ಮೈಸೂರಿನ ಕೊರೋನಾ ಗ್ರೌಂಡ್​​​ ರಿಪೋರ್ಟ್​: ಇಲ್ಲಿದೆ ಸಂಪೂರ್ಣ ವಿವರ

ಇನ್ನು, ಈವರೆಗೂ ಜಿಲ್ಲೆಯಲ್ಲಿ 41,564 ಒಟ್ಟು ಸ್ಯಾಂಪಲ್​​ ಟೆಸ್ಟ್​ ಮಾಡಲಾಗಿದೆ. ಜತೆಗೆ 17 ಸಾವಿರ ರ‍್ಯಾಪಿಡ್‌ ಟೆಸ್ಟ್‌ ಮಾಡಿಸಲಾಗಿದೆ. ಇದರಲ್ಲಿ 2200 ಕೇಸ್​​ ಪಾಸಿಟಿವ್​​ ಮತ್ತು 14,800 ನೆಗಿಟಿವ್​​ ಕೇಸ್​​ ಇದೆ.

news18-kannada
Updated:August 1, 2020, 8:17 PM IST
ಮೈಸೂರಿನ ಕೊರೋನಾ ಗ್ರೌಂಡ್​​​ ರಿಪೋರ್ಟ್​: ಇಲ್ಲಿದೆ ಸಂಪೂರ್ಣ ವಿವರ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಆ.01): ಮೈಸೂರು ಜಿಲ್ಲೆಯಲ್ಲಿ ಕೊರೋನಾ ಹೆಮ್ಮರವಾಗಿ ಬೆಳೆಯುತ್ತಿದೆ. ಹೀಗಾಗಿಯೇ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದ ಹಲವೆಡೆ ಬೆಡ್‌, ವೆಂಟಿಲೇಟರ್ ಮತ್ತು ಆ್ಯಂಬುಲೆನ್ಸ್​ ಸಮಸ್ಯೆ ಇದೆ. ಇದಕ್ಕಾಗಿ ಮೈಸೂರಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ತಹಬದಿಗೆ ತೆಗೆದುಕೊಂಡ ಅಗತ್ಯಕ್ರಮಗಳ ಬಗ್ಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇಲ್ಲಿನ ಮೈಸೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 250 ಬೆಡ್​​ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ 38 ಕೋವಿಡ್​​-19 ಕೇರ್​​ ಸೆಂಟರ್​​ಗಳಿವೆ. ಈ ಎಲ್ಲಾ ಕೋವಿಡ್​​-19 ಕೇರ್​​ ಸೆಂಟರ್​​​ಗಳಲ್ಲಿ 3537 ಬೆಡ್​​ ಸಾಮಾರ್ಥ್ಯ ಹೊಂದಿದೆ. ಇದರಲ್ಲಿ 2154 ಪುಲ್ ಆಗಿದೆ. ಇನ್ನೂ 1383 ಖಾಲಿ ಇದೆ.

ಇನ್ನು, ಮೈಸೂರಿನಲ್ಲಿ ಒಟ್ಟು 52 ಸರ್ಕಾರಿ ವೆಂಟಿಲೇಟರ್ ಇದೆ. ಕೋವಿಡ್ ಸರ್ಕಾರಿ​​ ಆಸ್ಪತ್ರೆಯಲ್ಲಿ 17 ವೆಂಟಿಲೇಟರ್​​ ಇವೆ. ಇನ್ನುಳಿದ ಆಸ್ಪತ್ರೆಗಳಲ್ಲಿ 35 ವೆಂಟಿಲೇಟರ್​​ ಇಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಪಿಎಚ್​​ಡಿ ಪ್ರೈಮರಿ ಹೆಲ್ತ್ ಸೆಂಟರ್​​ಗಳಲ್ಲಿ 2 ಬೆಡ್​​ ಮೀಸಲು ಇಡಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 5,357 ಇವೆ. ಇದರಲ್ಲಿ 404 ಬೆಡ್​ಗಳು ಫುಲ್​​ ಆಗಿವೆ. ಸುಮಾರು ಇನ್ನೂ 4,953 ಖಾಲಿ ಇದೆ. ಹಾಗೆಯೇ ಈ ಆಸ್ಪತ್ರೆಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಶೇ.50ರಷ್ಟು ಬೆಡ್​​​ ಕೊರೋನಾ ರೋಗಿಗಳಿಗೆ ಮೀಸಲಿಡಲಾಗಿದೆ.

ಇದುವರೆಗೂ ಮೈಸೂರಿನಲ್ಲಿ ಮಾರಕ ಕೊರೋನಾ 4217 ಮಂದಿಗೆ ಬಂದಿದೆ. ಇದರಲ್ಲಿ 1517 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಹೀಗಾಗಿ ಒಟ್ಟು 2558 ಸಕ್ರಿಯ ಕೇಸುಗಳಿವೆ.

ಇನ್ನು, ಈವರೆಗೂ ಜಿಲ್ಲೆಯಲ್ಲಿ 41,564 ಒಟ್ಟು ಸ್ಯಾಂಪಲ್​​ ಟೆಸ್ಟ್​ ಮಾಡಲಾಗಿದೆ. ಜತೆಗೆ 17 ಸಾವಿರ ರ‍್ಯಾಪಿಡ್‌ ಟೆಸ್ಟ್‌ ಮಾಡಿಸಲಾಗಿದೆ. ಇದರಲ್ಲಿ 2200 ಕೇಸ್​​ ಪಾಸಿಟಿವ್​​ ಮತ್ತು 14,800 ನೆಗಿಟಿವ್​​ ಕೇಸ್​​ ಇದೆ.
ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಒಂದೇ ದಿನ 5503 ಮಂದಿಗೆ ಕೊರೋನಾ​, 1.30 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

ಇನ್ನು, 20,318  ಮಂದಿ ಮೇಲೆ ಕೊರೋನಾ ನಿಗಾ ವಹಿಸಲಾಗಿದೆ. 16,390 ಮಂದಿ 14 ದಿನಗಳ ಹೋಂ ಐಸೋಲೇಷನ್ ಮುಗಿಸಿದ್ದಾರೆ. 1370 ಮಂದಿ ಇನ್ನೂ ಹೋಮ್​​ ಕ್ವಾರಂಟೈನ್​​ನಲ್ಲೇ ಇದ್ದಾರೆ.
Published by: Ganesh Nachikethu
First published: August 1, 2020, 8:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading