ಸಿಪಿವೈ ಬಳಿಕ ರಾಜ್ಯ ಸರ್ಕಾರಕ್ಕೆ ಹೆಚ್​ಡಿಕೆ ಪತ್ರ; ಗೊಂಬೆ ತಯಾರಕರ ಕಷ್ಟಕ್ಕೆ ಸ್ಪಂದಿಸಲು ಒತ್ತಾಯ

ಚನ್ನಪಟ್ಟಣದಲ್ಲಿ 500 ಕ್ಕೂ ಹೆಚ್ಚು ಗೊಂಬೆ ತಯಾರಿಕಾ ಘಟಕಗಳಿವೆ, 1 ಸಾವಿರಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಆದರೆ ಎರಡು ತಿಂಗಳಿಂದ ಅವರಿಗೆಲ್ಲ ಕೆಲಸವೇ ಇಲ್ಲದಂತಾಗಿದೆ.

news18-kannada
Updated:May 23, 2020, 7:59 AM IST
ಸಿಪಿವೈ ಬಳಿಕ ರಾಜ್ಯ ಸರ್ಕಾರಕ್ಕೆ ಹೆಚ್​ಡಿಕೆ ಪತ್ರ; ಗೊಂಬೆ ತಯಾರಕರ ಕಷ್ಟಕ್ಕೆ ಸ್ಪಂದಿಸಲು ಒತ್ತಾಯ
ಹೆಚ್​.ಡಿ. ಕುಮಾರಸ್ವಾಮಿ.
  • Share this:
ರಾಮನಗರ(ಚನ್ನಪಟ್ಟಣ): ಚನ್ನಪಟ್ಟಣದ ಬೊಂಬೆಗಳು ಅಂದ್ರೆ ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಆದರೆ ಕಳೆದ ಎರಡು ತಿಂಗಳಿಂದ ಈ ಗೊಂಬೆಗಳು ಮಾರಾಟವಾಗುತ್ತಿಲ್ಲ, ತಯಾರಾದ ಬೊಂಬೆಗಳು ಹೊರರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಹಾಗಾಗಿ ಬೊಂಬೆ ತಯಾರಕರ ಬದುಕು ಬಹಳ ಕಷ್ಟವಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೂಡಲೇ ಕರಕುಶಲಕರ್ಮಿಗಳಿಗೆ ತಾತ್ಕಾಲಿಕವಾಗಿ ಪರಿಹಾರ ಕೊಡಬೇಕೆಂದು ಒತ್ತಾಯಿಸಿ ಮಾಜಿ ಸಿಎಂ, ಹಾಲಿ ಚನ್ನಪಟ್ಟಣ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಮುಖವಾಗಿ ಚನ್ನಪಟ್ಟಣದಲ್ಲಿ 500 ಕ್ಕೂ ಹೆಚ್ಚು ಗೊಂಬೆ ತಯಾರಿಕಾ ಘಟಕಗಳಿವೆ, 1 ಸಾವಿರಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಆದರೆ ಎರಡು ತಿಂಗಳಿಂದ ಅವರಿಗೆಲ್ಲ ಕೆಲಸವೇ ಇಲ್ಲದಂತಾಗಿದೆ. ಇಡೀ ವಿಶ್ವದಲ್ಲೇ ಚನ್ನಪಟ್ಟಣ ಗೊಂಬೆಗಳು ಅಂದ್ರೆ ಹೆಸರುವಾಸಿ. ಆದರೆ ಈಗ ಆ ಗೊಂಬೆಗಳನ್ನ ತಯಾರು ಮಾಡುವವರೇ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇದೆಲ್ಲವನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮವಹಿಸಬೇಕು. ಚನ್ನಪಟ್ಟಣ ಗೊಂಬೆಗಳ ಮೂಲಕ ಭಾರತ ದೇಶದ ಹಿರಿಮೆಯನ್ನ ಎತ್ತಿಹಿಡಿಯುತ್ತಿದ್ದ ಕರಕುಶಲಕರ್ಮಿಗಳಿಗೆ ನೆರವಾಗಬೇಕೆಂದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೈ ಫೈ ಸಲೂನ್​ಗಳಲ್ಲಿ ಸ್ವಚ್ಛತೆ ಹೇಗಿದೆ ಗೊತ್ತಾ? ಕೊರೊನಾ ಕಲಿಸಿರುವ ಸ್ಯಾನಿಟೈಸೇಶನ್ ಪಾಠಗಳು

ಕಳೆದ ಕೆಲದಿನಗಳ ಹಿಂದಷ್ಟೇ ಕ್ಷೇತ್ರದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ DCM ಅಶ್ವಥ್ ನಾರಾಯಣ್​ಗೆ ಪತ್ರ ಬರೆಯುವ ಮೂಲಕ ಗಮನಸೆಳೆದಿದ್ದರು.

ವರದಿ: ಎ.ಟಿ. ವೆಂಕಟೇಶ್Javascript

First published: May 23, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading