ಕೊರೋನಾ ವಾರಿಯರ್ಸ್​ಗೆ ಫುಡ್ ಕಿಟ್ ಜೊತೆಗೆ 3,000 ರೂ. ಪ್ರೋತ್ಸಾಹ ಧನ; ಹೆಚ್.ಸಿ. ಜಯಮುತ್ತು ಕಾರ್ಯಕ್ಕೆ ಶ್ಲಾಘನೆ

ಕೊರೋನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಮೆಚ್ಚವಂತದ್ದು. ಅವರಿಗೆ ಎಲ್ಲರೂ ಸಹ ತಮ್ಮ ಕೈಲಾದಷ್ಟು ನೆರವು ನೀಡಬೇಕೆಂದು ಜಯಮುತ್ತು ಅಭಿಪ್ರಾಯಪಟ್ಟರು.

ಕೊರೋನಾ ವಾರಿಯರ್ಸ್​ಗೆ ಆಹಾರ ಕಿಟ್ ಕೊಡುತ್ತಿರುವ ಜಯಮುತ್ತು

ಕೊರೋನಾ ವಾರಿಯರ್ಸ್​ಗೆ ಆಹಾರ ಕಿಟ್ ಕೊಡುತ್ತಿರುವ ಜಯಮುತ್ತು

 • Share this:
  ರಾಮನಗರ: ಚನ್ನಪಟ್ಟಣ ನಗರದ ಚರ್ಚ್ ರಸ್ತೆಯಲ್ಲಿನ ಬಮೂಲ್ ಕಚೇರಿಯಲ್ಲಿ ಬಮೂಲ್ ನಿರ್ದೇಶಕ ಹೆಚ್.ಸಿ. ಜಯಮುತ್ತು ಅವರ ನೇತೃತ್ವದಲ್ಲಿ ತಾಲೂಕಿನ 196 ಜನ ಆಶಾ ಕಾರ್ಯಕರ್ತರಿಗೆ ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಪ್ರೋತ್ಸಾಹಧನ ರೂಪದಲ್ಲಿ ತಲಾ 3,000 ರೂಪಾಯಿಗಳಂತೆ ಒಟ್ಟು 5.88 ಲಕ್ಷ ರೂಪಾಯಿಗಳು ಹಾಗೂ ನಂದಿನಿ ಸಿಹಿ ಉತ್ಪನ್ನಗಳ ಕಿಟ್​ಗಳನ್ನ ವಿತರಣೆ ಮಾಡಿದರು.

  ಇದರ ಜೊತೆಗೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ನೀಡಿರುವ ಉಚಿತ ದಿನಸಿ ಕಿಟ್ ಹಾಗೂ ಮಾಸ್ಕ್​ಗಳ ಜೊತೆಗೆ ನೆನಪಿನ ಕಾಣಿಕೆಯಾಗಿ ಗಡಿಯಾರವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಯಮುತ್ತು, ಕೊರೋನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಮೆಚ್ಚವಂತದ್ದು. ಅವರಿಗೆ ಎಲ್ಲರೂ ಸಹ ತಮ್ಮ ಕೈಲಾದಷ್ಟು ನೆರವು ನೀಡಬೇಕೆಂದು ಅಭಿಪ್ರಾಯಪಟ್ಟರು.

  ಇದನ್ನೂ ಓದಿ: Rajiv Gandhi – ರಾಜೀವ್ ಗಾಂಧಿ 29ನೇ ಪುಣ್ಯಸ್ಮರಣೆ; ಬೆಂಗಳೂರಲ್ಲಿ ಕಾಂಗ್ರೆಸ್ಸಿಗರಿಂದ ನ್ಯಾಯ ಯೋಜನೆ

  ಈ ವೇಳೆ ಬಮೂಲ್ ಅಧಿಕಾರಿಗಳು, ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.

  ವರದಿ: ಎ.ಟಿ. ವೆಂಕಟೇಶ್

  First published: