• Home
 • »
 • News
 • »
 • coronavirus-latest-news
 • »
 • ರಾಜ್ಯದಲ್ಲಿ ನಿತ್ಯ 10 ಸಾವಿರ ಕೊರೋನಾ ಪರೀಕ್ಷೆಯ ಗುರಿ ; ಸಚಿವ ಶ್ರೀರಾಮುಲು

ರಾಜ್ಯದಲ್ಲಿ ನಿತ್ಯ 10 ಸಾವಿರ ಕೊರೋನಾ ಪರೀಕ್ಷೆಯ ಗುರಿ ; ಸಚಿವ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಲಾಕ್‌ಡೌನ್ ಸಡಿಲಿಕೆ ಬಳಿಕ ಜನ ಸಾಮಾಜಿಕ ಅಂತರ ಮರೆತಿದ್ದಾರೆ. ಜನ ಸಹಕಾರ ಕೊಡಬೇಕು. ಇಲ್ಲದಿದ್ದರೆ ಮತ್ತೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ

 • Share this:

  ಧಾರವಾಡ(ಮೇ.08): ರಾಜ್ಯದಲ್ಲಿ 32 ಲ್ಯಾಬ್ ಕೆಲಸ ಮಾಡುತ್ತಿವೆ. ಇನ್ನೂ ಹೆಚ್ಚು ಲ್ಯಾಬ್​ಗಳಿಗೆ ಬೇಡಿಕೆಯಿದ್ದು, ದಿನಕ್ಕೆ‌ ಈಗ 7 ರಿಂದ 8 ಸಾವಿರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಮುಂದಿನ ವಾರದೊಳಗೆ ದಿನಕ್ಕೆ ಹತ್ತು ಸಾವಿರ ಟೆಸ್ಟ್ ಆಗುವಂತೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.


  ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 750 ಪಾಸಿಟಿವ್ ಕೇಸ್ ಆಗಿವೆ. 376 ಜನರು ಗುಣಮುಖರಾಗಿದ್ದಾರೆ. ಗುಣಮುಖರಾಗುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ವಿದೇಶಗಳಿಂದ ಬರುವವರಿಗೆ ಕಡ್ಡಾಯ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.


  ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೆಂಟ್ರಲೈಜೆಷನ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ಇಡೀ ರಾಜ್ಯದಲ್ಲಿ ಫೀವರ್ ಕ್ಲಿನಿಕ್‌ಗಳು ಜಾಸ್ತಿಯಾಗಬೇಕಿದೆ. ಐಸಿಎಂಆರ್‌ದಿಂದ 75 ಜಿಲ್ಲೆಗಳಲ್ಲಿ ಕೊರೋನಾ ಸಂಬಂಧ ಅಧ್ಯಯನ ನಡೆದಿದೆ ಎಂದು ಸಚಿವರು ತಿಳಿಸಿದರು.


  ಲಾಕ್‌ಡೌನ್ ಸಡಿಲಿಕೆ ಬಳಿಕ ಜನ ಸಾಮಾಜಿಕ ಅಂತರ ಮರೆತಿದ್ದಾರೆ. ಜನ ಸಹಕಾರ ಕೊಡಬೇಕು. ಇಲ್ಲದಿದ್ದರೆ ಮತ್ತೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಎಚ್ಚರಿಕೆ ಕೂಡ ನೀಡಿದರು.


  ಸೊಂಕಿತ ವ್ಯಕ್ತಿಯಿಂದ ಜನರಿಗೆ ಆತಂಕ: 


  ಧಾರವಾಡಕ್ಕೆ ಆತಂಕ ತಂದಿಟ್ಟಿರುವ ಕೊರೋನಾ ಸೋಂಕಿತ ಪಿ-705 ವ್ಯಕ್ತಿ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ಸೋಂಕಿತ ವ್ಯಕ್ತಿಯಿಂದ ಜಿಲ್ಲೆಯ ಜನರಿಗೆ ಶಾಕ್ ಆಗಿದೆ. ಆಸ್ಪತ್ರೆಗೂ ಮುಂಚೆ ಎಪಿಎಂಸಿ ಸೆರಿದಂತೆ ನಗರದ ವಿವಿಧ ಬೀದಿಗಳಿಗೆ ಭೇಟಿ ನೀಡಿದ ಈ ಮೆಣಸಿನಕಾಯಿ ವ್ಯಾಪಾರಿ, ಧಾರವಾಡದ ಎರಡು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದ. ಬಳಿಕ ಮಾ. 5 ರಿಂದ 9 ರವರಗೆ ಸಾಧನಕೆರೆಯ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಚಿಕಿತ್ಸೆ ಪಡೆದಿದ್ದು. ನಂತರ ಮಾರ್ಚ್ 9 ಕ್ಕೆ ಸಪ್ತಾಪುರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿತ್ತು. ಆಸ್ಪತ್ರೆ ಅಲೆದಾಟಕ್ಕೂ ಮುಂಚೆ ನಗರದ ವಿವಿಧೆಡೆ ಓಡಾಟ ನಡೆಸಿದ್ದ. ಧಾರವಾಡದ ಹೊಸಯಲ್ಲಾಪುರ, ಶೀಲವಂತರ ಓಣಿ, ಮುರುಘಾಮಠ, ಕೊಪ್ಪದಕೆರೆ, ಎಂ.ಬಿ. ನಗರ, ಹಾಗೂ ಹುಬ್ಬಳ್ಳಿ ಎಪಿಎಂಸಿಗೆ ಭೇಟಿ ನೀಡಿದ್ದ. ಸೋಂಕಿತ ವ್ಯಕ್ತಿಯ ಈ ವ್ಯಾಪಕ ಸಂಚಾರವು ಧಾರವಾಡಿಗರಿಗೆ ಆತಂಕ ಸೃಷ್ಟಿಸಿದೆ.


  ಇದನ್ನೂ ಓದಿ : ದೊಡ್ಡವರ ಮಕ್ಕಳಿಂದ ಲಾಕ್ ಡೌನ್ ಉಲ್ಲಂಘನೆ: ಕೊಡಗಿನ ಹೋಂ ಸ್ಟೇಗೆ ಬೀಗ ...!!

  Published by:G Hareeshkumar
  First published: