ರಾಯಚೂರಿನಲ್ಲಿ ಗೋಪಿ ಚಂದನ ಗಣೇಶ ಮೂರ್ತಿ: ಭಾರೀ ಬೇಡಿಕೆ

ಈ ವರ್ಷ 300 ಗಣೇಶ ತಯಾರಿಸಿದ್ದು ಗುಜರಾತ್​​ ಸೇರಿದಂತೆ ಹೊರರಾಜ್ಯದಲ್ಲಿ ಬೇಡಿಕೆ ಇದೆ. ಆದರೆ ಲಾಕ್​​ಡೌನ್ ಹಿನ್ನೆಲೆಯಲ್ಲಿ ಕಳುಹಿಸಲು ಆಗುತ್ತಿಲ್ಲ. ಈಗ ಬೆಂಗಳೂರು, ಕಲಬುರಗಿ ಹಾಗು ಸ್ಥಳೀಯವಾಗಿ ಗಣೇಶನ ಖರೀದಿಸಲು ಜನರು ಮುಂದಾಗಿದ್ದಾರೆ.

ಗೋಪಿ ಚಂದನ ಗಣೇಶ

ಗೋಪಿ ಚಂದನ ಗಣೇಶ

  • Share this:
ರಾಯಚೂರು(ಆ.16): ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬ ಬಂದಿದೆ. ಆದರೆ ಈ ಬಾರಿ ಸಾರ್ವಜನಿಕವಾಗಿ ಅದ್ದೂರಿ ಗಣೇಶೋತ್ಸವ ಆಚರಿಸುವುದು ಅನುಮಾನ. ಬದಲಿಗೆ ಮನೆ ಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸುತ್ತಾರೆ. ಇದೇ ಸಂದರ್ಭದಲ್ಲಿ ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದಿರುವ ಗೋಪಿ ಚಂದನದಿಂದ ಗಣೇಶ ತಯಾರಾಗಿದ್ದಾರೆ. ಈ ಗಣೇಶನಿಗೆ ಬಹು ಬೇಡಿಕೆ ಇದೆ.  ಗೋಪಿ ಚಂದನವನ್ನು ಕಲಿಸಿ ಹದ ಮಾಡಿ ಅದಕ್ಕೆ ಗಣೇಶ ಮೂರ್ತ ರೂಪ ನೀಡುತ್ತಿರುವ ರಾಯಚೂರು ನಗರದಲ್ಲಿಯೇ ಎಂಬುದು ಸಂತಸದ ಸಂಗತಿ.

ಇಲ್ಲಿನ ಜಯತೀರ್ಥದಾಸರ ಕುಟುಂಬವು ಈ ಗೋಪಿ ಚಂದನದಲ್ಲಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ಬ್ಯುಸಿಯಾಗಿದೆ. ಜಯತೀರ್ಥರ ಮಗ ರಘೋತ್ತಮದಾಸರು ಇಂಟಿರಿಯರ್ ಡಿಸೈನ್ ಮಾಡುವ ಉದ್ಯೋಗ, ಅವರ ಮೊದಲು ಮಣ್ಣಿನಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಇದು ಅವರ ತಾಯಿಯ ತವರ ಮನೆ ಕೊಪ್ಪಳದ ಕಿನ್ನಾಳದಲ್ಲಿ ಅಜ್ಜಿ ಮನೆಯಲ್ಲಿ ಕಲಿತಿದ್ದು, ಮಣ್ಣಿನ ಗಣೇಶ ಎಲ್ಲರೂ ಮಾಡುತ್ತಾರೆ. ಆದರೆ ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಗೋಪಿ ಚಂದನದಲ್ಲಿ ಯಾಕೆ ಗಣಪನ ತಯಾರಿಸಬಾರದು ಎಂದುಕೊಂಡು ಕಳೆದ ವರ್ಷದಿಂದ ಗೋಪಿ ಚಂದನದಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

ಪವಿತ್ರ ವಾದ ಗೋಪಿ ಚಂದನದಿಂದ ತಯಾರಿಸುವ ಗಣೇಶನ ಪೂಜಿಸುವದರಿಂದ ತಯಾರಿಸಿದ ತನ್ನ ಮಗನಿಗೂ ಒಂದಿಷ್ಟು ಒಳ್ಳೆಯದಾಗಲಿ ಎಂದು ರಘೋತ್ತಮದಾಸರ ತಾಯಿ ಆಶಿಸಿದ್ದಾರೆ. ಗೋಪಿ ಚಂದನವು ಶ್ರೀಕೃಷ್ಣನಿಗೆ ಗೋಪಿಕರು ಹಚ್ವಿದರು ಎಂಬ ಪ್ರತೀತಿ, ಪುರಾಣದಲ್ಲಿ ವಿಶ್ವಂಬರವಾದ ಪರಮಾತ್ಮ ಗಣೇಶನನ್ನು ಗೋಪಿಚಂದನದಲ್ಲಿ ಮಾಡಿದ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೋಪಿ ಚಂದನದಲ್ಲಿ ಗಣೇಶನ ಪೂಜಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದೆ.

ಹೀಗಾಗಿ ಕಳೆದ ವರ್ಷದಿಂದ‌ ಗೋಪಿ ಚಂದನದಲ್ಲಿ ಗಣೇಶನ ತಯಾರಿಸಿದ್ದು ಇದಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದು ಈಗ ರಾಜ್ಯ ಹಾಗು ಹೊರರಾಜ್ಯದಲ್ಲಿ ಗೋಪಿಚಂದನ ಗಣಪನಿಗೆ ಬಹುಬೇಡಿಕೆ ಇದೆ. ಒಂದು ಗಣೇಶನಿಗೆ 6 ಕಜಿ ಗೋಪಿಚಂದನ ಬೇಕಾಗುತ್ತದೆ. ಒಂದು ಗಣೇಶ ತಯಾರಿಸಲು ಒಟ್ಟು 750 ರೂಪಾಯಿಗಿಂತ ಅಧಿಕ ಖರ್ಚಾಗುತ್ತಿದೆ. ಈಗ ಅವರು ಒಂದು ಸಾವಿರ ರೂಪಾಯಿಗೆ ಗಣೇಶನನ್ನು ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: Vaishno Devi Yatra​: ಐದು ತಿಂಗಳ ಬಳಿಕ ಇಂದಿನಿಂದ ವೈಷ್ಣೋ ದೇವಿ ಯಾತ್ರೆ ಆರಂಭ

ಈ ವರ್ಷ 300 ಗಣೇಶ ತಯಾರಿಸಿದ್ದು ಗುಜರಾತ್​​ ಸೇರಿದಂತೆ ಹೊರರಾಜ್ಯದಲ್ಲಿ ಬೇಡಿಕೆ ಇದೆ. ಆದರೆ ಲಾಕ್​​ಡೌನ್ ಹಿನ್ನೆಲೆಯಲ್ಲಿ ಕಳುಹಿಸಲು ಆಗುತ್ತಿಲ್ಲ. ಈಗ ಬೆಂಗಳೂರು, ಕಲಬುರಗಿ ಹಾಗು ಸ್ಥಳೀಯವಾಗಿ ಗಣೇಶನ ಖರೀದಿಸಲು ಜನರು ಮುಂದಾಗಿದ್ದಾರೆ. ಇಡೀ ಕುಟುಂಬ ಈಗ ಗೋಪಿ ಚಂದನ ಗಣೇಶ ತಯಾರಿಯಲ್ಲಿ ತೊಡಗಿದೆ. ಈ ಬಾರಿ ಪರಿಸರ ಸ್ನೇಹಿ ಗಣಪ ಪ್ರತಿಷ್ಠಿಸಲು ಹೆಚ್ಚು ಜನರು ಮುಂದಾಗಿದ್ದಾರೆ. ಅದರಲ್ಲಿ ಗೋಪಿ ಚಂದನವು ಪಕ್ಕ ಪರಿಸರ ಸ್ನೇಹಿಯಾಗಿದ್ದು, ಗಣೇಶ ಮೂರ್ತಿ ವಿಸರ್ಜನೆಯ ನಂತರ ಗೋಪಿ ಚಂದನ ಬಳಕೆ ಮಾಡಬಹುದಾಗಿದೆ. ಮುಂಬರುವ ಗಣೇಶ ಹಬ್ಬಕ್ಕೆ ಜನರು ತಯಾರಾಗುತ್ತಿದ್ದಾರೆ. ಅದರಲ್ಲಿ ಗೋಪಿ ಚಂದನ ಗಣೇಶ ತಯಾರಿಕೆಯೂ ಸೇರಿದೆ.
Published by:Ganesh Nachikethu
First published: