ರಾಮನಗರದಲ್ಲಿ ವಲಸಿಗ ದಿನಗೂಲಿಗಳಿಗೆ ಸೌಕರ್ಯ ಕಲ್ಪಿಸಲು ಸಚಿವ ಶ್ರೀರಾಮುಲು ಸೂಚನೆ

ಸಾರ್ವಜನಿಕರು ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಿ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಬಿ. ಶ್ರೀರಾಮುಲು ಆಶ್ವಾಸನೆ ನೀಡಿದ್ಧಾರೆ.

ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ಸಂಸದ ಡಿಕೆ ಸುರೇಶ್

ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ಸಂಸದ ಡಿಕೆ ಸುರೇಶ್

 • News18
 • Last Updated :
 • Share this:
  ರಾಮನಗರ(ಮಾ. 28): ಆರೋಗ್ಯ ಸಚಿವ ಶ್ರೀರಾಮುಲು ಇಂದು ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಮನಗರ ಸೇರಿದಂತೆ ಕೆಲವು ಜಿಲ್ಲೆಗೆ ತಾನು ಭೇಟಿ ನೀಡಿದ್ದೇನೆ. ರಾಜ್ಯದಲ್ಲಿ 75 ಪಾಸಿಟಿವ್ ಕೇಸ್​ಗಳಿವೆ, ಅವರೆಲ್ಲರೂ ಅಬ್ಸರ್ವೇಶನ್​ನಲ್ಲಿದ್ದಾರೆ. ಮುಂದಿನ ಎರಡು ವಾರ ಬಹಳ ಮುಖ್ಯವಿದೆ ಎಂದರು.

  ನಿಮ್ಮ ಪ್ರಾಣ ರಕ್ಷಣೆಗೆ ಜಿಲ್ಲಾಡಳಿತ, ಸರ್ಕಾರ ಬದ್ಧವಾಗಿದೆ. 24 ಗಂಟೆಗಳ ಕಾಲ ಕೆಲಸ ಮಾಡಲಾಗುತ್ತಿದೆ. ಯಾರೂ ಹೊರಗೆ ಬರಬೇಡಿ, ಅವಶ್ಯಕತೆ ಇದ್ದರೆ ಆಚೆ ಬನ್ನಿ ಎಂದು ಜನರಲ್ಲಿ ರಾಮುಲು ಮನವಿ ಮಾಡಿದರು.

  ರಾಮನಗರದಲ್ಲಿ 134 ಜನರನ್ನು ನಿಗಾದಲ್ಲಿ ಇಡಲಾಗಿತ್ತು. ಇವರ ಪೈಕಿ 77 ಮಂದಿಯನ್ನ ವಾಪಸ್ ಮನೆಗೆ ಕಳುಹಿಸಲಾಗಿದೆ. ನಿಗಾದಲ್ಲಿ, ಹೋಮ್ ಕ್ವಾರಂಟೈನ್​ನಲ್ಲಿರುವವರು ಹೊರಗೆ ಬರದಂತೆ ನೋಡಲಾಗ್ತಿದೆ. ಸದ್ಯಕ್ಕೆ 80 ಬೆಡ್​ಗಳ ಐಸೋಲೇಷನ್ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್, ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನ ಹೊರದೇಶವಾದ ಚೀನಾ ಹಾಗೂ ಇತರೆ ದೇಶಗಳಿಂದ ತರಲಾಗುತ್ತದೆ. ಶೀಘ್ರವೇ ಬರಲಿದೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದರು.

  ಇದನ್ನೂ ಓದಿ: ಹೆದ್ದಾರಿಯಲ್ಲಿ ಸರಕು ಸಾಗಣೆಗೆ ಕರ್ನಾಟಕ ಪೊಲೀಸರಿಂದ ತಡೆ: ಪ್ರಧಾನಿಗೆ ಕೇರಳ ಸಿಎಂ ದೂರು

  ಈ ಬಗ್ಗೆ ಟಾಸ್ಕ್ ಫೋರ್ಸ್​ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಸಾರ್ವಜನಿಕರು ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಿ. ಆತಂಕಕ್ಕೆ ಒಳಗಾಗುವುದು ಬೇಡ. ಈಗ ಸಾವನ್ನಪ್ಪಿದವರು ವಯಸ್ಸಾದವರಾಗಿದ್ದಾರೆ. ರಾಮನಗರದ ವೈದ್ಯರು, ನರ್ಸ್​ಗಳಿಗೆ ನುರಿತ ವೈದ್ಯರ ಮೂಲಕ ತರಬೇತಿ ನೀಡಲಾಗುವುದು ಎಂದವರು ತಿಳಿಸಿದರು.

  ಕೊರೋನಾದಿಂದ ತುಮಕೂರು ವ್ಯಕ್ತಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಮಾತನಾಡಿದ ಶ್ರೀರಾಮುಲು, ಆತ ಬೇರೆ ಬೇರೆಯವರ ಜೊತೆ ಓಡಾಡಿದ್ದ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ ಎಂದರು.

  ಇದನ್ನೂ ಓದಿ: ಕೊರೋನಾ ಭೀತಿ: ಹಾಸನ ಜಿಲ್ಲೆಯ ಎಲ್ಲಾ ಸಂಪರ್ಕಗಳ ಕಡಿತಕ್ಕೆ ಉಸ್ತುವಾರಿ ಸಚಿವ ನಿರ್ಧಾರ

  ಇನ್ನು ಪ್ರಮುಖವಾಗಿ ಬಳ್ಳಾರಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ವಲಸೆ ಬಂದಿರುವ ದಿನಗೂಲಿ ಕಾರ್ಮಿಕರ ಸ್ಥಿತಿ ಈಗ ಸಾಕಷ್ಟು ಕಷ್ಟಕರವಾಗಿದೆ. ಅವರಿಗೆ ಕೂಲಿ ಕೆಲಸವೂ ಸಿಗುತ್ತಿಲ್ಲ. ಜೊತೆಗೆ ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಊಟಕ್ಕೂ ಸಮಸ್ಯೆಯಾಗಿದೆ. ಈ ವಿಚಾರವಾಗಿ ನ್ಯೂಸ್18 ವರದಿ ಪ್ರಸಾರ ಮಾಡಿತ್ತು. ವರದಿಯ ಹಿನ್ನೆಲೆ ಅಧಿಕಾರಿಗಳು ನಿನ್ನೆ ಚನ್ನಪಟ್ಟಣದ ಕೆಹೆಚ್​​ಬಿ ಬಡಾವಣೆಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಇವತ್ತಿನ ಸಭೆಯಲ್ಲಿ ಸಚಿವ ಶ್ರೀರಾಮುಲು ಈ ವಿಚಾರವಾಗಿ ಮಾತನಾಡಿದರು. ವಲಸೆ ಬಂದಿರುವ ದಿನಗೂಲಿ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಚನ್ನಪಟ್ಟಣ ಸೇರಿದಂತೆ ರಾಮನಗರ, ಕನಕಪುರ, ಮಾಗಡಿಯಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ ಕಾರ್ಮಿಕರಿದ್ದಾರೆಂಬ ಮಾಹಿತಿ ಲಭ್ಯವಿದೆ.

  ಈ ಸಭೆಯಲ್ಲಿ ಸಂಸದ ಡಿಕೆ ಸುರೇಶ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್​ಪಿ ಅನೂಪ್ ಎ ಶೆಟ್ಟಿ, ಡಿಎಚ್​ಒ ಡಾ. ನಿರಂಜನ್, ಸಿಇಒ ಇಕ್ರಂ ಹಾಗೂ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.

  ವರದಿ: ಎ.ಟಿ. ವೆಂಕಟೇಶ್

  First published: