ಜಗತ್ತಿನಾದ್ಯಂತ 27,365ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ; ಯಾವ ದೇಶದಲ್ಲಿ ಎಷ್ಟು ಸಾವು? ಇಲ್ಲಿದೆ ಮಾಹಿತಿ

ನಿನ್ನೆ ಒಂದೇ ದಿನದಲ್ಲಿ ಅಮೆರಿಕದಂತಹ ರಾಷ್ಟ್ರದಲ್ಲೂ ಸಹ ಸುಮಾರು 10,000 ಸಾವಿರ ಜನರಿಗೆ ಕೊರೋನಾ ಸೋಂಕು ತಗುಲಿದೆ. ಇನ್ನೂ ವಿಶ್ವದಾದ್ಯಂತ ಈ ಸೋಂಕಿಗೆ 24,087 ಜನ ಬಲಿಯಾಗಿದ್ದರೆ, 5,32,224 ಜನರಿಗೆ ಈ ಸೋಂಕು ತಗುಲಿದ್ದು ಆತಂಕ ಮೂಡಿಸಿದೆ.

MAshok Kumar | news18-kannada
Updated:March 28, 2020, 9:27 AM IST
ಜಗತ್ತಿನಾದ್ಯಂತ 27,365ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ; ಯಾವ ದೇಶದಲ್ಲಿ ಎಷ್ಟು ಸಾವು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ.
  • Share this:
ಇಡೀ ವಿಶ್ವವನ್ನೇ ಇಂದು ಪೆಡಂಭೂತದಂತೆ ಕಾಡುತ್ತಿರುವ ಕೊರೋನಾ ಸದ್ಯಕ್ಕಂತೂ ದೂರಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಚೀನಾದಿಂದ ಆರಂಭವಾದ ಈ ಸೋಂಕು ಪ್ರಸ್ತುತ ಇಟಲಿ, ಸ್ಪೇನ್, ಫ್ರಾನ್ಸ್ ನಂತರ ರಾಷ್ಟ್ರಗಳನ್ನು ಮಾತ್ರವಲ್ಲ ಖುದ್ದು ವಿಶ್ವದ ದೊಡ್ಡಣ ಅಮೆರಿಕಕ್ಕೆ ಬೆವರಿಳಿಸುತ್ತಿದೆ.

ನಿನ್ನೆ ಒಂದೇ ದಿನದಲ್ಲಿ ಅಮೆರಿಕದಂತಹ ರಾಷ್ಟ್ರದಲ್ಲೂ ಸಹ ಸುಮಾರು 10,000 ಸಾವಿರ ಜನರಿಗೆ ಕೊರೋನಾ ಸೋಂಕು ತಗುಲಿದೆ. ಇನ್ನೂ ವಿಶ್ವದಾದ್ಯಂತ ಈ ಸೋಂಕಿಗೆ 27,365 ಜನ ಬಲಿಯಾಗಿದ್ದರೆ, 5,32,224 ಜನರಿಗೆ ಈ ಸೋಂಕು ತಗುಲಿದ್ದು ಆತಂಕ ಮೂಡಿಸಿದೆ. ಭಾರತವೂ ಸಹ ಈ ಸೋಂಕಿಗೆ ಹೊರತಾಗಿಲ್ಲ. ಇಲ್ಲೂ ಸಹ ಸುಮಾರು 700ಕ್ಕೂ ಅಧಿಕ ಜನರಿಗೆ ಈ ಸೋಂಕು ತಗುಲಿದ್ದು 16 ಜನ ಮೃತಪಟ್ಟಿದ್ದಾರೆ.

ಉಳಿದಂತೆ ವಿಶ್ವದ ಯಾವ ರಾಷ್ಟ್ರದಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ:

ಮಾರಣಾಂತಿಕ ಕೊರೋನಾ ಚೀನಾದಲ್ಲಿ ಆರಂಭವಾಗಿ ಮರಣ ಮೃದಂಗ ಬಾರಿಸಿತ್ತು. ಆದರೆ, ಅದನ್ನು ತಡೆಯುವಲ್ಲಿ ಚೀನಾ ಬಹುತೇಕ ಯಶಸ್ವಿಯಾಗಿದೆ. ಆದರೆ, ಚೀನಾದಿಂದ ಇಟಲಿಗೆ ಹರಡಿದ ಕೊರೋನಾ ಸುಮಾರ  8,215 ಜನರ ಸಾವಿಗೆ ಕಾರಣವಾಗಿದೆ. ಈ ಮೂಲಕ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ಸ್ಪೇನ್‌ ಇದ್ದು ನಿನ್ನೆ ಒಂದೇ ದಿನದಲ್ಲಿ ಸ್ಪೇನ್‌ನಲ್ಲಿ ಸುಮಾರು 650 ಜನ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ 4,365ಕ್ಕೆ ಏರಿಕೆಯಾಗಿದೆ. ಚೀನಾ ದೇಶ ಮೂರನೇ ಸ್ಥಾನದಲ್ಲಿದ್ದು 3,292 ಜನ ಬಲಿಯಾಗಿದ್ದಾರೆ.  4ನೇ ಸ್ಥಾನದಲ್ಲಿರುವ ಇರಾನ್ ನಲ್ಲಿ 2,234, 5ನೇ ಸ್ಥಾನದಲ್ಲಿರುವ ಫ್ರಾನ್ಸ್ ನಲ್ಲಿ 1,696 ಹಾಗೂ 6ನೇ ಸ್ಥಾನದಲ್ಲಿರುವ ಅಮೇರಿಕಾದಲ್ಲಿ 1,300 ಸಾವು ಸಂಭವಿಸಿದೆ.

ಭಾರತದಲ್ಲೂ ಸಾವೀಗೀಡಾದವರ ಸಂಖ್ಯೆ 20ಕ್ಕೆ ಏರಿಕೆ, ಭಾರತದಲ್ಲಿ ನಿನ್ನೆ ಒಂದು ದಿನ 8 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ನೆರೆಯ ಪಾಕಿಸ್ತಾನದಲ್ಲೂ ಕೊರೋನಾ 9 ಜನರನ್ನು ಬಲಿ ಪಡೆದಿದೆ.

ಇದನ್ನೂ ಓದಿ : ರಿಪೋ ದರ 75, ರಿವರ್ಸ್ ರೆಪೋ 90 ಮೂಲಾಂಕ ಇಳಿಕೆ; 3 ತಿಂಗಳು ಸಾಲ ಮರುಪಾವತಿಗೆ ವಿನಾಯಿತಿ
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading