Covaxin: ಕೋವಾಕ್ಸಿನ್​ ಲಸಿಕೆ ಚುಚ್ಚಿಸಿಕೊಂಡ ಹರಿಯಾಣ ಆರೋಗ್ಯ ಸಚಿವ ಅನಿಲ್​ ವಿಜ್

67 ವರ್ಷದ ಬಿಜೆಪಿ ನಾಯಕರಿಗೆ ವೈದ್ಯರ ಸಲಹೆಯಂತೆ ನಿರ್ದಿಷ್ಟ ಡೋಸ್​ ನೀಡಲಾಯಿತು

ಆರೋಗ್ಯ ಸಚಿವ ಅನಿಲ್​ ವಿಜ್​

ಆರೋಗ್ಯ ಸಚಿವ ಅನಿಲ್​ ವಿಜ್​

  • Share this:
    ಚಂಡೀಗಢ (ನ.20) ಭಾರತ್​ ಬಯೋಟೆಕ್​ನಿಂದ ಅಭಿವೃದ್ಧಿ ಪಡಿಸಲಾಗಿರುವ ಕೋವಾಕ್ಸಿನ್​ ಲಸಿಕೆಯನ್ನು ಹರಿಯಾಣ ಆರೋಗ್ಯ ಸಚಿವ ಅನಿಲ್​ ವಿಜ್​ ಚುಚ್ಚುಸಿಕೊಂಡಿದ್ದಾರೆ. ಇಲ್ಲಿನ ಅಂಬಾಲ ಕ್ಯಾಂಟ್​ನ ಸಿವಿಲ್​ ಆಸ್ಪತ್ರೆಯಲ್ಲಿ ಅವರು ಈ ಲಸಿಕೆ ಪಡೆದಿದ್ದಾರೆ. ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಚಿವರು ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ. 67 ವರ್ಷದ ಬಿಜೆಪಿ ನಾಯಕರಿಗೆ ವೈದ್ಯರ ಸಲಹೆಯಂತೆ ನಿರ್ದಿಷ್ಟ ಡೋಸ್​ ನೀಡಲಾಯಿತು. ಅಂಬಾಲ ಕ್ಯಾಂಟ್​ ಶಾಸಕರಾಗಿರುವ ಅವರು ರಾಜ್ಯದಲ್ಲಿ ನ.20ರಿಂದ ಮೂರನೇ ಹಂತದ ತಯಾರಿಕಾ ಲಸಿಕೆ ಶುರುವಾಗಲಿದ್ದು, ಸ್ವಯಂಪ್ರೇರಿತರಾಗಿ ಈ ಲಸಿಕೆ ಪಡೆದಿದ್ದಾಗಿ ತಿಳಿಸಿದ್ದಾರೆ.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​​) ಸಹಯೋಗದೊಂದಿಗೆ ಭಾರತ್​ ಬಯೋಟೆಕ್​ ಕೋವಾಕ್ಸಿನ್​ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಲಸಿಕೆ ಈಗಾಗಲೇ ಮೊದಲ ಮತ್ತು ಎರಡನೇ ಹಂತದ ಮಾನವ ಪ್ರಯೋಗದಲ್ಲಿ ಯಶಸ್ವಿಯಾಗಿದೆ, ಮೂರನೇ ಹಂತದ ಪ್ರಯೋಗಗಳನ್ನು ಪ್ರಾರಂಭವಾಗಿದೆ.



    ಕೋವಾಕ್ಸಿನ್​ ಪ್ರಯೋಗವು ದೇಶದ 25 ಕೇಂದ್ರಗಳಲ್ಲಿ 26 ಸಾವಿರು ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಸಲಿದೆ ಎಂದು ಭಾರತ್​ ಬಯೋಟೇಕ್​ ತಿಳಿಸಿದೆ. ಐಸಿಎಂಆರ್​ ಸಹಭಾಗಿತ್ವದಲ್ಲಿ ಇದನ್ನು ನಡೆಸಲಾಗುತ್ತಿದೆ. ದೇಶದಲ್ಲಿ ಅತಿದೊಡ್ಡ ಕ್ಲಿನಿಕಲ್​ ಪ್ರಯೋಗ ಇದಾಗಿದೆ.

    ಕೋವಿಡ್​ 19ಗೆ ಭಾರತದ ಮೊದಲ ಪರಿಣಾಮಕಾರಿ ಲಸಿಕೆ ಅಧ್ಯಯನ ಇದಾಗಿದೆ. ಇದುವರೆಗೂ ನಡೆಸಿದ ಹಂತಗಳಲ್ಲಿ ಈ ಲಸಿಕೆ ಯಶಸ್ವಿಯಾಗಿದೆ. ಈಗ ಮೂರನೇ ಹಂತದಲ್ಲಿ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಯೋಗ ನಡೆಸಲಾಗುತ್ತಿದೆ. ಜುಲೈನಲ್ಲಿ ರೋಹ್ಟಕ್​ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯಲ್ಲಿ ಮಾನವ ಪ್ರಯೋಗವನ್ನು ಜುಲೈನಿಂದ ಆರಂಭಿಸಲಾಗಿದೆ ಎಂದು ವಿಜ್​ ಈ ಹಿಂದೆ ತಿಳಿಸಿದ್ದರು.
    Published by:Seema R
    First published: