• Home
 • »
 • News
 • »
 • coronavirus-latest-news
 • »
 • ಕಲಬುರ್ಗಿಯಲ್ಲಿ ಸಾವನ್ನಪ್ಪಿದ ವೃದ್ಧನಲ್ಲಿ ಯಾವುದೇ ಕೊರೋನಾ ಸೋಂಕಿರಲಿಲ್ಲ; ಬಿ ಶ್ರೀರಾಮುಲು

ಕಲಬುರ್ಗಿಯಲ್ಲಿ ಸಾವನ್ನಪ್ಪಿದ ವೃದ್ಧನಲ್ಲಿ ಯಾವುದೇ ಕೊರೋನಾ ಸೋಂಕಿರಲಿಲ್ಲ; ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ವೃದ್ಧರ ಸಾವಿಗೆ ಕೊರೋನಾ ಶಂಕೆ ಕಾರಣವಾಗಿದೆ ಎಂದು ಅವರ ಮಾಹಿತಿ ಬಹಿರಂಗ ಪಡಿಸಿದ ಹಿನ್ನೆಲೆ ಕಲ್ಬುರ್ಗಿ ಜಿಲ್ಲಾ ಆರೋಗ್ಯಾಧಿಕಾರಿಗೆ ಶೋಕಾಸ್ ನೋಟಿಸ್ ನೀಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. 

 • Share this:

  ಬೆಂಗಳೂರು (ಮಾ.11): ಸೌದಿಯಿಂದ ಮರಳಿದ ಬಳಿಕ ಸಾವನ್ನಪ್ಪಿದ್ದ ಕಲಬುರಗಿಯ 76 ವರ್ಷದ ವೃದ್ಧನಿಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. 


  ಕೊರೋನಾ ಶಂಕಿತ ವ್ಯಕ್ತಿ ಸಾವನ್ನಪ್ಪಿರುವ ಬೆನ್ನಲ್ಲೇ ಆರೋಗ್ಯ ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದರು. ಇದಾದ ಬಳಿಕ ಮಾತನಾಡಿದ ಅವರು ನನಗೆ ಬಂದ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯ ಗಂಟಲು ದ್ರಾವಣ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಸಾವನ್ನಪ್ಪಿದ ವೃದ್ಧರಿಗೆ ಯಾವುದೇ ಕೊರೋನಾ ಸೋಂಕಿರಲಿಲ್ಲ ಎಂದಿದ್ದಾರೆ.


  ಕಲಬುರ್ಗಿ ವ್ಯಕ್ತಿ ಹೈದ್ರಾಬಾದಲ್ಲೇ ಸಾವನ್ನಪ್ಪಿದ್ದಾರೆ. ಅವರು ಕೊರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿಲ್ಲ. ಫೆ.29ರಂದು ಸೌದಿಯಿಂದ ವಾಪಸಾಗಿದ್ದರು. ಹೈದ್ರಾಬಾದ್​​ಗೆ ಏರ್​ಪೋರ್ಟ್​ಗೆ ಬಂದಿದ್ದರು. ಮಾ.5ರಂದು ವೃದ್ಧನ ಪರೀಕ್ಷೆ ನಡೆದಿತ್ತು. ಮಾ.6ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾ. 9ರಂದು ಸ್ವಇಚ್ಛೆಯಿಂದ ಹೈದ್ರಾಬಾದ್​ಗೆ ಹೋಗಿದ್ದರು. ಅವರು ಅಸ್ತಮಾ, ಬಿಪಿ, ಹೈಪರ್ ಟೆನ್ಶನ್ ಬಳಲುತ್ತಿದ್ದರು. ಈ ಹಿನ್ನೆಲೆ ಚಿಕಿತ್ಸೆ ಪಡೆದಿದ್ದರು. ಅವರಲ್ಲಿ ಯಾವುದೇ ಕೊರೋನಾ ಲಕ್ಷಣಗಳಿವೆ ಎಂಬುದು ದೃಢಪಟ್ಟಿಲ್ಲ ಎಂದರು.


  ಇದನ್ನು ಓದಿ: ಕೊರೋನಾ ಶಂಕೆ: ಸೌದಿಯಿಂದ ಮರಳಿದ್ದ ವೃದ್ಧ ಸಾವು, ಸಂಜೆ ಸಿಗಲಿದೆ ಖಚಿತ ಮಾಹಿತಿ, ಆತಂಕದ ಅಗತ್ಯವಿಲ್ಲ


  ಇನ್ನು ರಾಜ್ಯದಲ್ಲಿ ಕೊರೊನಾ ಸಂಬಂಧ 1 ಲಕ್ಷ ಜನರ ತಪಾಸಣೆಗೆ ಒಳಪಡಿಸಲಾಗಿದ್ದು, ಒಟ್ಟು 7 ಜನರನ್ನು ಶಂಕಿತರು ಎಂದು ಗುರುತಿಸಲಾಗಿದೆ. 7 ಜನರಲ್ಲಿ ಐವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಹಲವರು ಭಯದಿಂದ ಆಸ್ಪತ್ರೆಗೆ ಬಂದಿದ್ದಾರೆ. 1142 ಜನ ಸ್ವಯಂಪ್ರೇರಿತರಾಗಿ ಬಂದಿದ್ದಾರೆ ಎಂದು ತಿಳಿಸಿದರು.


  ಜಿಲ್ಲಾ ಆರೋಗ್ಯಾಧಿಕಾರಿಗೆ ನೋಟಿಸ್​


  ಇನ್ನು ವೃದ್ಧರ ಸಾವಿಗೆ ಕೊರೋನಾ ಶಂಕೆ ಕಾರಣವಾಗಿದೆ ಎಂದು ಅವರ ಮಾಹಿತಿ ಬಹಿರಂಗಪಡಿಸಿದ ಹಿನ್ನೆಲೆ ಕಲ್ಬುರ್ಗಿ ಜಿಲ್ಲಾ ಆರೋಗ್ಯಾಧಿಕಾರಿಗೆ ಶೋಕಾಸ್ ನೋಟಿಸ್ ನೀಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಕೊರೋನಾ ಶಂಕಿತರ ಹೆಸರನ್ನು, ವಿವರವನ್ನು ಬಹಿರಂಗಪಡಿಸಬಾರದು ಎಂಬ ನಿಯಮ ಮೀರಿ  ವೃದ್ಧ ಸಾವನ್ನಪ್ಪುತ್ತಿದ್ದಂತೆ ಅವರ ಹೆಸರು, ವಿವರವನ್ನು ಬಹಿರಂಗಪಡಿಸಲಾಗಿತ್ತು. ಈ ಹಿನ್ನೆಲೆ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

  Published by:Seema R
  First published: