ಕಲಬುರ್ಗಿಯಲ್ಲಿ ಹೈ ಅಲರ್ಟ್​​ ಘೋಷಣೆ; ಮೃತ ವೃದ್ಧನ ಕುಟುಂಬಸ್ಥರು ಸೇರಿ 76 ಜನರ ಮೇಲೆ ನಿಗಾ

ಮೃತನ ಅಂತ್ಯಕ್ರಿಯೆಗೆ ಬಂದಿದ್ದ ಎಲ್ಲರನ್ನೂ ಪತ್ತೆ ಮಾಡಲಾಗಿದೆ. ಒಟ್ಟು 71 ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರೆಂದು ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್​ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲಬುರ್ಗಿ(ಮಾ.14): ಕೊರೋನಾ ಸೋಂಕಿಗೆ 76 ವರ್ಷದ ವೃದ್ಧ ಬಲಿಯಾದ ಹಿನ್ನೆಲೆ, ಜಿಲ್ಲೆಯಾದ್ಯಂತ ಹೈ ಅಲರ್ಟ್​​ ಘೋಷಣೆ ಮಾಡಲಾಗಿದೆ. ಅಲ್ಲದೆ, ಮೃತನ ಕುಟುಂಬಸ್ಥರು ಸೇರಿ ಒಟ್ಟು 76 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

  ಮೃತನ ಕುಟುಂಬದ ನಾಲ್ವರನ್ನು ಈಗಾಗಲೇ ತಪಾಸಣೆಗೆ ಒಳಪಡಿಸಿ ಅವರ ಗಂಟಲಿನ ಮಾದರಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಆದರೆ, ವರದಿ ಇನ್ನೂ ಬಂದಿಲ್ಲ. ಇದಲ್ಲದೆ, ಮೃತ ವ್ಯಕ್ತಿ ನೇರವಾಗಿ ಸಂಪರ್ಕ ಹೊಂದಿದ್ದ ಹಾಗೂ ಆತನ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಒಟ್ಟು 76 ಜನರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದೆ.

  ಜನ ಗುಂಪಾಗಿ ಸೇರಬೇಡಿ, ತುರ್ತು ಕೆಲಸ ಹೊರತು ಪಡಿಸಿ ಮನೆಯಿಂದ ಹೊರ ಬರಬೆಡಿ ಕಲಬುರ್ಗಿ ಭೇಟಿಯನ್ನು ಆದಷ್ಟು ರದ್ದು ಮಾಡಿ. ಇಲ್ಲಿಗೆ ಅನಗತ್ಯವಾಗಿ ಬರಬಾರದು. ಈಗಾಗಲೇ ಬೀದಿ ಬದಿ ವ್ಯಾಪಾರವನ್ನು ನಿರ್ಬಂಧ ಮಾಡಲಾಗಿದೆ. ಸರಳ ಮದುವೆ ಮಾಡಿ, ವಿದೇಶಕ್ಕೆ ಹೋಗಿ ಬಂದವರು ತಿಳಿಸಬೇಕು. ಸಾರಿಗೆ ಬಸ್ ಸಂಖ್ಯೆ ಕಡಿಮೆ ಮಾಡಬೇಕು.  ಸರ್ಕಾರಿ ಕಚೇರಿ ಇರುತ್ತೆ, ಆದರೆ ಸೇವೆ ಸಿಗಲ್ಲ ಎಂದು ಜಿಲ್ಲಾಧಿಕಾರಿ ಶರತ್​ ಬಿ ಮನವಿ ಮಾಡಿದ್ದಾರೆ.

  ಕೊರೋನಾ ವೈರಸ್​ ಹರಡಿದವರ ಮೇಲೆ ಕೊಲೆ ಪ್ರಕರಣ ದಾಖಲು; ಇಟಲಿ ಸರ್ಕಾರದಿಂದ ಹೊಸ ಕಾನೂನು

  ಮೃತ ವೃದ್ಧನ ಜೊತೆ ಸಂಪರ್ಕವಿದ್ದವರ ಮೇಲೆ ನಿಗಾ ವಹಿಸಲಾಗಿದೆ. ಒಟ್ಟು 46 ಜನರ ಮೇಲೆ ಗಮನ ಹರಿಸಲಾಗಿದೆ. 46ರ ಪೈಕಿ ನಾಲ್ವರಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದೆ. ಹೀಗಾಗಿ ಈ ನಾಲ್ವರ ಗಂಟಲು ದ್ರವವನ್ನು ಲ್ಯಾಬ್​ಗೆ ರವಾನಿಸಲಾಗಿದೆ.  ಮೃತನ ಅಂತ್ಯಕ್ರಿಯೆಗೆ ಬಂದಿದ್ದ ಎಲ್ಲರನ್ನೂ ಪತ್ತೆ ಮಾಡಲಾಗಿದೆ. ಒಟ್ಟು 71 ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರೆಂದು ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್​ ಮಾಹಿತಿ ನೀಡಿದ್ದಾರೆ.

  ಕೊರೋನಾ ವೈರಸ್ ಹಿನ್ನೆಲೆ ಕಾಲ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದೆ. ಮದುವೆ ಇದ್ದವರು ಅನುಮತಿ ಪಡೆದು ಕುಟುಂಬಸ್ಥರಷ್ಟೇ ಮದುವೆಯಲ್ಲಿ ಭಾಗಿ ಆಗಬಹುದು.  ಹೊರ ದೇಶಗಳಿಗೆ ಹೋಗಿ ವಾಪಸ್ ಬಂದವರು ಮಾಹಿತಿ ನೀಡಿ ತಪಾಸಣೆಗೆ ಒಳಗಾಗಿ. ಆರ್​ಟಿಓ, ತಹಶೀಲ್ದಾರ್​​​​ ಕಛೇರಿ ಹೀಗೆ ಜನರ ಕೆಲಸಗಳಾಗುವ ಸರ್ಕಾರಿ ಕಚೇರಿಗಳಲ್ಲಿ ಸೇವೆಯನ್ನು ಸ್ಥಗಿತ ಮಾಡಲಾಗಿದೆ ಎಂದು ಅವರು ತಿಳಿಸಿದರು.

  ಡಿಕೆಶಿ ಕೆಪಿಸಿಸಿ ಪಟ್ಟ; ಹಾಸನ, ರಾಮನಗರ, ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಮಂಕಾಗಲಿದೆಯಾ ಬಿಜೆಪಿ ಪಕ್ಷ ಸಂಘಟನೆ?
  First published: