ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ಮಗುವಿನ ಸ್ಥಿತಿಗತಿ ಬಗ್ಗೆ ಹೆಚ್ಚಿನ ಗಮನ ಇಟ್ಟಿದ್ದು, ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ನೋಡುತ್ತಿದ್ದೇವೆ. ಇಲ್ಲಿಯವರೆಗೆ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ

news18-kannada
Updated:April 4, 2020, 7:10 PM IST
ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ
ಸಾಂದರ್ಭಿಕ ಚಿತ್ರ
  • Share this:
ದೆಹಲಿ(ಏ.04) : ಕೊರೋನಾ ಸೋಂಕಿತ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ದೆಹಲಿಯ ಏಮ್ಸ್​ ಆಸ್ಪತ್ರೆ  ನಡೆದಿದೆ. ಸದ್ಯ ತಾಯಿ ಹಾಗೂ ಮಗುವನ್ನುತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಮಗು ಆರೋಗ್ಯವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಏಮ್ಸ್  ಆಸ್ಪತ್ರೆಗ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ. ನೀರಜ್ ಭಾಟಿಯಾ ಈ ಹೆರಿಗೆ ಮಾಡಿಸಿದ್ದು, ಒಂದು ವಾರ ಮುಂಚಿತವಾಗಿ ಸಿ-ಸೆಕ್ಷನ್ ಮೂಲಕ ನಿನ್ನೆ ಮಧ್ಯಾಹ್ನ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದೆಹಲಿಯಲ್ಲಿ ಕೊರೋನ ವೈರಸ್ ಸೋಂಕಿತ ಮಹಿಳೆಗೆ ಜನಿಸಿದ ಮೊದಲ ಮಗು ಇದಾಗಿದೆ.

ಮಗುವಿಗೆ ಕೊರೋನಾ ಸೋಂಕು ತಗುಲಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ನಾವು ಮಗುವಿನ ಸ್ಥಿತಿಗತಿ ಬಗ್ಗೆ ಹೆಚ್ಚಿನ ಗಮನ ಇಟ್ಟಿದ್ದು, ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ನೋಡುತ್ತಿದ್ದೇವೆ. ಇಲ್ಲಿಯವರೆಗೆ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

ಮಗುವಿಗೆ ತಾಯಿಯ ಎದೆಹಾಲು ಅಗತ್ಯವಿರುವುದರಿಂದ ಮಗು ತನ್ನ ತಾಯಿಯೊಂದಿಗೆ ಇರುತ್ತದೆ. ಇಲ್ಲಿಯವರೆಗೆ, ಎದೆಹಾಲಿನ ಮೂಲಕ ವೈರಸ್ ಹರಡಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.

ಏಮ್ಸ್​ ನಲ್ಲಿ ಶರೀರ ವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ವೈದ್ಯ ಪತಿ ವೈರಸ್ ಸೋಂಕಿಗೆ ತುತ್ತಾಗಿರುವುದು ಕಂಡುಬಂದ ನಂತರ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಮಗುವಿನ ತಾಯಿಗೆ ಗುರುವಾರ ಕೊರೋನಾ ಪರೀಕ್ಷೆ ನಡೆಸಲಾಗಿತ್ತು.

ತಾಯಿ ಕೂಡ ಚೆನ್ನಾಗಿದ್ದಾರೆ ಮತ್ತು ಕೊವೀಡ್​ 19ಗೆ ಪಾಸಿಟಿವ್​ ಕಂಡುಬಂದಿದ್ದರೂ ಪ್ರಸ್ತುತ ತಾಯಿ ಆರೊಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೋವಿಡ್ -19 ಸೋಂಕಿತ ಗರ್ಭಿಣಿ ಮಹಿಳಾ ರೋಗಿಗಳ ಆರೈಕೆಗಾಗಿ ಮೀಸಲಾಗಿರುವ ಪ್ರೋಟೋಕಾಲ್ ಅನ್ನು ಏಮ್ಸ್ ಈಗಾಗಲೇ ಸಿದ್ಧಪಡಿಸಿದೆ.

ಇದನ್ನೂ ಓದಿ : ಏ.15ರ ನಂತರ ಹಂತಹಂತವಾಗಿ ರೈಲು ಸಂಚಾರ ಆರಂಭಿಸುವಂತೆ ವಲಯಗಳಿಗೆ ಸೂಚನೆ ನೀಡಿದ ಭಾರತೀಯ ರೈಲ್ವೆವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊವೀಡ್​ 19 ಹೊಂದಿರುವ ಮಹಿಳೆಯರು ಹಾಲುಣಿಸುವ ಸಮಯದಲ್ಲಿ ಎದೆಹಾಲನ್ನು ನೀಡಬಹುದು. ಆದರೆ ಈ  ಸಮಯದಲ್ಲಿ ಸ್ವಚ್ಚತೆ ಕಾಪಾಡಬೇಕು. ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈ ತೊಳೆಯಬೇಕು. ನಂತರ ಮಗುವನ್ನು ಸ್ವಚ್ಛಗೊಳಿಸಬೇಕು ಇದರಿಂದ ಸೋಂಕು ತಾಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದೆ.
First published: April 4, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading