ಕೊರೋನಾ ಪಾಸಿಟಿವ್​​​: ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯಗೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಗೊತ್ತಾ?

ಸಿಎಂ ಬಿ.ಎಸ್​ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಬೇಗನೇ ಚೇತರಿಸಿಕೊಳ್ಳುತ್ತಾರೆ ಎನ್ನುತ್ತಿವೆ ಆಸ್ಪತ್ರೆ ಮೂಲಗಳು.

news18-kannada
Updated:August 4, 2020, 8:29 PM IST
ಕೊರೋನಾ ಪಾಸಿಟಿವ್​​​: ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯಗೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಗೊತ್ತಾ?
ಸಿದ್ದರಾಮಯ್ಯ, ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು(ಆ.04): ರಾಜ್ಯದ ಇಬ್ಬರು ಪ್ರಮುಖ ನಾಯಕರಿಗೆ ಕೊರೋನಾ ಸೋಂಕು ತಗುಲಿರುವುದು ಗೊತ್ತೇ ಇದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಬೇರೆಲ್ಲಾ ಕೊರೋನಾ ಸೋಂಕಿತರಿಗೆ ನೀಡುವಂತೆಯೇ ಇವರಿಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾಗೆ ಎಂದು ನಿರ್ದಿಷ್ಟ ಔಷಧ ಇಲ್ಲದೇ ಇರುವುದರಿಂದ ಎಲ್ಲರಿಗೂ ರೋಗಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಸಿಎಂ ಬಿಎಸ್​​ ಯಡಿಯೂರಪ್ಪಗೆ ಯಾವುದೇ ರೋಗಲಕ್ಷಣಗಳು ಇಲ್ಲ. ಹಾಗಾಗಿ ಅವರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಸಿ ಮತ್ತು ಜಿಂಕ್ ಮಾತ್ರೆಗಳನ್ನು ನೀಡಲಾಗುತ್ತಿದೆ.

ಇನ್ನು ಸಿಎಂಗೆ ವಯಸ್ಸು 77. ಅವರಿಗೆ ಬಿಪಿ ಮತ್ತು ಡಯಾಬಿಟಿಸ್ ಇದೆ. ಇದರ ಜೊತೆಗೆ ಅವರ ಎಂದಿನ ಬಿಪಿ ಔಷಧಗಳು ಮತ್ತು ಇನ್ಸುಲಿನ್ ಇಂಜೆಕ್ಷನ್ ಮುಂದುವರೆದಿದೆ. ದಿನಕ್ಕೆ 3 ಬಾರಿ ಶುಗರ್ ಲೆವೆಲ್ ಪರೀಕ್ಷೆ ಮಾಡಲಾಗುತ್ತದೆ. ನಿನ್ನೆಯೇ ಚೆಸ್ಟ್ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಲಿವರ್ ಫಂಕ್ಷನ್ ಟೆಸ್ಟ್, ಕ್ರಯಾಟಿನ್ ಮುಂತಾದ ಪರೀಕ್ಷೆಗಳನ್ನು ಕೂಡಾ ಮಾಡಲಾಗಿದೆ. ಪ್ರತಿದಿನದ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಯೂರಿನರಿ ಇನ್ಫೆಕ್ಷನ್ ಉಂಟಾಗಿದೆ. ಅವರಿಗೆ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಲಾಗ್ತಿದೆ. ಇದರ ಜೊತೆಗೆ ಕಿಡ್ನಿ ಮತ್ತು ಬ್ಲಾಡರ್ ಸ್ಕ್ಯಾನಿಂಗ್ ಕೂಡಾ ಮಾಡಲಾಗಿದೆ. ಪ್ರತೀ ಎರಡು ದಿನಗಳಿಗೊಮ್ಮೆ ಈ ಸ್ಕ್ಯಾನ್ ಮೂಲಕ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಗಮನಿಸಲಾಗುತ್ತದೆ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಒಂದೇ ದಿನ 6259 ಮಂದಿಗೆ ಕೊರೋನಾ​, 1.45 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೊರೋನಾ ಪಾಸಿಟಿವ್ ಎಂದು ಬಂದಿದ್ದರೂ ಅದಕ್ಕೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳು ಇಲ್ಲ. ಆದ್ದರಿಂದ ಸಿಎಂ ಬಿಎಸ್​ ಯಡಿಯೂರಪ್ಪಗೆ ನೀಡುತ್ತಿರುವ ಔಷಧಗಳನ್ನೇ ಇವರಿಗೂ ನೀಡಲಾಗುತ್ತದೆ. ಇಬ್ಬರೂ ನಾಯಕರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಬೇಗನೇ ಚೇತರಿಸಿಕೊಳ್ಳುತ್ತಾರೆ ಎಂದಿವೆ ಆಸ್ಪತ್ರೆ ಮೂಲಗಳು.
Published by: Ganesh Nachikethu
First published: August 4, 2020, 8:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading