• Home
 • »
 • News
 • »
 • coronavirus-latest-news
 • »
 • ಅಂಟಾರ್ಟಿಕಾದಲ್ಲಿ ತಾಪಮಾನ ಏರಿಕೆ, ಇರಾಕ್ ಮೇಲೆ ಮತ್ತೊಂದು ಕ್ಷಿಪಣಿ ದಾಳಿ; ನೀವು ಓದಲೇ ಬೇಕಾದ ಅಂತಾರಾಷ್ಟ್ರೀಯ ಸುದ್ದಿಗಳು

ಅಂಟಾರ್ಟಿಕಾದಲ್ಲಿ ತಾಪಮಾನ ಏರಿಕೆ, ಇರಾಕ್ ಮೇಲೆ ಮತ್ತೊಂದು ಕ್ಷಿಪಣಿ ದಾಳಿ; ನೀವು ಓದಲೇ ಬೇಕಾದ ಅಂತಾರಾಷ್ಟ್ರೀಯ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ಸಾಕಷ್ಟು ಬೆಳವಣಿಗೆ ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲ ಪ್ರಮುಖ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ನಾವು ಮಾಹಿತಿ ನೀಡುತ್ತಿದ್ದೇವೆ. 

 • Share this:

  ಬೆಂಗಳೂರು (ಫೆ.14): ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ಸಾಕಷ್ಟು ಬೆಳವಣಿಗೆ ನಡೆಯುತ್ತಿರುತ್ತವೆ. ಈ ಪೈಕಿ ಇಂದು ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಪ್ರಮುಖ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ನಾವು ಮಾಹಿತಿ ನೀಡುತ್ತಿದ್ದೇವೆ. 

  ಇರಾನ್​ ಮೇಲೆ ಕ್ಷಿಪಣಿ ದಾಳಿ:

  ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯೊಂದಿಗೆ ಅಮೆರಿಕ ಮತ್ತು ಇರಾನ್ ಮಧ್ಯೆ ಹುಟ್ಟಿಕೊಂಡಿದ್ದ ಅಂತಾರಾಷ್ಟ್ರೀಯ ಬಿಕ್ಕಟ್ಟು ಪೂರ್ಣಗೊಳ್ಳುವ ಲಕ್ಷಣ ಗೋಚರವಾಗುತ್ತಿಲ್ಲ. ಗುರುವಾರ ರಾತ್ರಿ ಇರಾಕ್​ನಲ್ಲಿರುವ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ರಾಕೆಟ್​ ದಾಳಿ ನಡೆದಿದ್ದು, ಇದರ ಹಿಂದೆ ಇರಾನ್​ ಕೈವಾಡ ಇದೆ ಎನ್ನಲಾಗಿದೆ. ಕಿರ್​ಕುಕ್​ ಭಾಗದಲ್ಲಿ ಈ ದಾಳಿ ನಡೆದಿದೆ.

  ಅಂಟಾರ್ಟಿಕಾದಲ್ಲಿ ಮಿತಿಮೀರುತ್ತಿದೆ ತಾಪಮಾನ:

  ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದೆ, ಪರಿಣಾಮ ಅಂಟಾರ್ಟಿಕಾದಲ್ಲಿ ಪ್ರಸ್ತುತ ದಾಖಲೆಯ ಮಟ್ಟದ ತಾಪಮಾನ ಏರಿಕೆಯಾಗಿದೆ. ಈಗ ಇಲ್ಲಿ ತಾಪಮಾನ 20.75 ಡಿಗ್ರಿ ದಾಖಲಾಗಿದ್ದು, ಈ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಈ ಮೊದಲು ಅಂಟಾರ್ಟಿಕಾದಲ್ಲಿ ಎಂದಿಗೂ ತಾಪಮಾನದ ಪ್ರಮಾಣ 20 ಡಿಗ್ರಿ ದಾಟಿರಲಿಲ್ಲ. ಹೀಗಾಗಿ ಈ ಬೆಳವಣಿಗೆ ಮನುಕುಲಕ್ಕೆ ಮಾರಕವಾಗುವ ಸಾಧ್ಯತೆ ಇದೆ ಎಂದು ವಿಜ್ಜ್ಞಆನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ಅಮೆರಿಕ-ಇರಾನ್ ಸೇನಾ ಬಲಾಬಲವೇನು?; ಚುನಾವಣಾ ಸಂದರ್ಭಗಳಲ್ಲೇ ಯುದ್ಧ ನಡೆಯುವುದೇಕೆ? ಇಲ್ಲಿದೆ ಡೀಟೈಲ್ಸ್

  ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ:

  ಹಣಕಾಸು ಕ್ಷೇತ್ರದಲ್ಲಿ ಭಾರತ ತಕ್ಷಣವೇ ಸಾಕಷ್ಟು ಸುಧಾರಣೆಗಳನ್ನು ತರುವ ಅವಶ್ಯಕತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್​) ಹೇಳಿದೆ. ಭಾರತದ ಆರ್ಥಿಕ ಪರಿಸ್ಥಿತಿ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿರುವ ಐಎಂಎಫ್, ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ ಎಂದು ಎಚ್ಚರಿಕೆಯ ಕರೆ ಗಂಟೆ ಬಾರಿಸಿದೆ.

  ಐಎಂಎಫ್​ ಈ ಹಿಂದೆಯೂ ಸಹ ಹಲವಾರು ಬಾರಿ ಕುಸಿಯುತ್ತಿರುವ ಆರ್ಥಿಕತೆಯ ಅಭಿವೃದ್ಧಿಗೆ ಮುಂದಾಗುವಂತೆ ಕೇಂದ್ರ ಸರ್ಕಾರವನ್ನು ಹಲವು ಬಾರಿ ಎಚ್ಚರಿಸಿತ್ತು.

  ಕೊರೊನಾ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ:

  ಚೀನಾದಲ್ಲಿ ಕೊರೊನಾ ಸಾವಿನ ಸಂಖ್ಯೆ 1,483ಕ್ಕೆ ಏರಿಕೆ ಆಗಿದ್ದು, ವಿಶ್ವದ ಆತಂಕವನ್ನು ಹೆಚ್ಚಿಸಿದೆ. ಗುರುವಾರ 116 ಜನರು ಮೃತಪಟ್ಟಿದ್ದು, 4,823 ಹೊಸ ಪ್ರಕರಣಗಳು ದಾಖಲಾಗಿದೆ. ಅಲ್ಲದೆ, ಭಾರತದಲ್ಲೂ ಈ ಮಾರಣಾಂತಿಕ ವೈರಸ್​ ಹರಡುವ ಎಲ್ಲಾ ಸಾಧ್ಯತೆಗಳು ಇದ್ದು, ಸರ್ಕಾರ ಈಗಾಗಲೇ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಒತ್ತು ನೀಡಿದೆ.

  First published: