HOME » NEWS » Coronavirus-latest-news » HESCOM SHOCKED CUNSOMER RS 7 LAKH BILLED EVEN IN LOCKDOWN TIME HK

ಹೆಸ್ಕಾಂನಿಂದ ಗ್ರಾಹಕನಿಗೆ ವಿದ್ಯುತ್​​​ ಬಿಲ್​​ ಶಾಕ್ : ಅಷ್ಟಕ್ಕೂ ಮನೆಗೆ ಕರೆಂಟ್ ಬಿಲ್ ಬಂದಿದ್ದು ಎಷ್ಟು ಗೊತ್ತಾ?

ಎರಡೇ ತಿಂಗಳ ಬಳಕೆಗೆ 7 ಲಕ್ಷ 64 ಸಾವಿರ ಬಿಲ್ ನೀಡಿ ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿಯ ಸಿಬ್ಬಂದಿಗಳು ಯಡವಟ್ಟು ಮಾಡಿದ್ದಾರೆ

news18-kannada
Updated:May 13, 2020, 1:35 PM IST
ಹೆಸ್ಕಾಂನಿಂದ ಗ್ರಾಹಕನಿಗೆ ವಿದ್ಯುತ್​​​ ಬಿಲ್​​ ಶಾಕ್ : ಅಷ್ಟಕ್ಕೂ ಮನೆಗೆ ಕರೆಂಟ್ ಬಿಲ್ ಬಂದಿದ್ದು ಎಷ್ಟು ಗೊತ್ತಾ?
ಗ್ರಾಹಕರೊಬ್ಬರಿಗೆ ಬಂದ ವಿದ್ಯುತ್​​ ಬಿಲ್​​​​​
  • Share this:
ಧಾರವಾಡ(ಮೇ.13): ಲಾಕ್ ಡೌನ್​​ ‌ನಿಂದ ಯಾರು ಸಹ ಮನೆಯಿಂದ ಹೊರಗೆ ಬಂದಿಲ್ಲ. ಈ ಸಮಯದಲ್ಲಿ ಮನೆಯಲ್ಲಿಯೇ ಕಾಲ ಕಳೆದ ಕುಟುಂಬಕ್ಕೆ ಹೆಸ್ಕಾಂ ಶಾಕ್ ನೀಡಿದೆ. ಎರಡು ತಿಂಗಳ ಬಳಕೆಗೆ 7 ಲಕ್ಷದ 64 ರೂಪಾಯಿ ವಿದ್ಯುತ್ ಬಿಲ್ ನೀಡಿ ಹೆಸ್ಕಾಂ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.‌

ಬಿಲ್ ನೋಡಿ ಗ್ರಾಹಕ ಶಾಕ್ ಆಗಿದ್ದು. ಎರಡೇ ತಿಂಗಳ ಬಳಕೆಗೆ 7 ಲಕ್ಷದ 64 ಸಾವಿರ ಬಿಲ್ ನೀಡಿ ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿಯ ಸಿಬ್ಬಂದಿಗಳು ಯಡವಟ್ಟು ಮಾಡಿದ್ದಾರೆ. ಧಾರವಾಡದ ಆರ್ಯ ಓಣಿಯ ನಿವಾಸಿಯಾದ ರಾಜು ಬಿರ್ಜನ್ನವರ್ ಎಂಬುವರ ಮನೆಗೆ ಹೆಸ್ಕಾಂ ಲಕ್ಷಾಂತರ ರೂಪಾಯಿ ಬಿಲ್‌ ನೀಡುವ ಮೂಲಕ ಶಾಕ್‌ ನೀಡಿದೆ.

ರಾಜು ಬಿರ್ಜನ್ನವರ ಮನೆಗೆ ಬಂದ ಹೆಸ್ಕಾಂ ಸಿಬ್ಬಂದಿ ನೀಡಿದ ಬಿಲ್ ನೋಡಿ ಗ್ರಾಹಕರು ಸಹ ಶಾಕ್ ಆಗಿದ್ದಾರೆ. ಇದು ಹೆಸ್ಕಾಂ ಸಿಬ್ಬಂದಿ‌ ಮಾಡಿದ ಯಡವಟ್ಟು ಮಾಡಿಕೊಂಡು ಇದೀಗ ಪೇಚಿಗೆ ಸಿಲುಕಿದೆ.

ಅಲ್ಲದೇ‌ ಇದೆ‌ ರೀತಿ ಸ್ಥಳೀಯರಿಗೂ ಸಹ ಸಾವಿರಾರು ರೂಪಾಯಿಯ ಬಿಲ್ ನೀಡಿದ್ದಾರೆ. ಆದರೆ, ಬಿಲ್‌ ಪಡೆದ ಸ್ಥಳೀಯರು ಹೆಸ್ಕಾಂಗೆ ವಾಪಸ್ ನೀಡಿ ‌ನಾವು ಇಷ್ಟೊಂದು ವಿದ್ಯುತ್ ಬಳಕೆ‌ ಮಾಡಿಲ್ಲ ಎಂದು ದೂರು ‌ನೀಡಿದ್ದಾರೆ.

ಇದನ್ನೂ ಓದಿ : ಕ್ವಾರಂಟೈನ್ ಗೆ ಹೋಗಲು ನಿರಾಕರಣೆ ; ಆತ್ಮಹತ್ಯೆಯ ಬೆದರಿಕೆ ಹಾಕಿದ ವಲಸೆ ಕಾರ್ಮಿಕರು

ಲಾಕ್‌ಡೌನ್ ನಿಂದ ಸಾರ್ವಜನಿಕರ ಹಣಕಾಸಿನ ಪರಿಸ್ಥಿತಿ ಬ್ರೇಕ್‌ ಡೌನ್‌ ಹಾಗೂ ಫಾಲ್‌ ಡೌನ್‌ ಆಗಿದೆ. ಬಾಡಿಗೆದಾರರಿಗೆ ಬಾಡಿಗೆ ಕೇಳದಂತೆ, ಬ್ಯಾಂಕಿನ ಇಎಂಐ ಪಾವತಿಗೆ ಸರಕಾರ ಒಂದೆಡೆ ವಿನಾಯಿತಿ ನೀಡಿದೆ. ಹೆಸ್ಕಾಂನವರು ಮಾತ್ರ ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಗಮನಿಸದೇ ಮನಸ್ಸಿಗೆ ಬಂದಂತೆ ಬಿಲ್‌ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
First published: May 13, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories