HOME » NEWS » Coronavirus-latest-news » HEALTH BULLETIN CORONA AFFECTED FOR 416 PEOPLE IN A SINGLE DAY IN KARNATAKA TODAY AND 9 DEATH MAK

Health Bulletin: ಏರುತ್ತಲೇ ಇದೆ ಮಹಾಮಾರಿಯ ಕಾವು; ಒಂದೇ ದಿನದಲ್ಲಿ ದಾಖಲೆಯ 416 ಜನರಿಗೆ ಸೋಂಕು, 9 ಬಲಿ!

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8697 ಕ್ಕೆ ಏರಿಕೆಯಾಗಿದ್ದು, ಮಾರಣಾಂತಿಕ ಸೋಂಕಿಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಒಂದೇ ದಿನ 9 ಜನ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆಯೂ ಇದೀಗ 132ಕ್ಕೆ ಏರಿಕೆಯಾಗಿದೆ.

digpu-news-network
Updated:June 20, 2020, 7:04 PM IST
Health Bulletin: ಏರುತ್ತಲೇ ಇದೆ ಮಹಾಮಾರಿಯ ಕಾವು; ಒಂದೇ ದಿನದಲ್ಲಿ ದಾಖಲೆಯ 416 ಜನರಿಗೆ ಸೋಂಕು, 9 ಬಲಿ!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಜೂನ್‌ 20): ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ಮುನ್ನೂರಕ್ಕೂ ಅಧಿಕ ಜನರಿಗೆ ಕೊರೋ ಸೋಂಕು ತಗುಲುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಆದರೆ, ಇಂದು ಆ ಸಂಖ್ಯೆ 400ರ ಗಡಿ ದಾಟಿದೆ. ಇಂದು ಒಂದೇ ದಿನ ರಾಜ್ಯದಲ್ಲಿ ಸುಮಾರು 416 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ಸೋಂಕು ಪೀಡಿತರ ಸಂಖ್ಯೆಯ ಸರಾಸರಿ ಅಧಿಕವಾಗುತ್ತಲೇ ಇದೆ.

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8697 ಕ್ಕೆ ಏರಿಕೆಯಾಗಿದ್ದು, ಮಾರಣಾಂತಿಕ ಸೋಂಕಿಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಒಂದೇ ದಿನ 9 ಜನ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆಯೂ ಇದೀಗ 132ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲೂ ಇಂದು ಸುಮಾರು 94 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ ರಾಜಧಾನಿಯಲ್ಲಿ ಪರಿಸ್ಥಿತಿ ಕೈಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಇದನ್ನೂ ಓದಿ : ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸಿಎಂ ತವರು ಜಿಲ್ಲೆಯಲ್ಲೇ ರೈತರ ವಿರೋಧ
Youtube Video

ಇದಲ್ಲದೆ ಕರ್ನಾಟಕ ರಾಜ್ಯ ಹೆಲ್ತ್‌ ಬುಲೆಟಿನ್‌ನಲ್ಲಿ ಕರ್ನಾಟಕದಲ್ಲಿ ಇಂದು 181 ಜನ ಸೋಂಕಿನಿಂದ ಗುಣಮುಖರಾಗಿದ್ದು ಅವರನ್ನು ಬಿಡುಗಡೆಗೊಳಿಸಲಾಗಿದೆ. 74ಜನರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
First published: June 20, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories