSR Railway Station Bengaluru) ಇನ್ಮುಂದೆ ಕ್ರಿಮಿನಲ್ಸ್‌ ಪಾಲಿಗೆ ದುಃಸ್ವಪ್ನವಾಗಲಿದೆ. ಯಾಕಾದ್ರೂ ಈ ರೈಲ್ವೆ ನಿಲ್ದಾಣಕ್ಕೆ ಬಂದ್ನೋ ಅಂತಾ ಅಂದುಕೊಳ್ತಾರೆ. ಕ್ರೈಂ ಮಾಡಿ ಈಝಿಯಾಗಿ ರೈಲಿನ ಮೂಲಕ ಬೇರೆ ಊರಿಗೆ ಹೋಗಿ ಸೆಟಲ್ ಆಗ್ತೀವಿ ಅಂದುಕೊಂಡ್ರೆ, ರೈಲು ಹತ್ತೋದು ಬಿಡಿ ರೈಲ್ವೆ ನಿಲ್ದಾಣ ಆವರಣಕ್ಕೆ  ಕಾಲಿಡೋವಾಗ್ಲೆ ಕ್ರಿಮಿನಲ್ಸ್  ಅರೆಸ್ಟ್ (Arresting Criminals) ಆಗಲಿದ್ದಾರೆ... ಅಷ್ಟೊಂದು ಆಕ್ಟೀವ್ ಆಗಿದೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್...ಇದೀಗ Railway Protection Force ಹೊಸ ಯೋಜನೆಯೊಂದನ್ನ ಜಾರಿಗೆ ತಂದಿದೆ ಅದುವೇ RPF -1 ಯೋಜನೆ.

  ಒಂದಲ್ಲ, ಎರಡಲ್ಲ...157 ಸಿಸಿ ಕ್ಯಾಮೆರಾಗಳು

  ಸುಮಾರು 2.4 ಕೋಟಿ ವೆಚ್ಚದ ಈ ಯೋಜನೆಯಲ್ಲಿ‌ 157 ಸಿಸಿಟಿವಿಗಳನ್ನು ರೈಲ್ವೆ ‌ನಿಲ್ದಾಣದ ಆವರಣ ಸೇರಿದಂತೆ ಎಲ್ಲಾ ಕಡೆ ಅಳವಡಿಸಲಾಗಿದೆ. ಅಂದ ಹಾಗೆ ಇದು‌ ಅಂತಿಂಥಾ ಕ್ಯಾಮರಾ ಅಲ್ಲ. ಇದರ ಹೆಸರೇ FACE RECOGNIZE SPOT ಅಂತ. ಹೆಸರೇ ಹೇಳುವಂತೆ ಇದು ಮುಖವನ್ನು ಚೆನ್ನಾಗಿ ಗುರುತಿಸುತ್ತೆ.. ಅಷ್ಟು ಮಾತ್ರ ಅಲ್ಲ ನಿಮ್ಮ ಫುಲ್ ದೇಹವನ್ನೇ ಸ್ಕ್ಯಾನ್ ಮಾಡುತ್ತೆ. ಈ ಕ್ಯಾಮರಾದಲ್ಲಿ ಕ್ರಿಮಿನಲ್ ಗಳ ಡೇಟಾಗಳನ್ನು ಸೇವ್ ಮಾಡಿ ಇಡಲಾಗುತ್ತೆ. ಅದು ಈ ಡೇಟಾದಲ್ಲಿರೋ ಒಂದು ಮಾಹಿತಿ ಸ್ಕ್ಯಾನ್ ಮಾಡಿರೋ ವ್ಯಕ್ತಿಯಲ್ಲಿ ಕಂಡು ಬಂದ್ರೆ ಸಾಕು ಕಮಾಂಡರ್ ಸೆಂಟರ್ ನಲ್ಲಿರೋ ಸಿಬ್ಬಂದಿಗಳಿಗೆ WANTED ಅನ್ನೋ ಮಾಹಿತಿ POP UP ಮಾಡುತ್ತೆ.

  ಇದನ್ನೂ ಓದಿ: ಸಾಯುತ್ತೇನೆಂದು ಹೆದರಿಸಲು ಹೋದಾತ ಯಮಲೋಕ ಸೇರಿದ..!

  ಮುಖ ಮುಚ್ಚಿಕೊಂಡಿದ್ರೂ ಕಂಡುಹಿಡಿಯುತ್ತೆ

  ಇದಕ್ಕಾಗಿ ಅಂತಾನೆ ಮೂರು ಜನ ಸಿಬ್ಬಂದಿ ಕಮಾಂಡರ್ ‌ಸೆಂಟರ್ ನಲ್ಲಿ‌ ಕೆಲಸ ಮಾಡ್ತಿರ್ತಾರೆ. ಈ ಮೂಲಕ ಕ್ರಿಮಿನಲ್ ಗಳನ್ನು ಸೆರೆ ಹಿಡಿಯೋಕೆ ಸಹಾಯ ಮಾಡುತ್ತೆ...ಇದು ಎಷ್ಟೊಂದು ಕರೆಕ್ಟಾಗಿ ಕೆಲಸ ಮಾಡುತ್ತೆ ಅಂದ್ರೆ ಮುಖಕ್ಕೆ ಮಾಸ್ಕ್ ಹಾಕಿದ್ರೂ ಕ್ರಿಮಿನಲ್ ಗಳನ್ನು ಬಿಡೋದಿಲ್ಲ...ಒಂದು ವೇಳೆ ಕಮಾಂಡರ್ ಸೆಂಟರ್ ನಲ್ಲಿ WANTED ಅಂತಾ POPUP ಬಂದ್ರೆ ಕಮಾಂಡರ್ ಸೆಂಟರ್ ಸ್ಕ್ಯಾನಿಂಗ್ ಸೆಂಟರ್ ನಲ್ಲಿರೋರಿಗೆ ಮಾಹಿತಿ ರವಾನಿಸಿ ಕ್ರಿಮಿನಲ್ ಗಳನ್ನು ಸೆರೆ ಹಿಡಿಯಲು ಸಹಾಯ ‌ಮಾಡುತ್ತೆ.

  ಕ್ರಿಮಿನಲ್ಸ್ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ

  ಇದು ಕೇವಲ ಕ್ರಿಮಿನಲ್ ಗಳನ್ನು ಸ್ಕ್ಯಾನ್ ಮಾಡೋದಲ್ಲ ಎಲ್ಲಾ ರೈಲು ಪ್ರಯಾಣಿಕರನ್ನೂ ಸೆರೆ ಹಿಡಿಯುತ್ತದೆ. ಈ ಕ್ಯಾಮರಾದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಸ್ಟಾಂಡರ್ಡ್  ಟೆಕ್ನಾಲಜಿ ಬಳಸಲಾಗಿದೆ. ಅಲ್ಲದೆ ಈಗಲ್ ಐ ಸಾಫ್ಟ್‌ವೇರ್ ಬಳಸಲಾಗಿದೆ.ಈ ಕ್ಯಾಮರಾ ಕ್ರಿಮಿನಲ್ ಗಳನ್ನು ಸ್ಕಾನ್ ಮಾಡೋದಲ್ಲದೆ ವಾಹನಗಳನ್ನೂ ಸ್ಕಾನ್ ಮಾಡುತ್ತದೆ.

  ಇದನ್ನೂ ಓದಿ: ರೈಲ್ವೆ ನಿಲ್ದಾಣಗಳಲ್ಲಿ ಇನ್ಮುಂದೆ ಶುದ್ಧ ಗಾಳಿ ಉಸಿರಾಡಬಹುದು, ಗಾಳಿ ಶುದ್ಧೀಕರಿಸುವ ಯಂತ್ರ ಅಳವಡಿಸಲಿದೆ ಬೆಂಗಳೂರಿನ ಸಂಸ್ಥೆ!

  ಇದರಿಂದಾಗಿ ಬೆಂಗಳೂರಿನ ಕ್ರೈಂ ಪೊಲೀಸರಿಗೂ ಸಹಾಯವಾಗಲಿದೆ...ಈಗಾಗಲೇ ಈ ಕ್ಯಾಮೆರಾ ದಿಂದ ಹಲವು ಆರೋಪಿಗಳ ಬಂಧನ ಕೂಡಾ ಆಗಿದೆ..157 ಕ್ಯಾಮರಾ ಗಳನ್ನು ರೈಲು ನಿಲ್ದಾಣದ ಸುತ್ತಮುತ್ತ ಅಳವಡಿಸಲಾಗಿದೆ..ಇದು ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ..ಒಟ್ಟಿನಲ್ಲಿ ಕ್ರೈಂ ಮಾಡಿ ರೈಲು ಮುಖಾಂತರ ತಪ್ಪಿಸಿಕೊಂಡು ಹೋಗಬಹುದು ಅಂತ ಪ್ಲಾನ್ ಮಾಡೋ ಖತರ್ನಾಕ್ ಗಳಿಗೆ ಈ ಕ್ಯಾಮರಾ ಕಿಲಾಡಿಯೋಂಕ ಕಿಲಾಡಿ ಅನ್ನೋದ್ರಲ್ಲಿ ಡೌಟ್.

  (ವರದಿ: ಮಂಜುನಾಥ್ ಸಿ, ಬೆಂಗಳೂರು)
  Published by:Soumya KN
  First published: