ನಾನೂ ಮಾಸ್ಕ್​ ಹಾಕಲ್ಲ, ಅರೆಸ್ಟ್​ ಮಾಡಿಸಿ; ಮಾಧುಸ್ವಾಮಿಗೆ ಎಚ್​.ಡಿ. ರೇವಣ್ಣ ಸವಾಲು

ಮಾಸ್ಕ್ ಹಾಕದೇ ಮನೆಯಿಂದ ಹೊರಗೆ ಬಂದವರನ್ನು ಬಂಧಿಸಿ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ನಾನು ಮಾಸ್ಕ್ ಹಾಕಿಕೊಂಡು ಹೋಗುವುದಿಲ್ಲ, ನನ್ನನ್ನೂ ಬಂಧಿಸಿ ಜೈಲಿಗೆ ಹಾಕಲಿ ಎಂದು ಎಚ್​.ಡಿ. ರೇವಣ್ಣ ಟೀಕಿಸಿದ್ದಾರೆ.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

  • Share this:
ಹಾಸನ (ಏ. 16): ಮಾಸ್ಕ್ ಧರಿಸದೆ ಹೊರಗಡೆ ಬಂದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಒಂದುವೇಳೆ ಯಾರಾದರೂ ಮಾಸ್ಕ್ ಧರಿಸದೆ ಮನೆಯಿಂದ ಹೊರಬಂದರೆ ಅವರನ್ನು ಬಂಧಿಸುವಂತೆ ಹಾಸನ ಪೊಲೀಸರಿಗೆ ಹಾಸನ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚನೆ ನೀಡಿದ್ದರು. ಈ ಬಗ್ಗೆ ಟೀಕಿಸಿರುವ ಮಾಜಿ ಸಚಿವ ಎಚ್​.ಡಿ. ರೇವಣ್ಣ, ನಾನು ಮಾಸ್ಕ್ ಧರಿಸುವುದಿಲ್ಲ. ನನ್ನನ್ನು ಅರೆಸ್ಟ್​ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.

ಹಾಸನದಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಸಭೆ ನಡೆಸಿದ್ದ ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಜಿಲ್ಲೆಯ ಜನತೆ ಏ. 20ರವರೆಗೆ ಕಟ್ಟುನಿಟ್ಟಾಗಿ ಲಾಕ್​ಡೌನ್ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಅಥವಾ ಕರವಸ್ತ್ರ, ಟವೆಲ್, ದುಪ್ಪಟಗಳಿಂದ ಮೂಗು ಮತ್ತು ಬಾಯಿ ಮುಚ್ಚಿಕೊಂಡು ಅಗತ್ಯವಿದ್ದಾಗ ಮಾತ್ರ ರಸ್ತೆಗೆ ಬರಬೇಕು. ಮಾಸ್ಕ್ ಧರಿಸದೆ ಹೊರಗೆ ಬಂದರೆ ಅಂಥವರನ್ನು ಬಂಧಿಸಿ ಎಂದು ಹೇಳಿದ್ದರು.

ಇದನ್ನೂ ಓದಿ: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್ ಸಂಗತಿ; ಭಾರತದ ಬಾವಲಿಗಳಲ್ಲೂ ಕೊರೋನಾ ವೈರಸ್​ ಪತ್ತೆ!

ಮಾಸ್ಕ್ ಹಾಕದೇ ಮನೆಯಿಂದ ಹೊರಗೆ ಬಂದವರನ್ನು ಬಂಧಿಸಿ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ನಾನು ಮಾಸ್ಕ್ ಹಾಕಿಕೊಂಡು ಹೋಗುವುದಿಲ್ಲ, ನನ್ನನ್ನೂ ಬಂಧಿಸಿ ಜೈಲಿಗೆ ಹಾಕಲಿ. ಜೈಲಿನಲ್ಲಾದರೂ ಊಟ ಸಿಗುತ್ತದೆ. ಕೊರೋನಾದಿಂದಾಗಿ ಹೊರಗಡೆ ಸರಿಯಾಗಿ ಊಟವೂ ಸಿಗುತ್ತಿಲ್ಲ. ಜೈಲಿನಲ್ಲಾದರೂ ಊಟ ಸಿಗುತ್ತದೆ ಎಂದು ಎಚ್​.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.
First published: