ಕೊರೋನಾ ಲಾಕ್ಡೌನ್: ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸಾವಿರಾರು ಬಡವರಿಗೆ ಪ್ರತಿನಿತ್ಯ ಎಚ್ಡಿಕೆಯಿಂದ ಉಚಿತ ಊಟ
ದಿನಸಿ ಆಹಾರ ಪದಾರ್ಥಗಳ ಕಿಟ್ ಗಳನ್ನ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಡ ಜನರಿಗೆ ಮತ್ತು ನಗರ ವ್ಯಾಪ್ತಿಯ ಬಡವರ್ಗದ ಜನರಿಗೆ ನೀಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.
news18-kannada Updated:April 22, 2020, 7:13 PM IST

ಕೊರೋನಾ ಲಾಕ್ಡೌನ್: ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸಾವಿರಾರು ಬಡವರಿಗೆ ಪ್ರತಿನಿತ್ಯ ಎಚ್ಡಿಕೆಯಿಂದ ಉಚಿತ ಊಟ
- News18 Kannada
- Last Updated: April 22, 2020, 7:13 PM IST
ರಾಮನಗರ(ಏ.22): ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಸದಾ ಗಿಜಿಗಿಜಿಗುಡುವ ಬೆಂಗಳೂರು ಪಕ್ಕದ ಜಿಲ್ಲೆ ರಾಮನಗರವೂ ಜನ ಮತ್ತು ವಾಹನ ಸಂಚಾರವಿಲ್ಲದೇ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ. ರಸ್ತೆಬದಿ ಹೋಟೆಲ್ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ.
ಹೌದು, ಕೊರೋನಾ ಸಂಕಷ್ಟದಲ್ಲಿರುವ ಬಡವರ್ಗದ ಜನರಿಗೆ ದಿನಸಿ ಆಹಾರ ಪದಾರ್ಥಗಳನ್ನ ಮನೆಮನೆಗೆ ತಲುಪಿಸುವ ಯೋಜನೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಈಗಾಗಲೇ ಬೆಳಿಗ್ಗೆ ಮತ್ತು ಸಂಜೆ ಉಪಹಾರವನ್ನ ಹೆಚ್.ಡಿ.ಕುಮಾರಸ್ವಾಮಿ ಮತ್ತವರ ಶ್ರೀಮತಿ ಅನಿತಾ ಕುಮಾರಸ್ವಾಮಿ ಪ್ರತಿನಿತ್ಯ ರಾಮನಗರ ಮತ್ತು ಚನ್ನಪಟ್ಡಣ ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ಬಡವರ್ಗದ ಮಂದಿಗೆ ಉಚಿತವಾಗಿ ನೀಡುತ್ತಿದ್ದಾರೆ. ಅನ್ನಂ ಪರಬ್ರಹ್ಮಂ ಎಂಬ ಮಾತಿನಂತೆ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ರಾಮನಗರದ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ಮತ್ತು ಚನ್ನಪಟ್ಟಣ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳನ್ನ ನೀಡುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.
ಈಗಾಗಲೇ ಜೆಡಿಎಸ್ ಸ್ವಯಂಸೇವಕರು ದಿನಸಿ ಆಹಾರ ಪದಾರ್ಥಗಳನ್ನ ಪ್ಯಾಕಿಂಗ್ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಆಹಾರ ದಿನಸಿ ಪ್ಯಾಕಿಂಗ್ ಮಾಡುತ್ತಿರುವ ರಾಮನಗರದ ಮಂಜುನಾಥ ಕನ್ವೆನ್ಶನ್ ಹಾಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದಲೇ ಲಾಕ್ಡೌನ್ ಸಡಿಲಿಕೆ: ಯಾವ ಕ್ಷೇತ್ರಗಳಿಗೆ ವಿನಾಯಿತಿ? ಇಲ್ಲಿದೆ ಡೀಟೆಲ್ಸ್
ದಿನಸಿ ಆಹಾರ ಪದಾರ್ಥಗಳ ಕಿಟ್ ಗಳನ್ನ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಡ ಜನರಿಗೆ ಮತ್ತು ನಗರ ವ್ಯಾಪ್ತಿಯ ಬಡವರ್ಗದ ಜನರಿಗೆ ನೀಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.
(ವರದಿ: ಸರ್ ಎ.ಟಿ.ವೆಂಕಟೇಶ್)
ಹೌದು, ಕೊರೋನಾ ಸಂಕಷ್ಟದಲ್ಲಿರುವ ಬಡವರ್ಗದ ಜನರಿಗೆ ದಿನಸಿ ಆಹಾರ ಪದಾರ್ಥಗಳನ್ನ ಮನೆಮನೆಗೆ ತಲುಪಿಸುವ ಯೋಜನೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಈಗಾಗಲೇ ಬೆಳಿಗ್ಗೆ ಮತ್ತು ಸಂಜೆ ಉಪಹಾರವನ್ನ ಹೆಚ್.ಡಿ.ಕುಮಾರಸ್ವಾಮಿ ಮತ್ತವರ ಶ್ರೀಮತಿ ಅನಿತಾ ಕುಮಾರಸ್ವಾಮಿ ಪ್ರತಿನಿತ್ಯ ರಾಮನಗರ ಮತ್ತು ಚನ್ನಪಟ್ಡಣ ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ಬಡವರ್ಗದ ಮಂದಿಗೆ ಉಚಿತವಾಗಿ ನೀಡುತ್ತಿದ್ದಾರೆ.