HOME » NEWS » Coronavirus-latest-news » HAVERI HOME MINISTER BASAVARAJ BOMMAI GIVES HIS CHOULTRY AS COVID 19 CARE CENTER SCT

ಹಾವೇರಿ; ತಮ್ಮ ಮನೆ ಪಕ್ಕದ ಸ್ವಂತ ಸಭಾಭವನವನ್ನೇ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿದ ಸಚಿವ ಬಸವರಾಜ ಬೊಮ್ಮಾಯಿ

Haveri: ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆ ಪಕ್ಕದ ಸ್ವಂತ ಸಭಾ ಭವನವನ್ನೇ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ.

news18-kannada
Updated:May 15, 2021, 7:46 AM IST
ಹಾವೇರಿ; ತಮ್ಮ ಮನೆ ಪಕ್ಕದ ಸ್ವಂತ ಸಭಾಭವನವನ್ನೇ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿದ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವರ ಸಭಾಭವನ
  • Share this:
ಹಾವೇರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಅತಿ ವೇಗದಲ್ಲಿ ಹರಡುತ್ತಿದೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್​ಗಳು ಸಿಗದಂತಹ ಪರಿಸ್ಥಿತಿ‌ ನಿರ್ಮಾಣ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಜನರ ನೆರವಿಗೆ ನಿಂತು ಜವಾಬ್ದಾರಿಯನ್ನು ಮೆರೆದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆ ಪಕ್ಕದ ಸ್ವಂತ ಸಭಾ ಭವನವನ್ನೇ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ.

ಕಾರ್ಯಕರ್ತರ ಸಭೆ, ಸಮಾರಂಭ, ಪಕ್ಷದ ಕಾರ್ಯಕ್ರಮಗಳು ಹೀಗೆ ವಿವಿಧ ಕಾರ್ಯಕ್ರಮಗಳಿಗೆ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರುವ ಮನೆಗೆ ಹೊಂದಿಕೊಂಡು ಬೃಹತ್ ಸಭಾಭವನ ನಿರ್ಮಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ಅತೀ ವೇಗವಾಗಿ ಹರಡುತ್ತಿದ್ದು, ಬಹುತೇಕ ಕಡೆಗಳಲ್ಲಿ ಬೆಡ್​ಗಳ ಕೊರತೆ ಎದುರಾಗಿದೆ. ಹೀಗಾಗಿ ತಮ್ಮ ಕ್ಷೇತ್ರದಲ್ಲಿನ ಕೊರೊನಾ ಸೋಂಕಿತರಿಗೆ ಬೆಡ್ಗಳ ಕೊರತೆ ಎದುರಾಗಬಾರದು ಎಂದು ತಮ್ಮ ಸಭಾಭವನವನ್ನೇ  50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ. ಸವಣೂರು ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ ಕೊರೊನಾ ಸೋಂಕಿನಿಂದ ಬಳಲ್ತಿರೋ ಜನರು ಮತ್ತು ಬೆಡ್​ಗಳಿಲ್ಲದೆ ತೊಂದರೆಗೆ ಸಿಲುಕಿರೋರು ಇಲ್ಲಿ ಬಂದು ಚಿಕಿತ್ಸೆ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

ಎರಡನೆ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರು ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಆಕ್ಸಿಜನ್ ಸಮಸ್ಯೆ ದೊಡ್ಡದಾಗಿ ಕಾಡ್ತಿದೆ. ಹೀಗಾಗಿ ಹತ್ತು, ಹದಿನೈದು ಲೀಟರ್ ಗಳ ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳ ವ್ಯವಸ್ಥೆ ಕೂಡ ಮಾಡ್ತಿದ್ದಾರೆ. ಈಗಾಗಲೆ ಐವತ್ತು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಸಂಜೆ ಅಥವಾ ನಾಳೆಯ ವೇಳೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳು ಬರಲಿದ್ದು, ಕೊರೊನಾ ಸೋಂಕಿತ ರೋಗಿಗಳಿಗೆ ಅನುಕೂಲ ಆಗಲಿದೆ. ಇದರ‌ ಜೊತೆಗೆ ಸಚಿವರ ಮನೆ ಪಕ್ಕದ‌ ಸಭಾಭವನದಲ್ಲಿನ ಕೋವಿಡ್ ಕೇರ್ ಸೆಂಟರ್ ಗೆ ಬರೋ ಸೋಂಕಿತರಿಗೆ ಚಿಕಿತ್ಸೆಗೆ ನೀಡಲು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ಕೂಡ ರೆಡಿಯಾಗ್ತಿದೆ. ಸಚಿವ ಬೊಮ್ಮಾಯಿ ತಮ್ಮ‌ ಸ್ವಂತ ಖರ್ಚಿನಲ್ಲಿ ಕ್ಷೇತ್ರದ ಜನರಿಗಾಗಿ ಕೋವಿಡ್ ಕೇರ್‌ ಸೆಂಟರ್ ಆರಂಭಿಸ್ತಿದ್ದಾರೆ. ಹೊಸ ಮಂಚ, ಬೆಡ್​ಗಳು, ದಿಂಬು, ಡಸ್ಟ್ ಬಿನ್ ಸೇರಿದಂತೆ ಎಲ್ಲವೂ ಈಗಾಗಲೆ ಸಜ್ಜಾಗಿದೆ.

ಇದನ್ನೂ ಓದಿ: Siddaramaiah: ನೇಣು ಹಾಕಿಕೊಳ್ಳುವ ಬದಲು ರಾಜೀನಾಮೆ ನೀಡಿ ಪುಣ್ಯ ಕಟ್ಕೊಳಿ; ಸದಾನಂದ ಗೌಡರಿಗೆ ಸಿದ್ದರಾಮಯ್ಯ ಸಲಹೆ

ಆಕ್ಸಿಜನ್ ಕಾನ್ಸೆಂಟ್ರೇಟರ್ ಗೆ ಬೇಕಾದ ವಿದ್ಯುತ್ ವ್ಯವಸ್ಥೆ ಕೂಡ ಇದೆ. ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಈಗಾಗಲೆ ಸರಕಾರ ಆರಂಭಿಸಿರೋ‌ ಕೋವಿಡ್ ಕೇರ್‌ ಸೆಂಟರ್ಗಳಲ್ಲಿ ಬೆಡ್ಗಳು ಫುಲ್ ಆಗಿ ಬೆಡ್ ಇಲ್ಲ ಎನ್ನುವವರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಅನೇಕ ಕಡೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್​ಗಳ ಸಮಸ್ಯೆ ಎದುರಾಗ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ‌ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ, ಬೆಡ್​ಗಳ ಕೊರತೆ ಎದುರಾಗುತ್ತಿದೆ. ಶಿಗ್ಗಾಂವಿ ಕ್ಷೇತ್ರದಲ್ಲೂ ಸದ್ಯ 300ಕ್ಕೂ ಅಧಿಕ ಕೊರೊನಾ ಕೇಸ್​ಗಳಿವೆ. ಹೀಗಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕ್ಷೇತ್ರದಲ್ಲಿನ ಸೋಂಕಿತರಿಗೆ ಬೆಡ್​ಗಳ ಕೊರತೆ ಎದುರಾಗದಂತೆ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿನ ಸೋಂಕಿತರ ಅನುಕೂಲಕ್ಕಾಗಿ ತಮ್ಮ‌ ಮನೆ ಪಕ್ಕದ ಸಭಾಭವನವನ್ನೆ ಕೋವಿಡ್ ಕಾಳಜಿ ಕೇಂದ್ರ ಮಾಡೋ‌ ಮೂಲಕ ಜನರ‌ ಗಮನ ಸೆಳೆದಿದ್ದಾರೆ.
Youtube Video
ಏನೇ ಇರಲಿ, ಜನರಿಗೆ ಕೊರೊನಾ ಕಾಟ ಶುರುವಾಗಿರೋ ಈ ಸಂದರ್ಭದಲ್ಲಿ ತಮ್ಮ‌ ಮನೆ ಪಕ್ಕದ ಸಭಾಭವನವನ್ನೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿರೋದು ಸಚಿವರ ಜನಪರ‌ ಕಾಳಜಿಗೆ ಸಾಕ್ಷಿಯಾಗಿದೆ.

(ವರದಿ: ಮಂಜುನಾಥ ತಳವಾರ)
Published by: Sushma Chakre
First published: May 15, 2021, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories