ಲಾಕ್​ಡೌನ್ ಎಫೆಕ್ಟ್; ವ್ಯಸನಿಗಳ ಜೇಬಿಗೆ ಕತ್ತರಿ, ಗುಟ್ಕಾ, ಕಳ್ಳಭಟ್ಟಿ, ವೈನ್​ಗೆ ಭರ್ಜರಿ ಡಿಮ್ಯಾಂಡ್!

ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಈ ಸಂದರ್ಭವನ್ನೇ ಉಪಯೋಗಿಸಿಕೊಳ್ಳುತ್ತಿರುವ ಕಾಳಸಂತೆ ಚೋರರು ಮಾತ್ರ ಗ್ರಾಹಕನ ಜೇಬಿಗೆ ಕತ್ತರಿ ಹಾಕಲು ಮುಂದಾಗುವುದರೊಂದಿಗೆ ಸಂದರ್ಭದ ದುರ್ಲಾಭ ಪಡೆಯುತ್ತಿದ್ದಾರೆ.

news18-kannada
Updated:April 29, 2020, 9:37 PM IST
ಲಾಕ್​ಡೌನ್ ಎಫೆಕ್ಟ್; ವ್ಯಸನಿಗಳ ಜೇಬಿಗೆ ಕತ್ತರಿ, ಗುಟ್ಕಾ, ಕಳ್ಳಭಟ್ಟಿ, ವೈನ್​ಗೆ ಭರ್ಜರಿ ಡಿಮ್ಯಾಂಡ್!
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು; ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಎಲ್ಲ ವಹಿವಾಟು, ವ್ಯಾಪಾರ ಬಂದ್ ಮಾಡಿದ್ದರಿಂದ ಅನೇಕರು ಕಷ್ಟಕ್ಕೆ ಗುರಿಯಾಗಿದ್ದು, ಒಂದು ಕಡೆಯಾದರೇ ಮತ್ತೊಂದು ಕಡೆ ವ್ಯಸನಿಗಳ ಜೇಬಿಗೆ ಪದೇ ಪದೇ ಕತ್ತರಿ ಬಿಳುತ್ತಿದೆ.

ಲಾಕ್​ಡೌನ್ ವಿಧಿಸಿ 36 ದಿನಗಳು ಕಳೆದಿವೆ. ಇದುವರೆಗೂ ಜಿಲ್ಲಾದ್ಯಂತ 15 ಕಳ್ಳಭಟ್ಟಿ ತಯಾರಿಕ ಮತ್ತು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ. ಆಲ್ದೂರು ಭಾಗದಲ್ಲಿ ಆರು, ಕಡೂರು ನಾಲ್ಕು, ಚಿಕ್ಕಮಗಳೂರು ನಗರ ಒಂದು, ಬಣಕಲ್ ಒಂದು, ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಹಾಗೂ ಮೂಡಿಗೆರೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಹಾಗೂ ಚಿಕ್ಕಮಗಳೂರು ನಗರದಲ್ಲಿ ಮದ್ಯದಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ ಒಂದು ಪ್ರಕರಣ ದಾಖಲಾಗಿದೆ.

ಮದ್ಯದಂಗಡಿ ಬಾಗಿಲು ಹಾಕಿದ್ದರಿಂದ ಮದ್ಯಪ್ರಿಯರಿಗೆ ನಿರಾಸೆಯುಂಟು ಮಾಡಿದೆ. ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯರಿಂದ ಚಿಕಿತ್ಸೆ ಪಡೆದ ಘಟನೆಗಳು ನಡೆದಿವೆ. ಇನ್ನೂ ಕೆಲವರು ದುಬಾರಿ ಬೆಲೆಯಿಂದ ಮದ್ಯದ ಸಹವಾಸವೇ ಬೇಡವೆಂದು ದೂರ ಸರಿದಿದ್ದಾರೆ.

ತಲೆ ಎತ್ತಿದ ಕಳ್ಳಭಟ್ಟಿ ದಂಧೆ

ಯಾವಾಗ ಲಾಕ್​ಡೌನ್​ನಿಂದ ಮದ್ಯದಂಗಡಿಗಳು ಬಾಗಿಲು ಮುಚ್ಚಿದವೋ ಇಡೀ ಜಿಲ್ಲಾದ್ಯಂತ ಕಳ್ಳಭಟ್ಟಿ ದಂಧೆ ತಲೆ ಎತ್ತಿ ನಿಲ್ಲಲ್ಲು ಶುರುವಿಟ್ಟುಕೊಂಡಿವೆ. ಅಲ್ಲೋ ಇಲ್ಲೋ ನಡೆಯುತ್ತಿದ್ದ ಕಳ್ಳಭಟ್ಟಿ ದಂಧೆ ಎಗ್ಗಿಲ್ಲದೇ ನಡೆಯಲು ಆರಂಭಿಸಿವೆ. 30 ರೂ.ಗೆ ಮಾರಾಟವಾಗುತ್ತಿದ್ದ ಕ್ವಾರ್ಟರ್ ಕಳ್ಳಭಟ್ಟಿ ಡಿಮ್ಯಾಂಡ್ ಜಾಸ್ತಿ ಆಗುತ್ತಿದ್ದಂತೆ ರೂ.60 ರಿಂದ 150 ರೂ. ವರೆಗೂ ಏರಿಕೆ ಕಂಡಿದೆ.

ಸಾಮಾನ್ಯ ಬೆಲೆಯ ಎಣ್ಣೆಯೂ ಗಗನಕ್ಕೆ

ಕೇವಲ ಒಂದು ವರ್ಗದ ಜನರಿಗೆ ಸೀಮಿತವಾಗಿದ್ದ ಚೀಪರ್ ಹೆಸರು ಪಡೆದಿರುವ ಮದ್ಯ ಕೂಡ ಲಾಕ್​ಡೌನ್​ ನಂತರ ತನ್ನ ಉಗ್ರ ಪ್ರತಾಪ ತಾಳಿದೆ. ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಎಣ್ಣೆ 300, 400 ರೂ.ಗಳ ಗಡಿ ದಾಟಿದೆ. ದುಬಾರಿ ಎಣ್ಣೆ ಕುಡಿಯುತ್ತಿದ್ದವರು ಈಗ ಚೀಪರ್ ಕುಡಿಯುವಂತಾಗಿದೆ.ವೈನ್ ಮೋರೆಹೋದ ವ್ಯಸನಿಗಳು

ಸಾರಾಯಿ ಬೆಲೆ ಗಗನಕ್ಕೇರುತ್ತಿದ್ದಂತೆ ಕೆಲವರು ವೈನ್​ ಮೋರೆ ಹೋಗಿದ್ದಾರೆ. ವೈನಿಗೂ (ಹಣ್ಣಿನ ರಸ) ಬೇಡಿಕೆ ಹೆಚ್ಚಾಗಿದ್ದು, ಕೆಲವರು ಮನೆಯಲ್ಲೇ ತಯಾರಿಸಿಟ್ಟುಕೊಂಡಿದ್ದರೇ ಮತ್ತೇ ಕೆಲವರು ಲೀಟರ್​ಗೆ 250 ರೂ. ನೀಡಿ ಖರೀದಿಸಿ ಸೇವಿಸುತ್ತಿದ್ದಾರೆ. ಸ್ವಲ್ಪ ಕೊಳೆತ ಹಣ್ಣಿನ ರಸವನ್ನು ಬಾಟಲಿ ತುಂಬಿ ವೈನ್ ಹೆಸರಿನಲ್ಲಿ ಮಾರಾಟ ಮಾಡಿ ವ್ಯಸನಿಗಳ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ದುಬಾರಿ ಆಯ್ಕು ಗುಟ್ಕಾ, ಸಿಗರೇಟು

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಆದರೆ, ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅಂಗಡಿ ಮಾಲೀಕರು ಮಾತ್ರ ಎಗ್ಗಿಲ್ಲದೇ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ತಂಬಾಕು ಉತ್ಪನ್ನಗಳನ್ನು ಕೃತಕ ಅಭಾವ ಸೃಷ್ಟಿಸಿ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸಿಗರೆಟ್ ಬೆಲೆ ಮೂಲ ಬೆಲೆಗಿಂತ ಮೂರುಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗುಟ್ಕಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನು ಓದಿ: ಲಾಕ್​​ಡೌನ್​​: ಸಂಕಷ್ಟದಲ್ಲಿರುವ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ತವರಿಗೋಗಲು ಕೇಂದ್ರ ಒಪ್ಪಿಗೆ

ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಈ ಸಂದರ್ಭವನ್ನೇ ಉಪಯೋಗಿಸಿಕೊಳ್ಳುತ್ತಿರುವ ಕಾಳಸಂತೆ ಚೋರರು ಮಾತ್ರ ಗ್ರಾಹಕನ ಜೇಬಿಗೆ ಕತ್ತರಿ ಹಾಕಲು ಮುಂದಾಗುವುದರೊಂದಿಗೆ ಸಂದರ್ಭದ ದುರ್ಲಾಭ ಪಡೆಯುತ್ತಿದ್ದಾರೆ.
First published: April 29, 2020, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading