HOME » NEWS » Coronavirus-latest-news » HEALTH MINSTER SUDHAKAR INAUGURATES SEARCHMYBED PORTAL DEVELOPED BY PHANA SNVS

SearchMyBed.com - ಖಾಸಗಿ ಆಸ್ಪತ್ರೆಗಳ ಬೆಡ್ ಬಗ್ಗೆ ರಿಯಲ್ ಟೈಮ್ ಮಾಹಿತಿ: ಪ್ರತ್ಯೇಕ ಪೋರ್ಟಲ್ ಉದ್ಘಾಟನೆ

ಖಾಸಗಿ ಆಸ್ಪತ್ರೆಗಳ ಒಕ್ಕೂಟ PHANA ದಿಂದ ಅಭಿವೃದ್ಧಿಪಡಿಸಲಾಗಿರುವ SearchMyBed.Com ಪೋರ್ಟಲ್ ಅನ್ನು ಸಚಿವ ಸುಧಾಕರ್ ಇಂದು ಉದ್ಘಾಟಿಸಿದ್ದಾರೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಮೀಸಲಿಡಲಾದ ಬೆಡ್​ಗಳ ರಿಯಲ್ ಟೈಮ್ ಮಾಹಿತಿ ಲಭ್ಯ ಇರಲಿದೆ.

news18-kannada
Updated:May 9, 2021, 1:51 PM IST
SearchMyBed.com - ಖಾಸಗಿ ಆಸ್ಪತ್ರೆಗಳ ಬೆಡ್ ಬಗ್ಗೆ ರಿಯಲ್ ಟೈಮ್ ಮಾಹಿತಿ: ಪ್ರತ್ಯೇಕ ಪೋರ್ಟಲ್ ಉದ್ಘಾಟನೆ
ಡಾ.ಕೆ. ಸುಧಾಕರ್.
  • Share this:
ಬೆಂಗಳೂರು(ಮೇ 09): ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿದ್ದು ರೋಗಿಗಳಿಗೆ ಬೆಡ್​ಗಳು ಸಿಗುವುದೇ ದುಸ್ತರ ಎನ್ನುವಂತಾಗಿದೆ. ಬಿಬಿಎಂಪಿ ವಾರ್ ರೂಮ್ ಗಲಾಟೆ ಬಳಿಕ ಜನರಿಗೆ ಬೆಡ್​ಗಳ ಬಗ್ಗೆ ಆತಂಕ ಸಹಜವಾಗಿಯೇ ಇನ್ನಷ್ಟು ಹೆಚ್ಚಾಗಿದೆ. ಇಂಥ ಹೊತ್ತಲ್ಲಿ ಜನರಿಗೆ ಒಂದಷ್ಟು ಸಮಾಧಾನ ತರುವಂತಹ ಬೆಳವಣಿಗೆ ನಡೆದಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿರುವ ಕೋವಿಡ್ ಬೆಡ್​ಗಳು ಎಷ್ಟು ಎಂಬ ಮಾಹಿತಿಯನ್ನು ರಿಯಲ್ ಟೈಮ್​ನಲ್ಲಿ ಒದಗಿಸುವ ಜಾಲತಾಣವನ್ನು ಇಂದು ಉದ್ಘಾಟಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ (PHANA) ರಚಿಸಿರುವ ಸರ್ಚ್ ಮೈ ಬೆಡ್ (SearchMyBed.com) ಪೋರ್ಟಲ್ ಅನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಇಂದು ಉದ್ಘಾಟಿಸಿದರು. ಕೆಪಿಎಂಇ ಅಡಿಯಲ್ಲಿ ನೊಂದಣಿ ಆಗಿರುವ ಆಸ್ಪತ್ರೆಗಳಲ್ಲಿನ ಬೆಡ್​ಗಳ ಮಾಹಿತಿ ಈ ಪೋರ್ಟಲ್​ನಲ್ಲಿ ಇರಲಿದೆ. ಈಗಾಗಲೇ 90ಕ್ಕೂ ಹೆಚ್ಚು ಆಸ್ಪತ್ರೆಗಳ ಮಾಹಿತಿ ಇದರಲ್ಲಿ ಇದೆ.

ಸರ್ಚ್ ಮೈ ಬೆಡ್ ಪೋರ್ಟಲ್ ಉದ್ಘಾಟಿಸಿದ ಸಚಿವ ಸುಧಾಕರ್, ಫನಾ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು. ಇತ್ತೀಚೆಗೆ ಎಲ್ಲವೂ ಕುಡ ಸ್ವಾರ್ಟ್ ಆಗುತ್ತಿದೆ. ತಂತ್ರಜ್ಞಾನದಿಂದ ನಮ್ಮ ಜೀವನ ಸುಲಭವಾಗಿದೆ. ನಮ್ಮ ಹೆಲ್ತ್ ಸೆಕ್ಟರ್ ಅನೇಕ ಟೆಕ್ನಾಲಜಿಗಳನ್ನ ಅಳವಡಿಸಿಕೊಳ್ಳುತ್ತಿದೆ. ಇವತ್ತಿನ ಅನೇಕ ಸವಾಲುಗಳನ್ನ ಎದುರಿಸಲು ಇದು ಬಹಳ ಸಹಾಯಕವಾಗುತ್ತಿದೆ. ಈಗ ಈ ಪೋರ್ಟಲ್​ನಿಂದ ಜನರಿಗೆ ಬೆಡ್​ಗಳ ಬಗ್ಗೆ ಮಾಹಿತಿ ತಿಳಿಯಲು ಉಪಯೋಗ ಆಗುತ್ತದೆ. ಇದರಿಂದ ರೋಗಿಗಳ ಅಮೂಲ್ಯ ಸಮಯವನ್ನ ಉಳಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು.

ಇದನ್ನೂ ಓದಿ: Corona Vaccine: ಅಂತೂ ಇಂತೂ ಲಸಿಕೆ ಬಂತು, ರಾಜ್ಯದಲ್ಲಿ ನಾಳೆಯಿಂದಲೇ 18-44 ವರ್ಷ ವಯೋಮಾನದವರಿಗೆ ಕೋವಿಡ್ ವ್ಯಾಕ್ಸಿನ್ !

ಫನಾ ಅಭಿವೃದ್ಧಿಪಡಿಸಿರುವ ಸರ್ಚ್ ಮೈ ಬೆಡ್ ಪೋರ್ಟಲ್ ಅನ್ನು ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದರು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲೇ ಈ ವ್ಯವಸ್ಥೆ ಆಗಬೇಕಿತ್ತು. ಡಿಜಿಟಲ್ ಯುಗದಲ್ಲಿ ರಿಯಲ್ ಟೈಮ್​ನಲ್ಲಿ ಬೆಡ್ ಸ್ಟೇಟಸ್ ಅಗತ್ಯ ಇದೆ. ಪೋರ್ಟಲ್ ಸಹಾಯವಾಗಬೇಕು ಅಂದರೆ ರಿಯಲ್ ಟೈಮ್​ನಲ್ಲಿ ಬೆಡ್ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು. ಹತ್ತು ದಿನದಲ್ಲಿ ಈ ಪೋರ್ಟಲ್ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಆನ್​ಲೈನ್​ನಲ್ಲಿ ಪೋರ್ಟಲ್ ಉದ್ಘಾಟನೆಗೂ ಮುನ್ನ ಆರೋಗ್ಯ ಸಚಿವ ಡಾ. ಸುಧಾಕರ್ ಅವರು PHANA ಸಂಘಟನೆ ಪ್ರತಿನಿಧಿಗಳ ಜೊತೆ ವರ್ಚುವಲ್ ಸಭೆ ನಡೆಸಿದರು. ಫನಾ ಅಧ್ಯಕ್ಷ ಡಾ. ಪ್ರಸನ್ನ ಸೇರಿ ಹಲವು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಸಂಸದ ತೇಜಸ್ವಿ ಸೂರ್ಯ ಅಲ್ಲದೇ, ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಆಸ್ಪತ್ರೆಗಳಿಂದ ಸರಿಯಾದ ರೀತಿಯಲ್ಲಿ ಹಾಸಿಗೆ ಸಿಗುತ್ತಿಲ್ಲ. ಇಂಥ ಹೊತ್ತಿನಲ್ಲಿ ಫನಾದಿಂದ ಈ ವ್ಯವಸ್ಥೆ ಆಗಿರುವುದು ನಿಜಕ್ಕೂ ಜನರಿಗೆ ಸಹಕಾರಿ ಆಗಲಿದೆ. ಈ ರಿಯಲ್ ಟೈಮ್ ಅಂಕಿ ಅಂಶಗಲು ನೈಜತೆಯಿಂದ ಇರಲಿದೆ ಎಂಬ ವಿಶ್ವಾಸ ಇದೆ. ಐಸಿಯು, ವೆಂಟಿಲೇಟರ್ ಬೆಡ್​ಗಳ ಅಗತ್ಯತೆ ಈಗ ಹೆಚ್ಚು ಇದೆ. ಮುಂದಿನ ದಿನಗಳಲ್ಲಿ ಇವುಗಳ ಪ್ರಮಾಣವನ್ನು ಇನ್ನೂ ಹೆಚ್ಚು ಮಾಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕೈಮೀರಿ ಹೋಗುತ್ತಿದ್ದು, ದಿಢೀರ್ ಸೋಂಕು ಹೆಚ್ಚಳಗೊಂಡು ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಬೇಕಾದ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿ ಬೆಡ್ ಮತ್ತು ಆಕ್ಸಿಜನ್​ಗಾಗಿ ಅಕ್ಷರಶಃ ಹಾಹಾಕಾರದ ಸ್ಥಿತಿ ಇದೆ. ಈ ಹೊತ್ತಿನಲ್ಲಿ ಸರ್ಚ್ ಮೈ ಬೆಡ್ ಪೋರ್ಟಲ್ ಒಂದು ಸಣ್ಣ ಸಹಾಯ ಆಗಲಿದೆ.
Published by: Vijayasarthy SN
First published: May 9, 2021, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories