• Home
 • »
 • News
 • »
 • coronavirus-latest-news
 • »
 • ದಾವಣಗೆರೆಯಲ್ಲಿ ಮೂವರು ಕೊರೋನಾ ಸೋಂಕಿತರು ಗುಣಮುಖ; ಜಿಲ್ಲಾಡಳಿತಕ್ಕೆ ಸಚಿವ ಶ್ರೀರಾಮುಲು ಅಭಿನಂದನೆ

ದಾವಣಗೆರೆಯಲ್ಲಿ ಮೂವರು ಕೊರೋನಾ ಸೋಂಕಿತರು ಗುಣಮುಖ; ಜಿಲ್ಲಾಡಳಿತಕ್ಕೆ ಸಚಿವ ಶ್ರೀರಾಮುಲು ಅಭಿನಂದನೆ

ಶ್ರೀರಾಮುಲು

ಶ್ರೀರಾಮುಲು

ನಿಮ್ಮ ಪ್ರಾಣ ಉಳಿಸಲು ನಾವು ಸದಾ ಸಿದ್ದರಿದ್ದೇವೆ, ಯಾರೂ ಹೊರಗಡೆ ಬರಬೇಡಿ. ನಿಮಗೋಸ್ಕರ ನಾವೂ ಕೆಲಸ ಮಾಡುತ್ತಿದ್ದೇವೆ ದಯವಿಟ್ಟು ಜನರು ಸರ್ಕಾರದ ಆದೇಶ ಪಾಲಿಸಿ ಎಂದು ಸಚಿವ ಶ್ರೀರಾಮುಲು ಮನವಿ ಮಾಡಿದರು.

 • Share this:

  ದಾವಣಗೆರೆ: ದಾವಣಗೆರೆಯಲ್ಲಿ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾದಾಗ ಆತಂಕ ಸೃಷ್ಟಿಯಾಗಿತ್ತು. ಇದೀಗ ಮೂವರು ಗುಣಮುಖರಾಗಿದ್ದಾರೆ. ಕೊರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

  ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು,  ರಾಜ್ಯದಲ್ಲೂ ಕೂಡ ಪಾಸಿಟಿವ್ ಇದ್ದವರು ಗುಣಮುಖರಾಗಿದ್ದಾರೆ. 258 ಪಾಸಿಟಿವ್ ಕೇಸ್ ಹಾಗೂ 65 ಜನರು ಗುಣಮುಖರಾಗಿದ್ದಾರೆ. ದೇವರ ದಯೆಯಿಂದ ರಾಜ್ಯ ಮೂರನೇ ಸ್ಥಾನದಿಂದ ಹನ್ನೆರಡನೇ ಸ್ಥಾನಕ್ಕೆ ಬಂದಿದೆ. ಸೂರ್ಯನ ಕಿರಣ ಹೆಚ್ಚು ಬೀಳುವ ಪ್ರದೇಶದಲ್ಲಿ ಕೊರೋನಾ ಸೋಂಕು ಇಲ್ಲ ಎಂದು ತಿಳಿಸಿದರು.

  ಒಂದು ಸಾವಿರ ಐಸಿಯು ಬೆಡ್, ಆರು ಸಾವಿರ ಐಸೋಲೆಷನ್ ವಾರ್ಡ್ ತೆರೆಯಲಾಗಿದೆ. ಒಂದು ಲಕ್ಷ ಪಾಸಿಟಿವ್ ಕೇಸ್ ಬಂದರೂ ನಿಭಾಯಿಸುವ ಶಕ್ತಿ ಇದೆ. ದಾವಣಗೆರೆ ಜಿಲ್ಲೆಯ ಪರಿಶೀಲನೆ ಸಭೆಯಲ್ಲಿ ಸಿಎಂ ಸಲಹೆಯಂತೆ ಅಧಿಕಾರಿಗಳಿಗೆ ತಿಳಿಸಿದ್ದೆನೆ. ಈಗಾಗಲೇ  ವೆಂಟಿಲೆಟರ್ ಖರೀದಿ‌ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ ಇನ್ನೆರೆಡು ದಿನದಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಯಾಗಲಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಕಿಟ್ ಕೊಡಲು ಐಸಿಎಂಆರ್ ಜೊತೆ ಮಾತನಾಡಿದ್ದೆವೆ. ನಿಮ್ಮ ಪ್ರಾಣ ಉಳಿಸಲು ನಾವು ಸದಾ ಸಿದ್ದರಿದ್ದೇವೆ, ಯಾರೂ ಹೊರಗಡೆ ಬರಬೇಡಿ. ನಿಮಗೋಸ್ಕರ ನಾವೂ ಕೆಲಸ ಮಾಡುತ್ತಿದ್ದೇವೆ ದಯವಿಟ್ಟು ಜನರು ಸರ್ಕಾರದ ಆದೇಶ ಪಾಲಿಸಿ ಎಂದು ಸಚಿವ ಶ್ರೀರಾಮುಲು ಮನವಿ ಮಾಡಿದರು.

  ಇದನ್ನು ಓದಿ: ವಿಜಯಪುರದಲ್ಲಿ ಕೊರೋನಾಗೆ ಮೊದಲ ಬಲಿ; ರಾಜ್ಯದಲ್ಲಿ 9ಕ್ಕೇರಿದ ಸಾವಿನ ಸಂಖ್ಯೆ


   

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು