ಕೊರೋನಾ ವೈರಸ್​​ ನಿಯಂತ್ರಣಕ್ಕೆ ಅಗತ್ಯ ಕ್ರಮ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಹೈ ಅಲರ್ಟ್

ಇನ್ನು, ಚೆಕ್ ಪೋಸ್ಟ್​ನಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ಬಳಕೆಗೆ ಅಗತ್ಯವಾದ ತರಕಾರಿ, ಹಾಲು ಹಾಗೂ ದಿನಸಿ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಕಳೆದ 24 ಗಂಟೆಯಿಂದ ಹೀಗೆ ಪೊಲೀಸರು ತೀವ್ರ ನಿಗಾವಹಸಿದ್ದಾರೆ.

news18-kannada
Updated:March 25, 2020, 3:04 PM IST
ಕೊರೋನಾ ವೈರಸ್​​ ನಿಯಂತ್ರಣಕ್ಕೆ ಅಗತ್ಯ ಕ್ರಮ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಹೈ ಅಲರ್ಟ್
ಪೊಲೀಸರ ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಮಾ.25): ಕೊರೋನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಮಹಾರಾಷ್ಟ್ರ- ಕರ್ನಾಟಕ ಗಡಿಭಾಗದಲ್ಲಿ ಹೈ ಅಲರ್ಟ್​​​ ಘೋಷಿಸಲಾಗಿದೆ. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಬೋರಗಾಂವ್​​ ಬಳಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಜತೆಗೆ ಪೊಲೀಸ್​ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್​​​ ನೇತೃತ್ವದ ತಂಡ ಎಲ್ಲವನ್ನು ಪರಿಶೀಲಿಸುತ್ತಿದೆ. ಈ ಚೆಕ್​ ​ಪೋಸ್ಟ್​​ನಲ್ಲಿ ಪೊಲೀಸರ ಜತೆಗೆ ಬೋರಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು ಎಲ್ಲರನ್ನು ತಪಾಸಣೆ ಮಾಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಚಾಲಕರು ಮತ್ತು ಕ್ಲೀನರುಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಸದ್ಯ ಮಹಾರಾಷ್ಟ್ರದಿಂದ ಕರ್ನಾಟಕ್ಕೆ ಬರುವಂತಹ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಹೀಗಿದ್ದರೂ ಯಾವುದಾದರೂ ವಾಹನಗಳು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುವುದಾದರೆ ಅದನ್ನು ತಡೆ ಹಿಡಿಯಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್​​ಗೆ ಸಾಕಷ್ಟು ಮಂದಿ ಬಲಿಯಾಗಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಯಾರು ಮಹಾರಾಷ್ಟ್ರಕ್ಕೆ ಹೋಗುವ ಆಗಿಲ್ಲ ಎಂದು ಮುಂಜಾಗೃತ ಕ್ರಮ ತೆಗೆದುಕೊಂಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಸೆಕ್ಷನ್​​ 144 ಜಾರಿಯಲ್ಲಿದೆ. ಸಾರ್ವಜನಿಕರು ಅನಗತ್ಯ ಮನೆಯಿಂದ ಹೊರಗೆ ಬಂದರೆ ಕೇಸ್​ ಹಾಕಲಾಗುತ್ತಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತಿದೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಖರೀದಿಗೆ ಟೈಮ್ ಫಿಕ್ಸ್?; ಶೀಘ್ರವೇ ಹೊರಬೀಳಲಿದೆ ಅಂತಿಮ ನಿರ್ಧಾರ

ಇನ್ನು, ಚೆಕ್ ಪೋಸ್ಟ್​ನಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ಬಳಕೆಗೆ ಅಗತ್ಯವಾದ ತರಕಾರಿ, ಹಾಲು ಹಾಗೂ ದಿನಸಿ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಕಳೆದ 24 ಗಂಟೆಯಿಂದ ಹೀಗೆ ಪೊಲೀಸರು ತೀವ್ರ ನಿಗಾವಹಸಿದ್ದಾರೆ.

ಕೊರೋನಾ ವೈರಸ್​​ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಜನ ಕೈ ಜೋಡಿಸಬೇಕಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. 21 ದಿನಗಳ ಕಾಲ ಇಡೀ ದೇಶ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಹಾಗಾಗಿ ಕೇಂದ್ರದ ಆದೇಶವನ್ನು ಪಾಲಿಸಿ 21 ದಿನಗಳ ಕಾಲ ಮನೆಯಲ್ಲೇ ಇರಬೇಕಿದೆ. ನಾವು ಮುಂದಿನ 21 ದಿನ ದೇಶಕ್ಕಾಗಿ ಮನೆಯಲ್ಲೇ ಇರದೆ ಹೋದಲ್ಲಿ, ಭಾರತವೂ 21 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆಯೇ ಹೇಳಿದ್ದರು.

 

 
First published: March 25, 2020, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading