ಬೆಂಗಳೂರಿನ ಹೈ ಫೈ ಸಲೂನ್​ಗಳಲ್ಲಿ ಸ್ವಚ್ಛತೆ ಹೇಗಿದೆ ಗೊತ್ತಾ? ಕೊರೊನಾ ಕಲಿಸಿರುವ ಸ್ಯಾನಿಟೈಸೇಶನ್ ಪಾಠಗಳು

ಸಲೂನ್​ಗಳನ್ನು ತೆರೆಯಲು ಅವಕಾಶ ನೀಡಬಹುದು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ತಮ್ಮ ಸಿಬ್ಬಂದಿಗೆ ಆನ್ ಲೈನ್ ಮೂಲಕವೇ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಸುಮಾರು‌ 15 ದಿನಗಳ ವಿಶೇಷ ತರಬೇತಿ ನೀಡಿದ್ದಾರೆ.

ಬಾಡಿಕ್ರಾಫ್ಟ್ ಸಲೂನ್

ಬಾಡಿಕ್ರಾಫ್ಟ್ ಸಲೂನ್

  • Share this:
ಬೆಂಗಳೂರು(ಮೇ 23): ಎರಡು ತಿಂಗಳಾಗಿದೆ ಸಲೂನ್​ಗೆ, ಸ್ಪಾ ಗೆ ಹೋಗಿ... ಈ ಲಾಕ್ ಡೌನ್ ತೆರವಾದ ಕೂಡಲೇ ಮೊದಲು ಹೇರ್ ಕಟ್ ಮಾಡಿಸಬೇಕು, ಪೆಡಿಕ್ಯೂರ್ ಆಗ್ಬೇಕು ಅಂತೆಲ್ಲಾ ಪ್ಲಾನ್ ಮಾಡಿದ್ರೆ ಅಲ್ಲಿರೋ ನಿಯಮಗಳನ್ನ ಪಾಲಿಸೋಕೂ ನೀವು ಸಿದ್ಧ ಆಗಬೇಕು. ಪ್ರತಿಷ್ಠಿತ ಲ್ಯಾವೆಲ್ಲೆ ರಸ್ತೆಯಲ್ಲಿರೋ ಬಾಡಿಕ್ರಾಫ್ಟ್ ಸಲೂನ್ & ಸ್ಪಾ ಶುಚಿತ್ವ ಮತ್ತು ರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ನೀವು ಮೊದಲೇ ಅಪಾಯಿಂಟ್ ಮೆಂಟ್ ತಗೊಳದೇ ಇದ್ರೆ ನಿಮಗೆ ನೋ ಎಂಟ್ರಿ. ಅಪಾಯಿಂಟ್ಮೆಂಟ್ ತೆಗೆದುಕೊಂಡು ಬಂದ್ದರೆ ಗೇಟ್ ಬಳಿಯೇ ಇರೋ ಸೆಕ್ಯೂರಿಟಿ ಮೊದಲು ಹ್ಯಾಂಡ್ ಸ್ಯಾನಿಟೈಸರ್ ಕೊಟ್ಟು ಕೈಯನ್ನ ನೀಟಾಗಿ ಒರೆಸಿಕೊಳ್ಳೋಕೆ ಹೇಳ್ತಾರೆ. ನಂತರ ಅವರು ಕೊಡೋ ಪಿಪಿಇ ಕಿಟ್ ಅನ್ನ ನೀವು ಅಲ್ಲೇ ಧರಿಸಬೇಕು. ಭುಜದಿಂದ ಕಾಲಿನವರೆಗೂ ಇರುವ ಈ ದಿರಿಸು ನಿಮ್ಮ ಶೂಗಳನ್ನೂ ಮುಚ್ಚುತ್ತದೆ. ಕುಳಿತುಕೊಂಡು ನೀವು ಇವುಗಳನ್ನು ಹಾಕಿಕೊಳ್ಳೋಕೆ ಕುರ್ಚಿ ಇಟ್ಟಿದ್ದಾರೆ.‌ ನೀವು ಪಿಪಿಇ ಹಾಕಿಕೊಂಡು ಪಾರ್ಲರ್ ಒಳಗೆ ಹೋಗ್ತಿದ್ದಂತೆ ನೀವು ಕುಳಿತಿದ್ದ ಕುರ್ಚಿಯನ್ನು ರಾಸಾಯನಿಕ ಸಿಂಪಡಿಸಿ ಸ್ಯಾನಿಟೈಸ್ ಮಾಡ್ತಾರೆ.

ಒಳಗೆ ಕಾಲಿಟ್ಟ ಕೂಡಲೇ ಬಿಸಿಲಲ್ಲಿ ಬಂದಿರೋ ನಿಮಗೆ ಕೂಲ್ ಅನಿಸೋದು ಗ್ಯಾರಂಟಿ. ಎಸಿ ಇಲ್ಲಿ ಆನ್ ಆಗಿದೆ. ಆದ್ರೆ ಅದ್ರ ಟೆಂಪರೇಚರ್ 23 ಡಿಗ್ರಿಗೆ ಫಿಕ್ಸಾಗಿರುತ್ತದೆ. ವೇಯ್ಟಿಂಗ್ ಏರಿಯಾ ಫುಲ್ ಕ್ಲೋಸ್.‌ ಹಾಗಾಗಿ ನೀವು ಕುಳಿತು ಕಾಯುವ ಪ್ರಮೇಯವೇ ಇಲ್ಲ. ನೇರವಾಗಿ ನಿಮ್ಮ ಸರ್ವಿಸ್ ಚೇರ್ ಬಳಿ ಕರೆದುಕೊಂಡು ಹೋಗ್ತಾರೆ. ನೀವು ಮಾಸ್ಕ್, ಗ್ಲೌಸ್, ಪಿಪಿಇ ಹಾಕಿಕೊಂಡೇ ಆರಾಮಾಗಿ ರಿಲ್ಯಾಕ್ಸ್ ಆಗಬಹುದು. ನಿಮಗೆ ಸರ್ವಿಸ್ ಕೊಡುವ ಸಿಬ್ಬಂದಿ ಕೂಡಾ ಮಾಸ್ಕ್, ಗ್ಲೌಸ್, ಕ್ಯಾಪ್, ಪಿಪಿಇ ಎಲ್ಲವನ್ನೂ ಹಾಕಿಕೊಂಡೇ ಇರ್ತಾರೆ. ಮತ್ತೊಮ್ಮೆ ಗ್ಲೌಸ್ ಮೇಲೆ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಕೆಲಸ ಶುರು ಮಾಡುತ್ತಾರೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್ ಸರ್ಜರಿ; 25 ಡಿವೈಎಸ್​ಪಿ, 24 ಇನ್​ಸ್ಪೆಕ್ಟರ್​ಗಳ ವರ್ಗಾವಣೆ

ಮೊದಲೆಲ್ಲಾ ಸಿಗುತ್ತಿದ್ದ ಎಲ್ಲಾ ಸೇವೆಗಳೂ ಈಗ ಲಭ್ಯವಿಲ್ಲ. ಹೇರ್ ಸ್ಪಾ, ಹೇರ್ ಕಟ್ ಮುಂತಾದ ಕೆಲವೇ ಕೆಲವು ಸೇವೆಗಳನ್ನ ಮಾತ್ರ ನೀವು ಪಡೆದುಕೊಳ್ಳಬಹುದು. ಮೆನಿಕ್ಯೂರ್, ವ್ಯಾಕ್ಸಿಂಗ್, ಫೇಶಿಯಲ್, ಬಾಡಿ ಮಸಾಜ್, ತ್ರೆಡಿಂಗ್ ಇವೆಲ್ಲಾ ಇನ್ನೂ ಆರಂಭವಾಗಿಲ್ಲ. ಗ್ರಾಹಕರಿಗೆ ಬಹಳ ಹತ್ತಿರವಿದ್ದು ನೇರವಾಗಿ ಅವರ ಚರ್ಮಕ್ಕೆ ತಾಕುವಂತಹ ಯಾವುದೇ ಸೇವೆಯನ್ನು ಇಲ್ಲಿ ಈಗ ನೀಡೋದಿಲ್ಲ. ಇದ್ದುದರಲ್ಲೇ ನೀವು ಆರಿಸಿದ ಸರ್ವಿಸ್ ಪಡೆದ ನಂತರ ಎದ್ದು ಸೀದಾ ಬಿಲ್ಲಿಂಗ್ ಕೌಂಟರ್ ಕಡೆ ಹೋದ್ರೆ ಅಲ್ಲಿ ಕಂಪ್ಲೀಟ್ ಆನ್​ಲೈನ್ ಪೇಮೆಂಟ್ ಮಾತ್ರ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ ಯಾವುದಾದರೂ ಪೇಮೆಂಟ್ ಆಪ್​ನಿಂದ ಹಣ ಪಾವತಿಸೋ ಸೌಕರ್ಯ ಇಲ್ಲಿದೆ.

ಸಲೂನ್​ನಿಂದ ಹೊರ ಹೋದ ನಂತರ ನೀವು ಹಾಕಿಕೊಂಡಿದ್ದ ಪಿಪಿಇ, ಗ್ಲೌಸ್, ಮಾಸ್ಕ್ ಎಲ್ಲವನ್ನೂ ಬಾಗಿಲ ಹೊರಗೆ ಬಿಚ್ಚಿ ಅಲ್ಲೇ ಇಟ್ಟಿರೋ ದೊಡ್ಡ ಕಸದ ಬುಟ್ಟಿಗೆ ಎಸೆಯಬೇಕು. ಮತ್ತೊಮ್ಮೆ ಸ್ಯಾನಿಟೈಸರ್ ಬಳಸಿ ಸ್ವಚ್ಛವಾಗಿ ಹೋಗಬಹುದು. ಇಲ್ಲಿನ ಸೇವೆಗಳ ದರ ಹೆಚ್ಚಿಸಿಲ್ಲ. ಆದ್ರೆ ಕೊಡುವ ಪಿಪಿಇ ಬೆಲೆ 160 ರೂ ಮಾತ್ರ ಗ್ರಾಹಕರೇ ತೆರಬೇಕು.

ಇನ್ನೇನು ಲಾಕ್ ಡೌನ್ ಮುಂದಿನ ಹಂತ ತೆರವಾದಾಗ ಸಲೂನ್​ಗಳನ್ನು ತೆರೆಯಲು ಅವಕಾಶ ನೀಡಬಹುದು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ತಮ್ಮ ಸಿಬ್ಬಂದಿಗೆ ಆನ್ ಲೈನ್ ಮೂಲಕವೇ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಸುಮಾರು‌ 15 ದಿನಗಳ ವಿಶೇಷ ತರಬೇತಿ ನೀಡಿದ್ದಾರೆ. ಅರ್ಧದಷ್ಟು ಸಿಬ್ಬಂದಿ ಲಭ್ಯವಿಲ್ಲದಿರುವಾಗ ಇರುವವರನ್ನೇ ಸಮರ್ಪಕವಾಗಿ ಬಳಸುವ ಪ್ರಯತ್ನ ನಡೆಯುತ್ತಿದೆ. ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಬಿಳಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸಲು ತಿಳಿಸಲಾಗಿದೆ. ಇದರಿಂದ ಕೊಳೆ ಅಥವಾ ಧೂಳು ಬಟ್ಟೆ ಮೇಲಿದ್ದರೆ ಕೂಡಲೇ ತಿಳಿಯುವ ಸಾಧ್ಯತೆ ಇರುತ್ತದೆ ಎನ್ನುವುದು ಲೆಕ್ಕಾಚಾರ.

ಇದನ್ನೂ ಓದಿ: ನುಸುಳುಕೋರರ ತಾಣವಾದ ವೀರಪ್ಪನ್ ಕಾರ್ಯಕ್ಷೇತ್ರ ಮಹದೇಶ್ವರ ಬೆಟ್ಟ

ಶೀಘ್ರದಲ್ಲೇ ಸಿಬ್ಬಂದಿಗೆ ವಿಶೇಷ ಪಿಪಿಇ ಕಿಟ್ ಮತ್ತು ಸಮವಸ್ತ್ರ ತಯಾರಿಸಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಇನ್ನು ಸಲೂನ್ ಒಳಗೆ ಪ್ರತೀ ಸಿಬ್ಬಂದಿಗೂ ಒಂದೊಂದು ಕುರ್ಚಿ ಎಂದು ನಿಗದಿ ಮಾಡಿ ಅವರ ಹೆಸರನ್ನು ಅದರ ಮೇಲೆ ಬರೆಯಲಾಗಿದೆ. ಅವರು ಕೆಲಸ ಮುಗಿದಾಗ ಅದೇ ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು. ಇದರಿಂದ ಅವರು ಬೇರೆ ಸಿಬ್ಬಂದಿ ಜೊತೆಗೆ ಬೆರೆಯುವುದನ್ನು ತಪ್ಪಿಸಬಹುದು. ಪ್ರತೀ ಬಾರಿ ಒಬ್ಬ ಗ್ರಾಹಕ ಬಂದು ಹೋದ ನಂತರ ಆ ಸ್ಥಳ ಮತ್ತು ಅವರಿಗೆ ಬಳಸಿದ ಪರಿಕರಗಳನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತೆ. ಈ ಸ್ವಚ್ಛತೆಗೇ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಪ್ರತೀ ಗ್ರಾಹಕ ಹೋದ ನಂತರ ಮುಂದಿನ ಗ್ರಾಹಕನ ಅಪಾಯಿಂಟ್ಮೆಂಟ್​ಗೆ ಹೆಚ್ಚಿನ ಸಮಯದ ಗ್ಯಾಪ್ ಇರುತ್ತದೆ.

ಇಲ್ಲಿನ ವಾಶ್ ರೂಮುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಗ್ರಾಹಕರು ಬಳಸಬೇಕೆಂದರೆ ಆಗ ಸಿಬ್ಬಂದಿ ಬೀಗ ತೆಗೆಯುತ್ತಾರೆ. ಅವರು ಹೊರಬಂದ ನಂತರ ಅದನ್ನೂ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಒಂದು ಸಲೂನ್ & ಸ್ಪಾ ಇಷ್ಟರ ಮಟ್ಟಿಗೆ ಎಚ್ಚರಿಕೆ ವಹಿಸುತ್ತಿದೆ ಎಂದರೆ ಕೊರೊನಾ ಎಲ್ಲರನ್ನೂ ಅದೆಷ್ಟು ಅಲರ್ಟ್ ಮಾಡಿದೆ ಎನ್ನುವುದನ್ನು ಗಮನಿಸಬೇಕು. ಅನೇಕ ಹೈ ಎಂಡ್ ಸಲೂನ್​ಗಳು ಇದೇ ರೀತಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಗ್ರಾಹಕರು ಮತ್ತು ಸಿಬ್ಬಂದಿ ಇಬ್ಬರ ಸುರಕ್ಷತೆಗಾಗಿ ಈ ಎಲ್ಲವೂ ಅವಶ್ಯಕ ಕೂಡಾ ಹೌದು.JavascriptFirst published: