Haveri Covid-19 Updates: ಹಾವೇರಿಯಲ್ಲಿ ಕೊರೋನಾ ತ್ರಿಶತಕ: ಇಂದಿನಿಂದ ರಾಣೇಬೆನ್ನೂರು ಸ್ವಯಂ ಪ್ರೇರಿತ ಲಾಕ್​ಡೌನ್​

ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್​​ ಕೇಸುಗಳ ಸಂಖ್ಯೆಯೂ ತ್ರಿಶತಕ ಬಾರಿಸಿದೆ. ರಾಣೇಬೆನ್ನೂರ ತಾಲ್ಲೂಕು ಒಂದರಲ್ಲೇ 31 ಕೊರೋನಾ ಪಾಸಿಟಿವ್ ಕೇಸ್​ ಇವೆ. ಈ ಮಾರಕ ಕೊರೋನಾಗೆ ಓರ್ವ ವ್ಯಕ್ತಿ ಬಲಿಯಾಗಿದ್ಧಾರೆ. ಹೀಗಾಗಿ ಸಾರ್ವಜನಿಕರು ಲಾಕ್​ಡೌನ್​​ ಅವಧಿಯಲ್ಲೇ ಮನೆಯಲ್ಲೇ ಇರಬೇಕು ಎಂದು ಶಾಸಕರು ವಿನಂತಿಸಿಕೊಂಡಿದ್ಧಾರೆ.

news18-kannada
Updated:July 14, 2020, 7:51 AM IST
Haveri Covid-19 Updates: ಹಾವೇರಿಯಲ್ಲಿ ಕೊರೋನಾ ತ್ರಿಶತಕ: ಇಂದಿನಿಂದ ರಾಣೇಬೆನ್ನೂರು ಸ್ವಯಂ ಪ್ರೇರಿತ ಲಾಕ್​ಡೌನ್​
ಸಾಂದರ್ಭಿಕ ಚಿತ್ರ
  • Share this:
ರಾಣೇಬೆನ್ನೂರು(ಜು.14): ಹಾವೇರಿಯಲ್ಲೂ ಕೊರೋನಾ ವೈರಸ್​ ರಣಕೇಕೇ ಹಾಕುತ್ತಿದೆ. ಹೀಗಾಗಿ ಸಾರ್ವಜನಿಕರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಇಂದಿನಿಂದ ಅಂದರೆ ಜುಲೈ 14ರಿಂದಲೇ ಒಂದು ವಾರ ಜುಲೈ 20ರವರೆಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನೆಲ್ಲವೂ ಸಂಪೂರ್ಣ ಬಂದ್​ ಮಾಡಲು ತೀರ್ಮಾನಿಸಲಾಗಿದೆ. ಹಾಲು ಮತ್ತು ಔಷಧಿ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್​ ಮಾಡಬೇಕು ಎಂದು ರಾಣೇಬೆನ್ನೂರು ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವ ಸಲುವಾಗಿ ನಗರವನ್ನು ಲಾಕ್​​ಡೌನ್ ಮಾಡುವಂತೆ ಕ್ಷೇತ್ರದ ಜನರಿಗೆ ಶಾಸಕ ಅರುಣ್​​ ಕುಮಾರ್​​ ಪೂಜಾರ್​​ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಆದ್ದರಿಂದ ವೈರಸ್ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಲಾಕ್​​ಡೌನ್​ಗೆ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ರಾಣೇಬೆನ್ನೂರ ಮಾರುಕಟ್ಟೆಗೆ ಸುತ್ತಮುತ್ತಲಿನ ತಾಲ್ಲೂಕಿನ ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ವ್ಯಾಪಾರ ವಹಿವಾಟಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೆ ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಗಡಿ ಭಾಗಕ್ಕೆ ರಾಣೇಬೆನ್ನೂರ ಹೊಂದಿಕೊಂಡಿದೆ. ಹೀಗಾಗಿ ರಾಣೆಬೆನ್ನೂರ ತಾಲೂಕನ್ನು ಲಾಕ್​​ಡೌನ್ ಮಾಡಲು ನಿರ್ಧರಿಸಲಾಗಿದೆ.

ಇನ್ನು, ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್​​ ಕೇಸುಗಳ ಸಂಖ್ಯೆಯೂ ತ್ರಿಶತಕ ಬಾರಿಸಿದೆ. ರಾಣೇಬೆನ್ನೂರ ತಾಲ್ಲೂಕು ಒಂದರಲ್ಲೇ 31 ಕೊರೋನಾ ಪಾಸಿಟಿವ್ ಕೇಸ್​ ಇವೆ. ಈ ಮಾರಕ ಕೊರೋನಾಗೆ ಓರ್ವ ವ್ಯಕ್ತಿ ಬಲಿಯಾಗಿದ್ಧಾರೆ. ಹೀಗಾಗಿ ಸಾರ್ವಜನಿಕರು ಲಾಕ್​ಡೌನ್​​ ಅವಧಿಯಲ್ಲೇ ಮನೆಯಲ್ಲೇ ಇರಬೇಕು ಎಂದು ಶಾಸಕರು ವಿನಂತಿಸಿಕೊಂಡಿದ್ಧಾರೆ.

ಹಾವೇರಿಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಮಾರಕ ಕೊರೋನಾ ಹಾವಳಿ ಮುಂದುವರೆದಿದೆ. ಇದರ ಪರಿಣಾಮ ನಿನ್ನೆ 2738 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 40 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.


ಒಟ್ಟು, 41,581 ಮಂದಿ ಪೈಕಿ 16248 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ಧಾರೆ. ಸದ್ಯ 24572 ಸಕ್ರಿಯ ಕೇಸುಗಳು ಮಾತ್ರ ಬಾಕಿ ಇವೆ. ಈ ಮಾರಕ ಕೊರೋನಾಗೆ ಒಂದೇ ದಿನ 73 ಮಂದಿ ಅಸುನೀಗಿದ್ದಾರೆ. ಹೀಗಾಗಿ ರಾಜ್ಯದ ಕೋವಿಡ್​-19 ಮೃತರ ಸಂಖ್ಯೆಯೂ 757ಕ್ಕೆ ಏರಿಕೆಯಾಗಿದೆ.
Published by: Ganesh Nachikethu
First published: July 14, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading