‘ಕೂಲಿ ಕಾರ್ಮಿಕ, ರೈತರ ಬಗ್ಗೆ ಸರ್ಕಾರಕ್ಕೆ ಸರಿಯಾದ ನಿಲುವಿಲ್ಲ; ಕೃಷಿಕರಿಗೆ ನ್ಯಾಯ ಮಾಡಿ‘ - ಸಿಎಂಗೆ ಎಚ್​​ಡಿಕೆ ಮನವಿ

ಇನ್ನು, ರಾಜ್ಯದ ಕೃಷಿಕರಿಗೆ ನೀವು ನ್ಯಾಯ ಕೊಡಿಸಬೇಕು. ಸಿಎಂಗೆ ನಾನು ಈ ಮೂಲಕ ಮನವಿ ಮಾಡ್ತೇನೆ. 450 ಕೋಟಿ ಪರಿಹಾರ ಕೊಡಲು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಅದನ್ನಾದರೂ ಕೂಡಲೇ ಜಾರಿ ಮಾಡಬೇಕು ಎಂದು ಎಚ್​​ಡಿಕೆ ಆಗ್ರಹಿಸಿದರು.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

 • Share this:
  ರಾಮನಗರ(ಏ.28): ಕೊರೋನಾ ಲಾಕ್​​ಡೌನ್​​ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಇಂದು ರಾಮನಗರದಲ್ಲಿ 1 ಲಕ್ಷ ಮಂದಿಗೆ ಆಹಾರ ದಿನಸಿ ಕಿಟ್​​ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಎಚ್​​ಡಿಕೆ, ಕೇಂದ್ರ ಸರ್ಕಾರ ಇಂದು 50 ಸಾವಿರ ಕೋಟಿ ಮ್ಯೂಚುವಲ್​​ ಫಂಡ್​​ ಹಣ ಬಿಡುಗಡೆ ಮಾಡಿದೆ. ಇದು ಮಾಲೀಕರಿಗೆ ಅನುಕೂಲವಾಗಲಿದೆಯೇ ಹೊರತು ಜನಸಾಮಾನ್ಯರಿಗೆ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಜನ ಲಾಕ್​ಡೌನ್​​ನಿಂದ ತತ್ತರಿಸಿ ಹೋಗಿದ್ದಾರೆ. ಜನರಿಗೆ ಸರ್ಕಾರವೇ ಶಕ್ತಿ ತುಂಬಬೇಕು. ಸಣ್ಣಕೈಗಾರಿಕೆ ಬಗ್ಗೆ ಸರ್ಕಾರದ ಯಾವುದೇ ರೀತಿಯ ಗಮನಕೊಟ್ಟಿಲ್ಲ. ಕೂಲಿ ಕಾರ್ಮಿಕರು, ರೈತರ ಬೆಳೆಗಳ ಬಗ್ಗೆ ಸರಿಯಾದ ನಿಲುವಿಲ್ಲ. ಈ ಎಲ್ಲದರ ಬಗ್ಗೆಯೂ ಸರ್ಕಾರ ಗಮನವಹಿಸಬೇಕು ಎಂದು ಎಚ್​ಡಿಕೆ ಆಗ್ರಹಿಸಿದರು.

  ಹೀಗೆ ಮುಂದುವರಿದ ಅವರು, ಚಿತ್ರದುರ್ಗಾದ ಓರ್ವ ಹೆಣ್ಣು ಮಗಳು ಈರುಳ್ಳಿ ಬೆಳೆದು ಮಾರಾಟ ಮಾಡಲಾಗಿಲ್ಲ. ಆ ಹೆಣ್ಣು ಮಗಳು ಸಿಎಂ ಗಮನಸೆಳೆದು ಅಳಲು ತೋಡಿಕೊಂಡಿದ್ದಾಳೆ. ಸಿಎಂ ಕೂಡ ಅವರ ನೋವಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಇದು ಕೇವಲ ಓರ್ವ ಹೆಣ್ಣಿನ ಸಮಸ್ಯೆ ಅಲ್ಲ, ಇಡೀ ರೈತ ಸಮುದಾಯದ ಸಮಸ್ಯೆ ಎಂದರು.

  ಇದನ್ನೂ ಓದಿ: ರಾಜ್ಯದ ಗ್ರೀನ್​​​ ಜೋನ್​​ನಲ್ಲಿರುವ 13 ಜಿಲ್ಲೆಗಳಿಗೆ ಹೊಸ ಮಾರ್ಗಸೂಚಿ: ಅಗತ್ಯ ವ್ಯಾಪರಕ್ಕೆ ಅವಕಾಶ ನೀಡಿ ಸರ್ಕಾರ ಆದೇಶ

  ಇನ್ನು, ರಾಜ್ಯದ ಕೃಷಿಕರಿಗೆ ನೀವು ನ್ಯಾಯ ಕೊಡಿಸಬೇಕು. ಸಿಎಂಗೆ ನಾನು ಈ ಮೂಲಕ ಮನವಿ ಮಾಡ್ತೇನೆ. 450 ಕೋಟಿ ಪರಿಹಾರ ಕೊಡಲು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಅದನ್ನಾದರೂ ಕೂಡಲೇ ಜಾರಿ ಮಾಡಬೇಕು ಎಂದು ಎಚ್​​ಡಿಕೆ ಆಗ್ರಹಿಸಿದರು.

  (ವರದಿ: ಎ.ಟಿ ವೆಂಕಟೇಶ್)
  First published: