WHO ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್

Health Minister Dr. Harsh Vardhan: ಒಟ್ಟು ಮೂರು ವರ್ಷದ ಅವಧಿಗೆ ಈ ನೇಮಕಾತಿ ನಡೆದಿದೆ. ಮೊದಲ ವರ್ಷ ಡಾ. ಹರ್ಷ್ ವರ್ಧನ್ ಅವರು ಛೇರ್ಮನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ವರ್ಷ ಬೇರೆ ದೇಶಗಳ ಪ್ರತಿನಿಧಿಗಳು ಆ ಸ್ಥಾನ ನಿರ್ವಹಿಸಲಿದ್ಧಾರೆ.

ಕೇಂದ್ರ ಸಚಿವ ಹರ್ಷವರ್ಧನ್​​

ಕೇಂದ್ರ ಸಚಿವ ಹರ್ಷವರ್ಧನ್​​

  • News18
  • Last Updated :
  • Share this:
    ನವದೆಹಲಿ(ಮೇ 20): ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಎಕ್ಸಿಕ್ಯೂಟಿವ್ ಬೋರ್ಡ್​ನ ಛೇರ್ಮನ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮಾಹಿತಿ ಬಂದಿದೆ. ಜಪಾನ್​ನ ಡಾ. ಹಿರೋಕಿ ನಕಾಟಾನಿ ಅವರ ಸ್ಥಾನವನ್ನು ಹರ್ಷ್ ವರ್ಧನ್ ತುಂಬಲಿದ್ದಾರೆ. 34 ಸದಸ್ಯರಿರುವ ಡಬ್ಲ್ಯೂಎಚ್​ಒ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಹರ್ಷ್ ವರ್ಧನ್ ಅವರು ಮೇ 22, ಶುಕ್ರವಾರದಂದು ಅಧಿಕಾರ ಸ್ವೀಕರಿಸುವ ನಿರೀಕ್ಷೆ ಇದೆ.

    ಡಬ್ಲ್ಯೂಎಚ್​ಒಯಲ್ಲಿನ ಈ ನೇಮಕಾತಿ ಪೂರ್ವನಿಗದಿತವಾಗಿತ್ತು. ಆದರೆ, ಅನಿರೀಕ್ಷಿತವೆನಿಸಿರುವುದು ಡಾ. ಹರ್ಷ್ ವರ್ಧನ್. ಸಾಮಾನ್ಯವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು ತನ್ನ ಸಚಿವರನ್ನೇ ಆ ಸ್ಥಾನಕ್ಕೆ ಕೂರಿಸಲು ನಿರ್ಧರಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ಸೇರಿದಂತೆ ಮೂರು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ನೀಡಲು ಕಳೆದ ವರ್ಷವೇ ನಿರ್ಧರಿಸಲಾಗಿತ್ತು. ಅದರಂತೆ, ನಿನ್ನೆ ಮಂಗಳವಾರ ನಡೆದ 194 ಸದಸ್ಯ ಬಲದ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಭಾರತಕ್ಕೆ ಎಕ್ಸಿಕ್ಯೂಟಿವ್ ಬೋರ್ಡ್ ಛೇರ್ಮನ್ ಸ್ಥಾನ ನೀಡಲು ಅಂಕಿತ ಹಾಕಲಾಗಿತ್ತು.

    ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರಲಿದೆಯೇ ಅಮೆರಿಕ; WHO ಗೆ ಪತ್ರ ಬರೆದು ಬೆದರಿಸಿರುವ ಟ್ರಂಪ್

    ಒಟ್ಟು ಮೂರು ವರ್ಷದ ಅವಧಿಗೆ ಈ ನೇಮಕಾತಿ ನಡೆದಿದೆ. ಮೊದಲ ವರ್ಷ ಡಾ. ಹರ್ಷ್ ವರ್ಧನ್ ಅವರು ಛೇರ್ಮನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ವರ್ಷ ಬೇರೆ ದೇಶಗಳ ಪ್ರತಿನಿಧಿಗಳು ಆ ಸ್ಥಾನ ನಿರ್ವಹಿಸಲಿದ್ಧಾರೆ.

    ಕೇಂದ್ರ ಸಚಿವರಾಗಿರುವ ಹರ್ಷ್ ವರ್ಧನ್ ಅವರು ಡಬ್ಲ್ಯೂಎಚ್​ಒದಲ್ಲಿ ಪೂರ್ಣಾವಧಿ ಕರ್ತವ್ಯ ನಿಭಾಯಿಸುವ ಅಗತ್ಯ ಇರುವುದಿಲ್ಲ. ವರ್ಷಕ್ಕೆ ಎರಡು ಬಾರಿ ನಡೆಯುವ ಸಭೆಗಳ ನೇತೃತ್ವ ವಹಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಆರೋಗ್ಯ ಕ್ಷೇತ್ರಗಳಲ್ಲಿ ತಾಂತ್ರಿಕವಾಗಿ ಪರಿಣಿತರಾಗಿರುವ ವ್ಯಕ್ತಿಗಳನ್ನು ಈ ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಮಾಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಹೆಲ್ತ್ ಅಸೆಂಬ್ಲಿಯ ನಿರ್ಧಾರ ಮತ್ತು ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅನುವಾಗುವಂತೆ ವಾತಾವರಣ ನಿರ್ಮಿಸುವುದು ಎಕ್ಸಿಕ್ಯೂಟಿವ್ ಬೋರ್ಡ್​ನ ಪ್ರಮುಖ ಕೆಲಸವಾಗಿರುತ್ತದೆ.
    First published: