ಜಗತ್ತಿನಾದ್ಯಂತ ಕೋವಿಡ್​​-19 ಆರ್ಭಟ: ಹೀಗಿದೆ ದೇಶವಾರು ಸೋಂಕಿತರ ವಿವರ

ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರ ಇದುವರೆಗೂ ಸುಮಾರು 1,550,959 ಮಂದಿಗೆ ಕೊರೋನಾ ಬಂದಿದೆ. ಈ ಪೈಕಿ 3 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ12 ಲಕ್ಷ ಮಂದಿಗೆ ಆಸ್ಪತ್ರೆಯಲ್ಲಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
ನವದೆಹಲಿ(ಮೇ.21): ಚೀನಾದಲ್ಲಿ ಹುಟ್ಟಿದ ಮಹಾಕ್ರೂರಿ ಕೊರೋನಾ ಮೂರೇ ತಿಂಗಳಲ್ಲಿ ಜಗತ್ತಿನ‌ ಜಂಘಾಬಲವನ್ನೇ ಹುದುಗಿಸಿದೆ. ಆರ್ಥಿಕವಾಗಿ, ವೈಜ್ಞಾನಿಕವಾಗಿ ಮುಂದುವರೆದ ದೇಶಗಳು ಕೂಡ ಕೊರೋನಾ ಮುಂದೆ ಮಂಡಿಯೂರುವಂತಾಗಿದೆ. ಇದುವರೆಗೂ ಜಗತ್ತಿನಾದ್ಯಂತ ಕೊರೋನಾ 3 ಲಕ್ಷದ 29 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. 5,090,061 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 20 ಲಕ್ಷದ 21 ಸಾವಿರಕ್ಕೂ ಹೆಚ್ಚು ಜನ ಸಂಪೂರ್ಣ ಗುಣಮುಖರಾಗಿದ್ದಾರೆ.

ಇನ್ನು, ವಿಶ್ವದಲ್ಲಿ ಅಮೆರಿಕಾ ಮೃತಪಟ್ಟವರ ಪಟ್ಟಿಯಲ್ಲಿ ಮೊದಲನೇ ಸ್ಠಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ 1,561 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರ ಪರಿಣಾಮ ಅಮೆರಿಕಾದಲ್ಲಿ ಮೃತರ ಸಂಖ್ಯೆ 93,406ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವರದಿಯಿಂದ ತಿಳಿದು ಬಂದಿದೆ.

ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರ ಇದುವರೆಗೂ ಸುಮಾರು 1,550,959 ಮಂದಿಗೆ ಕೊರೋನಾ ಬಂದಿದೆ. ಈ ಪೈಕಿ 3 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ12 ಲಕ್ಷ ಮಂದಿಗೆ ಆಸ್ಪತ್ರೆಯಲ್ಲಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷ ಸಂಘಟನೆ; ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸರಣಿ ಸಭೆ

ದೇಶವಾರು ಸೋಂಕು ಪೀಡಿತರ ವಿವರ ಹೀಗಿದೆ.

 1. ಅಮೇರಿಕಾ - 15,51,853

 2. ರಷ್ಯಾ - 3,08,705

 3. ಬ್ರಿಜಿಲ್ - 2,91,579

 4. ಇಂಗ್ಲೆಂಡ್ - 2,49,619

 5. ಸ್ಪೇನ್ - 2,32,555

 6. ಇಟಲಿ - 2,27,364

 7. ಫ್ರಾನ್ಸ್ - 1,81,700

 8. ಜರ್ಮನಿ - 1,78,473

 9. ಟರ್ಕಿ-  1,52,587

 10. ಇರಾನ್ - 1,26,949

 11. ಭಾರತ - 1,12,028

 12. ಚೀನಾ- 82,967 
First published: