ಕೊರೋನಾ ಸಂಕಷ್ಟ: ‘ಹಾಸನದಲ್ಲಿ ಒಂದೊಂದು ಕುಟುಂಬಕ್ಕೆ ತಲಾ 5 ಸಾವಿರ ರೂ. ಕೊಡಿ‘ - ಎಚ್​​.ಡಿ ರೇವಣ್ಣ ಸಿಎಂಗೆ ಆಗ್ರಹ

ಸದ್ಯ ಜಿಲ್ಲೆಯಲ್ಲಿ ಎನ್-95 ಮಾಸ್ಕ್ ಹಾಗೂ ಪಿ.ಪಿ.ಕಿಟ್ ಗಳ ಕೊರತೆ ಇದೆ. ಇವು ಮುಂದಿನ ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ. ಈಗ ಲಭ್ಯ ಇರುವ ತ್ರಿಪಲ್ ಲೇಯರ್ ಮಾಸ್ಕ್ ಗಳನ್ನು ಖಾಸಗಿ ಅಸ್ಪತ್ರೆಗಳಿಗೂ ಸ್ವಲ್ಪ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಎಲ್ಲಾ ವೈದ್ಯರು ಅವುಗಳನ್ನು ಹಾಕಿಯೇ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಎಚ್​​.ಡಿ ರೇವಣ್ಣ, ಸಿಎಂ ಯಡಿಯೂರಪ್ಪ

ಎಚ್​​.ಡಿ ರೇವಣ್ಣ, ಸಿಎಂ ಯಡಿಯೂರಪ್ಪ

 • Share this:
  ಹಾಸನ(ಏ.04): ಕೊರೋನಾದಿಂದ ಕೆಲಸವಿಲ್ಲದೇ ಪರದಾಡುತ್ತಿರುವ ಹಾಸನದ ಜನತೆಗೆ ರಾಜ್ಯ ಸರ್ಕಾರ ಆರ್ಥಿಕವಾಗಿ ಮಾಡಬೇಕು ಎಂದು ಮಾಜಿ ಸಚಿವ ಎಚ್​​.ಡಿ ರೇವಣ್ಣ ಒತ್ತಾಯಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಎಚ್​​.ಡಿ ರೇವಣ್ಣ, ಹಾಸನ ಜಿಲ್ಲೆಯಲ್ಲಿ 111 ಸ್ಲಂಗಳು ಇವೆ. ಈ ಸ್ಲಂಗಳಲ್ಲಿ 29,850 ಕುಟುಂಬಗಳು ವಾಸಿಸುತ್ತಿವೆ. ಇವರ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

  ಇನ್ನು, ಕೊಳಗೇರಿ ಸೇರಿ ಒಟ್ಟು 40 ಸಾವಿರ ಬಡವರಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ಕುಟುಂಬಗಳಿಗೂ ಹಾಲು, ದಿನಸಿ ಕೊಡಬೇಕು. ಖರ್ಚಿಗೆಂದು ಒಂದು ಕುಟುಂಬಕ್ಕೆ 5 ಸಾವಿರ ಹಣ ನೀಡಬೇಕು. ಈ ಕುರಿತಂತೆ ಜಿಲ್ಲಾಧಿಕಾರಿಯೊಂದಿಗೆ ಮಾತಾಡಿದ್ದೇನೆ. ಸರ್ಕಾರವೂ ಈ ಬಗ್ಗೆ ಗಮನಹರಿಸಬೇಕು ಎಂದರು ಮಾಜಿ ಸಚಿವ ಎಚ್​​.ಡಿ ರೇವಣ್ಣ.

  ಹೇಮಾವತಿ ನಾಲೆಗೆ ನೀರು ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ರೈತರು ಆಲೂಗೆಡ್ಡೆ ಬೀಜ ಹಾಕುತ್ತಾರೆ. ಆಲೂಗಡ್ಡೆ ಬಿತ್ತನೆ ಬೀಜ ಬಿತ್ತಲು ರೈತರಿಗೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

  ಇತ್ತೀಚೆಗಷ್ಟೇ ಕೊರೋನಾ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸಾ ಸನ್ನದ್ದತೆ ಕುರಿತಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಸಂಪೂರ್ಣ ಸಹಕಾರ ಕೋರಿದ್ದಾರೆ. ಇದೊಂದು ಆರೋಗ್ಯ ತುರ್ತು ಪರಿಸ್ಥಿತಿ, ಎಲ್ಲರೂ ಒಂದಾಗಿ ಕೋವಿಡ್ 19 ವಿರುದ್ದ ಹೋರಾಟ ನಡೆಸಬೇಕಿದೆ. ಇದಕ್ಕೆ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಸಹಕಾರ ಅತೀ ಅಮೂಲ್ಯವಾದದ್ದು ಎಂದು ಜಿಲ್ಲಾಧಿಕಾರಿ ಹೇಳಿದ್ದರು.

  ಇದನ್ನೂ ಓದಿ: ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ: ಖಾಸಗಿ ವೈದ್ಯರಿಗೆ ಹಾಸನ ಜಿಲ್ಲಾಧಿಕಾರಿ ಮನವಿ

  ಸದ್ಯ ಜಿಲ್ಲೆಯಲ್ಲಿ ಎನ್-95 ಮಾಸ್ಕ್ ಹಾಗೂ ಪಿ.ಪಿ.ಕಿಟ್ ಗಳ ಕೊರತೆ ಇದೆ. ಇವು ಮುಂದಿನ ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ. ಈಗ ಲಭ್ಯ ಇರುವ ತ್ರಿಪಲ್ ಲೇಯರ್ ಮಾಸ್ಕ್ ಗಳನ್ನು ಖಾಸಗಿ ಅಸ್ಪತ್ರೆಗಳಿಗೂ ಸ್ವಲ್ಪ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಎಲ್ಲಾ ವೈದ್ಯರು ಅವುಗಳನ್ನು ಹಾಕಿಯೇ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
  First published: