HOME » NEWS » Coronavirus-latest-news » HD DEVEGOWDA TODAY SONIA GANDHI DISCUSS WITH ALL OPPOSITION PARTIES LEADER THROUGH VIDEO CONFERENCE RH

18 ಪಕ್ಷಗಳ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂವಾದ; ರಾಜ್ಯದ ಮಾಹಿತಿ ನೀಡಿದ ಎಚ್.ಡಿ.ದೇವೇಗೌಡ

HD devegowda: ವಿಡಿಯೋ ಸಂವಾದದಲ್ಲಿ ಎಚ್.ಡಿ. ದೇವೇಗೌಡ, ಮಮತಾ ಬ್ಯಾನರ್ಜಿ, ಸಂಜಯ್ ರಾವತ್, ಹೇಮಂತ್ ಸೂರೇನ್, ಎಂ.ಕೆ. ಸ್ಟಾಲಿನ್, ಶರದ್ ಪವಾರ್, ಸೀತಾರಾಮ್ ಯೆಚೂರಿ ಸೇರಿ 18 ಪಕ್ಷಗಳ‌ ನಾಯಕರು ಭಾಗಿಯಾಗಿದ್ದರು.

news18-kannada
Updated:May 22, 2020, 4:45 PM IST
18 ಪಕ್ಷಗಳ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂವಾದ; ರಾಜ್ಯದ ಮಾಹಿತಿ ನೀಡಿದ ಎಚ್.ಡಿ.ದೇವೇಗೌಡ
ಸೋನಿಯಾ ಗಾಂಧಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಎಚ್.ಡಿ.ದೇವೇಗೌಡ. (ಸಂಗ್ರಹ ಚಿತ್ರ)
  • Share this:
ನವದೆಹಲಿ: ಕೊರೋನಾ ವೈರಸ್ ನಿರ್ವಹಣೆ, ಕೇಂದ್ರ ಸರ್ಕಾರದ ಕ್ರಮಗಳ ಕುರಿತಂತೆ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಲ್ಲ ವಿರೋಧ ಪಕ್ಷಗಳ ಮುಖಂಡರೊಂದಿಗೆ ವಿಡಿಯೋ ಸಂವಾದ ನಡೆಸಿದರು.

ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು,  ಕೊರೋನಾ ಕುರಿತಂತೆ ರಾಜ್ಯದ ಮಾಹಿತಿ ನೀಡಿದರು. ಇದೇ ವೇಳೆ ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಸೋನಿಯಾ ಗಾಂಧಿಯ ಜೊತೆ ಸುದೀರ್ಘ ಚರ್ಚೆ ನಡೆಸಿದರು. ದೇವೇಗೌಡರ ವಿಡಿಯೋ ಕಾನ್ಫರೆನ್ಸ್​ನಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಜೊತೆಗಿದ್ದರು.

ವಿವಿಧ ರಾಜ್ಯಗಳ ಮುಖಂಡರ ಜೊತೆ ಸೋನಿಯಾ ಗಾಂಧಿಯವರ ವಿಡಿಯೋ ಕಾನ್ಫರೆನ್ಸ್​ನಲ್ಲಿ ದೇವೇಗೌಡರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಸೋನಿಯಾ ಗಾಂಧಿ ಎದುರಾಗುತ್ತಲೇ ದೇವೇಗೌಡರು ಎದ್ದು ಕೈ ಮುಗಿದರು. ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಅವರು ಕೈ ಮುಗಿದು, ಗೌಡರ ಆರೋಗ್ಯ ವಿಚಾರಿಸಿದರು.

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್, ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು, ವಲಸೆ ಕಾರ್ಮಿಕರ ವಿಷಯದಲ್ಲಿ ಎಸಗಿರುವ ತಪ್ಪುಗಳು,  ರಾಜ್ಯಗಳಿಗೆ ಹಣ ಬಿಡದ ಕೇಂದ್ರ ಸರ್ಕಾರದ ಕ್ರಮ, ಪ್ರಧಾನ ಮಂತ್ರಿ ಮೋದಿ ಸರ್ಕಾರದ ನಿರ್ಧಾರಗಳ ಬಗ್ಗೆ ಚರ್ಚೆ, ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಮತ್ತಿತರ ವಿಷಯಗಳ ಬಗ್ಗೆ ಯುಪಿಎ ಒಕ್ಕೂಟದ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿ ಅವರು ಎಲ್ಲಾ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಮುಖಂಡರು.


ಇದನ್ನು ಓದಿ: Coronavirus in Karnataka - ಅರ್ಧದಿನದಲ್ಲೇ 105 ಪ್ರಕರಣ; ರಾಜ್ಯದಲ್ಲಿ ಸಂಖ್ಯೆ 1,710ಕ್ಕೇರಿಕೆ

ವಿಡಿಯೋ ಸಂವಾದದಲ್ಲಿ ಎಚ್.ಡಿ. ದೇವೇಗೌಡ, ಮಮತಾ ಬ್ಯಾನರ್ಜಿ, ಸಂಜಯ್ ರಾವತ್, ಹೇಮಂತ್ ಸೂರೇನ್, ಎಂ.ಕೆ. ಸ್ಟಾಲಿನ್, ಶರದ್ ಪವಾರ್, ಸೀತಾರಾಮ್ ಯೆಚೂರಿ ಸೇರಿ 18 ಪಕ್ಷಗಳ‌ ನಾಯಕರು ಭಾಗಿಯಾಗಿದ್ದರು.
First published: May 22, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories