ಸಂಕಷ್ಟದಿಂದ ಪಾರು ಮಾಡಲು ಬಂದ ಕೊರೋನಾ ಗಣೇಶ - ಹೇಗಿದ್ದಾನೆ ಗೊತ್ತಾ?

ಕಿಲ್ಲರ್​​ ಕೊರೊನಾ ಬಲಿ ಪಡೆಯುವ ರೂಪದಲ್ಲಿ, ಆ್ಯಂಬುಲೆನ್ಸ್​ ಮಾಸ್ಕ್, ಪಿಪಿಇ ಕಿಟ್ ಜೊತೆಗೆ ಇರುವ ಗಣೇಶ ವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೋನಾ ವೈರಸ್ ವಧೆ ಮಾಡಿರುವ ಚಿತ್ರವೂ ಮನಮುಟ್ಟುತ್ತಿದೆ.‌

news18-kannada
Updated:August 2, 2020, 10:41 PM IST
ಸಂಕಷ್ಟದಿಂದ ಪಾರು ಮಾಡಲು ಬಂದ ಕೊರೋನಾ ಗಣೇಶ - ಹೇಗಿದ್ದಾನೆ ಗೊತ್ತಾ?
ಕೊರೋನಾ ಗಣೇಶ
  • Share this:
ಬೆಂಗಳೂರು(ಆ.02): ಕೊರೋನಾ ವೈರಸ್ ಹಾವಳಿಯಿಂದ ನಮ್ಮ ಜನಜೀವನವೇ ಬದಲಾಗಿದೆ. ಬೆಂಗಳೂರಿನಲ್ಲಂತೂ ಕೊರೋನಾ ರುದ್ರನರ್ತನ ಹೆಚ್ಚಾಗುತ್ತಲೇ ಇದೆ. ಇದುವರೆಗೂ ಇದಕ್ಕೆ ವ್ಯಾಕ್ಸಿನ್ ಕಂಡುಹಿಡಿಯಲಾಗುತ್ತಿಲ್ಲ. ಇಂಥ ಕೊರೋನಾ ಸಂಕಷ್ಟವನ್ನು ಹೋಗಲಾಡಿಸಲು ಸಿಲಿಕಾನ್ ಸಿಟಿಗೆ ಸ್ವತಃ ವಿಘ್ನನಿವಾರಕನೇ ಧರೆಗಿಳಿದು ಬಂದಿದ್ದಾನೆ. ಏನೀ ಆಶ್ಚರ್ಯ ಎನ್ನಬೇಡಿ, ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಕೋವಿಡ್​​​-19 ವೈರಸ್ ಯಾರ ಕೈಗೂ ಸಿಗದೇ ನಮ್ಮಿಡಿ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಇದನ್ನು ಕೊರೋನಾ ಮಹಾಮಾರಿ ಹೋಗಲಾಡಿಸಲು ಗಣೇಶ ತನ್ನ ವಾಹನದ ಜೊತೆ ಬಂದಿಳಿದ್ದಾನೆ. ಸಿಲಿಕಾನ್ ಸಿಟಿಗೆ ಕೊರೋನಾ ಶಮನಕ್ಕೆ ವಿಘ್ನ ನಿವಾರಕನ ಎಂಟ್ರಿ ಕೊಟ್ಟಿದ್ದಾನೆ.

ಮಾರಕ ಕೊರೋನಾ ರೂಪದಲ್ಲಿ ಮಾರುಕಟ್ಟೆಗೆ ವಿವಿಧ ಗಣೇಶ ಮೂರ್ತಿಗಳು ಬರುತ್ತಿವೆ. ಚತುರ್ಥಿಗೆ 20 ದಿನ ಮೊದಲೇ ಸಿಟಿಗೆ ಡಿಫರೆಂಟ್ ಗಣೇಶ ಲಗ್ಗೆಯಿಟ್ಟಿವೆ. ಅದರಲ್ಲೂ ಲಾಲ್​​​ಬಾಗ್ ಬಳಿಯ ಕೊರೊನಾ ಗಣೇಶ ವಿಶೇಷವಾಗಿದೆ. ಈ‌ ಸರಿ ಕೊವಿಡ್ ವೈರಸ್ ಶಮನದ ರೂಪದಲ್ಲಿ ಎಂಟ್ರಿ ಕೊಟ್ಟಿದೆ. ಕಲಾವಿದನ‌ ಕೈಚಳಕದಲ್ಲಿ ಮೂರು ರೂಪಕದಲ್ಲಿ ಕೊರೋನಾ ಶಮನ ಮಾಡುವ ಚಿತ್ರಣದ ಮೂರ್ತಿ ತಯಾರಿಸಿದ್ದಾರೆ.

ಕಿಲ್ಲರ್​​ ಕೊರೊನಾ ಬಲಿ ಪಡೆಯುವ ರೂಪದಲ್ಲಿ, ಆ್ಯಂಬುಲೆನ್ಸ್​ ಮಾಸ್ಕ್, ಪಿಪಿಇ ಕಿಟ್ ಜೊತೆಗೆ ಇರುವ ಗಣೇಶ ವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೋನಾ ವೈರಸ್ ವಧೆ ಮಾಡಿರುವ ಚಿತ್ರವೂ ಮನಮುಟ್ಟುತ್ತಿದೆ.‌

ಬೆಂಗಳೂರಿನ ಲಾಲ್‌ ಬಾಗ್, ಮಾವಳ್ಳಿ ಸಮೀಪ ವಿವಿಧ ಗಣೇಶ ಮೂರ್ತಿ ಮಾರುಕಟ್ಟೆಗೆ ಬಂದಿವೆ. ಅದೇ ರೀತಿ ಭಾರತ-ಚೀನಾ ನಡುವೆ ಆದ ಕದನ ಹಿನ್ನಲೆಯಲ್ಲಿ ಪೂರ್ವ ಲಡಾಕ್​​ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಅನೇಕ‌ ಭಾರತೀಯ ಯೋಧರು ವೀರಮರಣ ಹೊಂದಿದ್ದರು.

ಈ ಘಟನೆಯ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 15ರಂದು ಗಾಲ್ವಾನ್ ಕಣಿವೆಗೆ ಭೇಟಿ ನೀಡಿದ್ರು. ಈಗ ಗಣೇಶ ಹಬ್ಬ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ದೃಶ್ಯ ಅನಾವರಣ ಮಾಡಲಾಗಿದೆ. ಮಣ್ಣಿನಲ್ಲಿ ನಿರ್ಮಾಣ ಮಾಡಿರುವ ಈ ಮಣ್ಣಿನ ಮೂರ್ತಿಗಳ ರೂಪಕ ಬಹಳ ಚೆನ್ನಾಗಿ ಮೂಡಿಬಂದಿದೆ.

ಮೋದಿಯೊಂದಿಗೆ ವಿಘ್ನವಿನಾಶಕ ಇರುವ ಚಿತ್ರಣ ರಚನೆ ಗಮನ ಸೆಳೆಯುತ್ತಿದೆ. ಈ ಮಧ್ಯೆ ಕೊರೋನಾ ಎಫೆಕ್ಟ್  ಗೌರಿ ಗಣೇಶ ಹಬ್ಬಕ್ಕೂ ಬ್ರೇಕ್ ಬಿದ್ದಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಜನ ಗುಂಪು ಸೇರಲು ಅವಕಾಶ‌ ಇಲ್ಲ. ಧಾರ್ಮಿಕ, ಸಾಂಪ್ರದಾಯಿಕ ಗುಂಪುಕೂಡಲು ಅವಕಾಶ‌ ಇಲ್ಲ.‌ ಮನೆಯಲ್ಲಿ‌ ಮಾತ್ರ ಗಣೇಶ ಇಟ್ಟು ಪೂಜೆ‌ಮಾಡಬೇಕು. ಪರಿಸರ ಸ್ನೇಹಿ ಗಣೇಶ ಮಾತ್ರ ಇಡಬೇಕು.‌ ಗಣಪತಿ ವಿಸರ್ಜನೆಗೆ ಯಾವುದೇ ಕೆರೆ ಕಲ್ಯಾಣಿಗಳಲ್ಲಿ ಅವಕಾಶ ಇಲ್ಲ.ಮನೆಗಳಲ್ಲೇ ವಿಸರ್ಜನೆ ಮಾಡಬೇಕು. ವಿಸರ್ಜನೆಗೆ ಬಿಬಿಎಂಪಿಯಿಂದ ಈ ವರ್ಷ ಯಾವುದೇ ವ್ಯವಸ್ಥೆ ಮಾಡಲ್ಲ. ಜನ ಗುಂಪು ಸೇರಲು ಈ ಬಾರಿ ಅವಕಾಶ ಇಲ್ಲ. ದೊಡ್ಡ ದೊಡ್ಡ ಗಣೇಶಗಳ ಮಾರಾಟಕ್ಕೂ ಅವಕಾಶ ಇಲ್ಲ. ಎಲ್ಲವೂ ಈ‌ ಬಾರಿ ನಿಷೇಧ.‌ ಕಲ್ಯಾಣಿ, ಕೆರೆಗಳಲ್ಲಿ ವಿಸರ್ಜನೆಗೆ ಸಂಪೂರ್ಣ ಬ್ಯಾನ್.‌ ಮೆರವಣಿಗೆ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ರೆ ಕಾನೂನು ರೀತಿ ಶಿಸ್ತು ಕ್ರಮ ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಇದನ್ನೂ ಓದಿ: ಎರಡು ವಾರದೊಳಗೆ ಹೊಸ ಕೋವಿಡ್-19 ಆಸ್ಪತ್ರೆ - ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್

ಇಂಥ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗಾದರೂ ದೊಡ್ಡ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೆ, ಈಗಾಗಲೇ ತಯಾರಿಸಿರುವ ದೊಡ್ಡ ಮೂರ್ತಿ ಗಣೇಶ ವ್ಯಾಪಾರ ಮಾಡಬಹುದು. ಪುಟ್ಟ ಗಣೇಶಕ್ಕಿಂತ ದೊಡ್ಡ ಗಣೇಶ ತಯಾರಿಗೆ ಕಳೆದೊಂದು ವರುಷದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಒಂದು ದಿನಕ್ಕಾದ್ರೂ ದೊಡ್ಡ ಗಣೇಶ ಮೂರ್ತಿಗೆ ಅವಕಾಶ ಕೊಡಿ ಎಂದು ಗಣೇಶ ಮೂರ್ತಿ ವ್ಯಾಪಾರಿ ಶ್ರೀಧರ ಮನವಿ ಮಾಡಿಕೊಳ್ಳುತ್ತಾರೆ.
Published by: Ganesh Nachikethu
First published: August 2, 2020, 10:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading