ಬೆಂಗಳೂರಿನಲ್ಲಿ ಕೊರೋನಾ ಕೇಸ್​ ಹೆಚ್ಚಾಗಲು ಕಾರಣವೇನು ಗೊತ್ತೇ? - ಇಲ್ಲಿದೆ ಆತಂಕಕಾರಿ ಮಾಹಿತಿ

ಲಾಕ್​ಡೌನ್​ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 9ರಿಂದ 28 ಕೊರೊನಾ‌ ಕೇಸ್ ದಾಖಲಾಗುತ್ತಿತ್ತು. ಜೂನ್ ತಿಂಗಳ ಆರಂಭದಲ್ಲಿ ಎರಡಂಕಿಯಷ್ಟು ದಾಖಲಾಗುತ್ತಿದ್ದ ಕೊರೋನಾ ಪಾಸಿಟಿವ್​​ ಪ್ರಕರಣಗಳು ಜೂನ್‌ ಅಂತ್ಯದ ವೇಳೆಗೆ 700ರ ಗಡಿ ದಾಟಿದೆ. ಈಗಂತೂ ಪ್ರತೀನಿತ್ಯ ಒಂದುವರೆ ಸಾವಿರ ಸಮೀಪ ಕೇಸುಗಳ ಪತ್ತೆಯಾಗುತ್ತಿವೆ. ಜುಲೈ 4ರಂದು 1,235 ಕೇಸು ದಾಖಲಾಗಿದೆ ಬೆಂಗಳೂರಿನಲ್ಲಿ ಇದುವರೆಗೆ 12,509 ಕೇಸ್ ವರದಿಯಾಗಿವೆ.

news18-kannada
Updated:July 9, 2020, 2:21 PM IST
ಬೆಂಗಳೂರಿನಲ್ಲಿ ಕೊರೋನಾ ಕೇಸ್​ ಹೆಚ್ಚಾಗಲು ಕಾರಣವೇನು ಗೊತ್ತೇ? - ಇಲ್ಲಿದೆ ಆತಂಕಕಾರಿ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜು.09): ಕರ್ನಾಟಕದಲ್ಲೇ ಮಾರಕ ಅತೀಹೆಚ್ಚು ಕೊರೋನಾ ಕೇಸುಗಳ ದಾಖಲಾಗುತ್ತಿರುವುದು ಬೆಂಗಳೂರಿನಲ್ಲೇ. ವಿರೋಧ ಪಕ್ಷಗಳು ಕೊರೋನಾ ಮಟ್ಟಹಾಕಲು ಇಡೀ ಬೆಂಗಳೂರನ್ನು ಸಂಪೂರ್ಣ ಲಾಕ್​ಡೌನ್​​​ ಮಾಡಿ ಎಂದು ಒತ್ತಾಯಿಸಿವೆ. ಆದರೆ, ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಲಾಕ್​​ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಸಿಎಂ ಬಿಎಸ್​ ಯಡಿಯೂರಪ್ಪ ಸರ್ಕಾರ ಕೊರೋನಾ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರೀ ಸರ್ಕಸ್ ನಡೆಸುತ್ತಿದೆ. ಹೀಗಿರುವಾಗಲೇ ಕಳೆದೊಂದು ವಾರದಿಂದ ಬೆಂಗಳೂರಿನಲ್ಲೂ ಮುಂಬೈ, ಚೆನ್ನೈ, ದೆಹಲಿ ರೀತಿಯಲ್ಲೇ ಕೊರೋನಾ ಪ್ರಕರಣಗಳು ಇಲ್ಲಿದೆ ಕಾರಣ.

ಲಾಕ್​ಡೌನ್​ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 9ರಿಂದ 28 ಕೊರೊನಾ‌ ಕೇಸ್ ದಾಖಲಾಗುತ್ತಿತ್ತು. ಜೂನ್ ತಿಂಗಳ ಆರಂಭದಲ್ಲಿ ಎರಡಂಕಿಯಷ್ಟು ದಾಖಲಾಗುತ್ತಿದ್ದ ಕೊರೋನಾ ಪಾಸಿಟಿವ್​​ ಪ್ರಕರಣಗಳು ಜೂನ್‌ ಅಂತ್ಯದ ವೇಳೆಗೆ 700ರ ಗಡಿ ದಾಟಿದೆ. ಈಗಂತೂ ಪ್ರತೀನಿತ್ಯ ಒಂದುವರೆ ಸಾವಿರ ಸಮೀಪ ಕೇಸುಗಳ ಪತ್ತೆಯಾಗುತ್ತಿವೆ. ಜುಲೈ 4ರಂದು 1,235 ಕೇಸು ದಾಖಲಾಗಿದೆ ಬೆಂಗಳೂರಿನಲ್ಲಿ ಇದುವರೆಗೆ 12,509 ಕೇಸ್ ವರದಿಯಾಗಿವೆ.

ಇನ್ನು, ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಾಗಲು ಅನ್​​ಲಾಕ್ 1.0 ಸರಿಯಾಗಿ ನಿಭಾಯಿಸದೇ ಇದ್ದದ್ದೇ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ರಾಜಧಾನಿಯಲ್ಲಿ ಅತೀಹೆಚ್ಚು ಕೇಸು ದಾಖಲಾಗುತ್ತಿದೆ. ಜೂನ್ 1ರಿಂದ 14ನೇ ತಾರೀಕಿನವರೆಗೂ ಎಡವಿದ್ದಕ್ಕೆ ಈಗ ಬೆಲೆ ತೆರಬೇಕಾಗಿದೆ. ಇದೇ ಪ್ರಮುಖ ಕಾರಣ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಬಿಬಿಎಂಪಿ ಅಧಿಕಾರಿಗಳು.

ವಿವಿಧ ರಾಜ್ಯ ಹಾಗೂ ವಿದೇಶಗಳಿಂದ ಬಂದವರಿಂದಲೂ ಕೊರೋನಾ ಜಾಸ್ತಿಯಾಗಿದೆ. ಜೂನ್​​ವರೆಗೂ ಸೋಂಕಿತರ ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗ್ತಿತ್ತು. ಆದರೀಗ ಕಾಂಟ್ಯಾಕ್ಟ್ ಹಿಸ್ಟರಿ ಸಿಗೋದು ಕಷ್ಟವಾಗಿದೆ. ಸಿಕ್ಕರೂ ಅವರನ್ನೆಲ್ಲ ಕ್ವಾರಂಟೈನ್ ಮಾಡುವುದು ಇನ್ನೊಂದು ದುಸ್ಸಾಹಸದ ಕೆಲಸವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ತೀವ್ರತೆ: ಇಂದು ಕೋವಿಡ್​​ ಕೇರ್​​ ಸೆಂಟರ್​​ಗಳಿಗೆ ಸಿಎಂ ಯಡಿಯೂರಪ್ಪ ಭೇಟಿವಾರ್ ರೂಮ್‌ ಮಾಹಿತಿಯ ಪ್ರಕಾರ, ದೇಶಿ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಕೊರೊನಾ ಹೆಚ್ಚಳವಾಗಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಸಂಪರ್ಕದಿಂದ ಶೇ. 2.13ರಷ್ಟು, ಐಎಲ್​​ಐ ಹಾಗೂ ಸಾರಿ ತೊಂದರೆಯಿಂದ ಶೇ.7.49 ದಾಖಲಾಗಿದೆ. ಜೂನ್​​ 1ರಿಂದ 22ರವರೆಗೆ 1050 ಪ್ರಕರಣ ದಾಖಲಾಗಿದೆ. ಇದರಲ್ಲಿ ಶೇ.62.76ರಷ್ಟು ಪ್ರಕರಣದ ಮೂಲ ಪತ್ತೆಯಾಗಿಲ್ಲ. ಬರೋಬ್ಬರಿ 659 ಕೇಸುಗಳ ಮೂಲ ಪತ್ತೆಯಾಗದ ಕಾರಣ ಬೆಂಗಳೂರಿನಲ್ಲಿ ಕೊರೋನಾ ಕೇಸು ಹೆಚ್ಚಳ ಪ್ರಮುಖ ಕಾರಣ ಎನ್ನಬಹುದು.
Published by: Ganesh Nachikethu
First published: July 9, 2020, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading