ಆರೋಗ್ಯ ಇಲಾಖೆ ಯಡವಟ್ಟು: ಕೊರೋನಾದಿಂದ ಗುಣಮುಖರಾದ ಬಳಿಕ ವ್ಯಕ್ತಿ ಮನೆ ಸೀಲ್​ಡೌನ್​​

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ 32 ವರ್ಷದ ವ್ಯಕ್ತಿಗೆ ಜುಲೈ 25ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದುಕೊಂಡು ಆಗಸ್ಟ್ 3ರಂದು ಡಿಸ್ಚಾರ್ಜ್ ಮಾಡಲಾಗಿತ್ತು.

news18-kannada
Updated:August 4, 2020, 9:51 PM IST
ಆರೋಗ್ಯ ಇಲಾಖೆ ಯಡವಟ್ಟು: ಕೊರೋನಾದಿಂದ ಗುಣಮುಖರಾದ ಬಳಿಕ ವ್ಯಕ್ತಿ ಮನೆ ಸೀಲ್​ಡೌನ್​​
ಪ್ರಾತಿನಿಧಿಕ ಚಿತ್ರ.
  • Share this:
ಧಾರವಾಡ(ಆ.04): ಕೊರೋನಾ ಸೋಂಕಿತರ ವಿಚಾರದಲ್ಲಿ ರಾಜ್ಯ ಆರೋಗ್ಯ ಇಲಾಖೆ ಒಂದಲ್ಲಾ ಒಂದು ರೀತಿ ಯಡವಟ್ಟು ಮಾಡುತ್ತಲೇ ಇದೆ. ಈಗ ಅಂತಹುದ್ದೋ ಅದೇ ಆರೋಗ್ಯ ಇಲಾಖೆ ಮತ್ತೊಂದು ಯಡವಟ್ಟು ಮಾಡಿದೆ. ಸೋಂಕಿತ ವ್ಯಕ್ತಿ ಡಿಸ್ಚಾರ್ಜ್ ಆಗಿ‌ಮನೆಗೆ ಬಂದ ಬಳಿಕ ಅವರ ಮನೆಯನ್ನು ಸೀಲ್‌ಡೌನ್ ಮಾಡುವ ಮೂಲಕ ಯಡವಟ್ಟು ಮಾಡಿದೆ.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ 32 ವರ್ಷದ ವ್ಯಕ್ತಿಗೆ ಜುಲೈ 25ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದುಕೊಂಡು ಆಗಸ್ಟ್ 3ರಂದು ಡಿಸ್ಚಾರ್ಜ್ ಮಾಡಲಾಗಿತ್ತು.

ಇಲ್ಲಿನ ಬಿಸಿಎಂ ಹಾಸ್ಟೆಲ್​​ನಲ್ಲಿ ಐಸೋಲೇಶನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ನಂತರ ವ್ಯಕ್ತಿ ಗುಣಮುಖರಾದ ಹಿನ್ನೆಲೆಯಲ್ಲಿ ಹಾಸ್ಟೆಲ್​​ನಿಂದ ಬಿಡುಗಡೆ ಮಾಡಿದ್ದರು. ಸೋಂಕಿತ ವ್ಯಕ್ತಿ ನಿನ್ನೆ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಇಂದು ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಮನೆಯ ಸುತ್ತ ನೂರು ಮೀಟರ್ ದೂರಸಲ್ಲಿ ಸೀಲ್‌ಡೌನ್ ಮಾಡಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಸೀಲ್‌ಡೌನ್ ಮಾಡುವ ಮೂಲಕ ಇದೀಗ ‌ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.

ಈ ಮೊದಲು ಸಹ ಸೋಂಕಿತ ವ್ಯಕ್ತಿ ಮೃತಪಟ್ಟು 9 ದಿನಗಳ ಬಳಿಕ ಮನೆ ಸೀಲ್ಡೌನ್ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಯಡವಟ್ಟು ಮಾಡಿದ್ದರು. ಈಗ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಂದ ವ್ಯಕ್ತಿಯ ಮನೆ ಸೀಲ್ಡೌನ್ ಮಾಡಿದ್ದು ಸ್ಥಳೀಯರ ಆಕ್ರೋಶ ಕಾರಣವಾಗಿದೆ.

ಇದನ್ನೂ ಓದಿ: ಕೊರೋನಾ ಸೋಂಕಿಗೆ ತುತ್ತಾದರೂ ಆಸ್ಪತ್ರೆಯಿಂದಲೇ ಕೆಲಸ ನಿರ್ವಹಿಸಿ ಕರ್ತವ್ಯ ನಿಷ್ಠೆ ಮೆರೆದ ಯಡಿಯೂರಪ್ಪ

ಒಟ್ಟಾರೆಯಾಗಿ ಕೊರೋನಾ ಸೋಂಕಿತರ ವಿಚಾರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಯಡವಟ್ಟು ಮಾಡುತ್ತ ಬರುತ್ತಿದ್ದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ. ಏನೇ ಆಗಲಿ ಇನ್ನಾದರು ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಆರೋಗ್ಯ ಇಲಾಖೆ ಅಧಿಕಾರಿಗಳ ಯಡವಟ್ಟು ಮಾಡದಂತೆ ತಡೆಯಲು ಮುಂದಾಗಬೇಕು.
Published by: Ganesh Nachikethu
First published: August 4, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading