ಮೇ 18ರಂದು ಎಚ್.ಡಿ.ದೇವೇಗೌಡರ ಜನ್ಮದಿನ; ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿದ ಮಾಜಿ ಪ್ರಧಾನಿ

ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲಿಗೆ ಅದನ್ನೇ ನಿಮ್ಮ ನಿಮ್ಮ ಭಾಗದ ಕೊರೋನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅಗತ್ಯಗಳ ಪೂರೈಕೆಗೆ ಬಳಸಿದಲ್ಲಿ ಅದು ನಿಜಕ್ಕೂ ಸದುಪಯೋಗವಾಗುತ್ತದೆ. ದೇವರು ಮೆಚ್ಚುತ್ತಾನೆ. ನನ್ನ ಅಭಿಮಾನಿಗಳ ಈ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ. ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೋರುವುದಾಗಿ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  ಬೆಂಗಳೂರು: ಇದೇ ತಿಂಗಳ ಮೇ 18ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು 87 ವಸಂತಗಳನ್ನು ಪೂರೈಸಿ 88ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮಾಜಿ ಪ್ರಧಾನಿಗಳ ಜನ್ಮದಿನವನ್ನು ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ, ಈ ವರ್ಷ ಕೊರೋನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಜನ್ಮದಿನ ಸಂಭ್ರಮಾಚರಣೆ ಮಾಡಬಾರದು ಎಂದು ಸ್ವತಃ ಎಚ್.ಡಿ. ದೇವೇಗೌಡ ಅವರೇ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

  ಕಾರ್ಯಕರ್ತರು, ಅಭಿಮಾನಿಗಳು ಯಾವುದೇ ಆಚರಣೆ ಮಾಡಬಾರದು. ಜನ್ಮದಿನಕ್ಕಾಗಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ನೀವಿದ್ದ ಜಾಗದಿಂದಲೇ ಹಾರೈಕೆ ವ್ಯಕ್ತವಾಗಲಿ. ಕೋವಿಡ್ ಸಂದರ್ಭದಲ್ಲಿ ಜವಾಬ್ದಾರಿ ಮತ್ತು‌ ಮಾನವೀಯತೆ ಮೆರೆಯಬೇಕಿದೆ. ಹಾರ, ತುರಾಯಿ, ಕೇಕ್, ಸಿಹಿ ತರಬೇಡಿ. ಅದರ ಬದಲು ಅದೇ ಹಣದಲ್ಲಿ ಕೋವಿಡ್ ಸಂತ್ರಸ್ತರಿಗೆ ನೆರವು ನೀಡಿ ಎಂದು ದೇವೇಗೌಡ ಅವರು ಮನವಿ ಮಾಡಿದ್ದಾರೆ.

  ಇದನ್ನು ಓದಿ: Karnataka Rain: ಕರ್ನಾಟಕದಲ್ಲಿ ಇಂದಿನಿಂದ ಭಾರೀ ಮಳೆ; ಶಿವಮೊಗ್ಗ, ಕರಾವಳಿ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​

  ಮೇ 18ರಂದು ನನ್ನ ಹುಟ್ಟುಹಬ್ಬ ಎಂಬುದನ್ನು ಬಲ್ಲ ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂದು ಅದಕ್ಕಾಗಿ ಸಡಗರ ಸಂಭ್ರಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದು ನಾನು ವಿನಂತಿಸುತ್ತೇನೆ. ಕೊರೋನಾದಂತಹ ಮಹಾಮಾರಿಯಿಂದ ಇಡೀ ರಾಜ್ಯದ ಜನತೆ ಸಂಕಷ್ಟ ಮತ್ತು ನೋವಿನಲ್ಲಿ ತತ್ತರಿಸುತ್ತಿರುವಾಗ ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನಿಮ್ಮಗಳ ಅಭಿಮಾನ ಹಾರೈಕೆ ರೂಪದಲ್ಲಿ ನೀವಿರುವಲ್ಲಿಯೇ ವ್ಯಕ್ತವಾಗಲಿ ಎಂದು ಕೇಳಿಕೊಂಡಿದ್ದಾರೆ.

  ಈಗ ನಾವು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಮಾನವಿಯತೆಯನ್ನು ತೋರಿಸುವ ಸಮಯದಲ್ಲಿದ್ದೇವೆ. ಆದುದ್ದರಿಂದ ನನ್ನ ಹುಟ್ಟುಹಬ್ಬದ ನಿಮಿತ್ತ ನೀವು ಹಾರ, ತುರಾಯಿ, ಕೇಕ್, ಸಿಹಿ ಎಂದು ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲಿಗೆ ಅದನ್ನೇ ನಿಮ್ಮ ನಿಮ್ಮ ಭಾಗದ ಕೊರೋನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅಗತ್ಯಗಳ ಪೂರೈಕೆಗೆ ಬಳಸಿದಲ್ಲಿ ಅದು ನಿಜಕ್ಕೂ ಸದುಪಯೋಗವಾಗುತ್ತದೆ. ದೇವರು ಮೆಚ್ಚುತ್ತಾನೆ. ನನ್ನ ಅಭಿಮಾನಿಗಳ ಈ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ. ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೋರುವುದಾಗಿ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
  Published by:HR Ramesh
  First published: