HOME » NEWS » Coronavirus-latest-news » HEALTH MINISTER SRIRAMULU CONDUCTS MEETING WITH AYUSH DOCTORS ON THEIR DEMANDS HK

ಎಂಬಿಬಿಎಸ್ ವೈದ್ಯರಿಗೆ ಸಮಾನಾದ ವೇತನಕ್ಕೆ ಬೇಡಿಕೆ: ಆಯುಷ್ ವೈದ್ಯರ ಜೊತೆ ಆರೋಗ್ಯ ಸಚಿವರ ಸಭೆ

ಎಂಬಿಬಿಎಸ್ ವೈದ್ಯರ ಸಮನಾಗಿ ಆಯುಷ್ ವೈದ್ಯರು ವೇತನ ಕೇಳಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಒಂದು ಸಮಿತಿ ಮಾಡುತ್ತೇವೆ. ಆ ಸಮಿತಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು

news18-kannada
Updated:May 26, 2020, 2:14 PM IST
ಎಂಬಿಬಿಎಸ್ ವೈದ್ಯರಿಗೆ ಸಮಾನಾದ ವೇತನಕ್ಕೆ ಬೇಡಿಕೆ: ಆಯುಷ್ ವೈದ್ಯರ ಜೊತೆ ಆರೋಗ್ಯ ಸಚಿವರ ಸಭೆ
ಸಚಿವ ಶ್ರೀರಾಮುಲು
  • Share this:
ಬೆಂಗಳೂರು(ಮೇ. 26): ಆಯುಷ್ ವೈದ್ಯ ಸಿಬ್ಬಂದಿ ವೇತನ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಬಹಳ ದಿನದಿಂದ ಕೇಳಿ ಬರುತ್ತಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದರು.

ವಿಧಾನಸೌಧದಲ್ಲಿ ಆಯುಷ್ ವೈದ್ಯ ಸಿಬ್ಬಂದಿ ಜೊತೆಗೆ ನಡೆದ ಸಭೆ ಬಗ್ಗೆ ಮಾತನಾಡಿದ ಅವರು, ಎಂಬಿಬಿಎಸ್ ವೈದ್ಯರ ಸಮನಾಗಿ ಆಯುಷ್ ವೈದ್ಯರು ವೇತನ ಕೇಳಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಒಂದು ಸಮಿತಿ ಮಾಡುತ್ತೇವೆ. ಆ ಸಮಿತಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಕೊಡಿ ಎಂದು ಹೇಳಿದ್ದಾರೆ. ಪ್ರಧಾನಿಗಳು  ಹೇಳಿದಂತೆ ಆಯುಷ್ ಚಿಕಿತ್ಸೆಗೆ ನಾವು ಹೆಚ್ಚು ಆದ್ಯತೆ ಕೊಡುತ್ತೇವೆ  ಎಂದು ತಿಳಿಸಿದರು.

ಇದೇ ವೇಳೆ, ಮಾಗಡಿಯಲ್ಲಿ ಕೆಎಸ್ಆರ್​ಟಿಸಿ ಚಾಲಕನಿಗೆ ಕೊರೋನಾ ಬಂದ ವಿಚಾರದ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು, ಆ ಚಾಲಕನ ಸಂಪರ್ಕದಲ್ಲಿ ಇದ್ದವರಿಗೆ ಪರೀಕ್ಷೆ ಮಾಡುತ್ತೇವೆ. ಜೊತೆಗೆ ಕೆಎಸ್ಆರ್​ಟಿಸಿಯ ಎಲ್ಲ ಸಿಬ್ಬಂದಿಗೂ ಕೊರೋನಾ ಟೆಸ್ಟ್ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.

ಡ್ರೈವರ್​ಗೆ ಕೊರೋನಾ ಬಂದಿದ್ದರಿಂದ ಅವರ ಜೊತೆಗೆ ಪ್ರಯಾಣಿಸಿದವರನ್ನ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ. ಕೆಎಸ್​ಆರ್​ಟಿಸಿ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರು; ರೆಡ್ ಝೋನ್ ಹಾಗೂ ಕಂಟೋನ್ಮೆಂಟ್ ಝೋನ್​ನಿಂದ ಬಂದು ಕೆಲಸ ಮಾಡುತ್ತಿರುವವರಿಗೂ, ಜೊತೆಗೆ ಅವರ ಸಂಪರ್ಕದಲ್ಲಿ ಇರುವವರಿಗೂ ಟೆಸ್ಟ್ ಮಾಡಲಾಗುವುದು ಎಂದರು.

ಇದನ್ನೂ ಓದಿ : ಲಾಕ್​ಡೌನ್​ ಎಫೆಕ್ಟ್: ಬಿದಿಗೆ ಬಿದ್ದ ಮೇದಾರರ ಬದುಕು; ದೇಶೀ ವಸ್ತುಗಳಿಗೆ ಆದ್ಯತೆ ಸಿಕ್ಕರೆ ಮಾತ್ರ ಮೇದಾರರು ಬಚಾವ್

ರಾಜ್ಯಾದ್ಯಂತ ಕೊರೋನಾ ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಟೆಸ್ಟ್ ಮಾಡಿಸಲು ಇಲಾಖೆಯು ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಕೆಎಸ್​ಆರ್​ಟಿಸಿ ಸಿಬ್ಬಂದಿ ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

 

 
First published: May 26, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories