ಕೊರೋನಾ ವೈರಸ್ಗೆ ಔಷಧ ಕಂಡುಹಿಡಿಯುವ ಜಾಗತಿಕ ಮಟ್ಟದ ವಿಜ್ಞಾನಿಗಳ ತಂಡದಲ್ಲಿ ಹಾಸನ ಯುವ ವಿಜ್ಞಾನಿಗೆ ಸ್ಥಾನ
ಮೈಸೂರು ವಿವಿ ವಿದ್ಯಾರ್ಥಿಯಾಗಿದ್ದ ಮಹದೇಶ ಪ್ರಸಾದ್ ಓದುವಾಗಲೇ ಶೈಕ್ಷಣಿಕವಾಗಿ ಗಮನೀಯ ಸಾಧನೆ ಮಾಡಿದ್ದರು. ಮೈಸೂರು ವಿಶ್ವ ವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪಿಎಚ್ಡಿ ಪದವಿ ಗಳಿಸಿದ ಮೊಟ್ಟ ಮೊದಲ ಕಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
news18-kannada Updated:March 16, 2020, 4:09 PM IST

ಯುವ ವಿಜ್ಞಾನಿ ಮಹದೇಶ ಪ್ರಸಾದ್.
- News18 Kannada
- Last Updated: March 16, 2020, 4:09 PM IST
ಹಾಸನ: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಾರಕ ಕೊರೋನಾ ವೈರಸ್ ನಿವಾರಣೆಗೆ ಸದ್ಯ ಯಾವುದೇ ಔಷಧಗಳಿಲ್ಲ. ಕೊರೋನಾ ವೈರಸ್ ಔಷಧ ಕಂಡುಹಿಡಿಯಲು ಇಡೀ ವಿಶ್ವದ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ಮಾರಕ ವೈರಸ್ಗೆ ಔಷಧ ಕಂಡುಹಿಡಿಯುವ ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವೈರಸ್ ತಂಡದಲ್ಲಿ ಕನ್ನಡಿಗರೊಬ್ಬರು ಸ್ಥಾನ ಪಡೆದಿದ್ದಾರೆ.
ಹಾಸನ ಜಿಲ್ಲೆ, ಅರಕಲಗೂಡಿನ ಮಹದೇಶ್ ಪ್ರಸಾದ್, ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವೈರಸ್ ತಂಡದಲ್ಲಿ ಸ್ಥಾನ ಪಡೆದ ಹೆಮ್ಮೆಯ ವಿಜ್ಞಾನಿ. ವಿದೇಶದಲ್ಲಿರುವ ವಿಜ್ಞಾನಿಗಳು ಹಿಂದಿರುಗಿ ಎಂಬ ಪ್ರಧಾನಿ ಕರೆಗೆ ಓಗೊಟ್ಟು ಮಹದೇಶ ಪ್ರಸಾದ್ ಭಾರತಕ್ಕೆ ಮರಳಿದ್ದರು. ಒಂದು ವರ್ಷದಿಂದ ಸಂಶೋಧನೆ ಸಂಬಂಧ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಇದೀಗ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಕೊರೋನಾ ವೈರಸ್ಗೆ ಲಸಿಕೆ ಕಂಡು ಹಿಡಿಯಲು ಯುರೋಪ್ ರಾಷ್ಟ್ರಗಳು ಒಗ್ಗೂಡಿ ವಿಜ್ಞಾನಿಗಳ ಹತ್ತು ತಂಡ ರಚಿಸಿದೆ. ವಿಶ್ವ ಸಂಸ್ಥೆ ಕೋರೋನಾ ವೈರಸ್ಗೆ ಔಷಧ ಕಂಡುಹಿಡಿಯಲು ಹತ್ತು ತಂಡ ರಚಿಸಿದೆ, ಈ ತಂಡದಲ್ಲಿ ಮಹದೇಶ ಪ್ರಸಾದ್ ಸ್ಥಾನ ಪಡೆದುಕೊಂಡಿದ್ದಾರೆ. ಮಹದೇಶ ಪ್ರಸಾದ್ ಕುಟುಂಬಸ್ಥರು ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ.

ಮೈಸೂರು ವಿವಿ ವಿದ್ಯಾರ್ಥಿ
ಮೈಸೂರು ವಿವಿ ವಿದ್ಯಾರ್ಥಿಯಾಗಿದ್ದ ಮಹದೇಶ ಪ್ರಸಾದ್ ಓದುವಾಗಲೇ ಶೈಕ್ಷಣಿಕವಾಗಿ ಗಮನೀಯ ಸಾಧನೆ ಮಾಡಿದ್ದರು. ಮೈಸೂರು ವಿಶ್ವ ವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪಿಎಚ್ಡಿ ಪದವಿ ಗಳಿಸಿದ ಮೊಟ್ಟ ಮೊದಲ ಕಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಕಿರಿಯ ವಯಸ್ಸಿನಲ್ಲಿಯೇ ಸಾಧನೆಗಾಗಿ ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಕೂಡ ಎನಿಸಿಕೊಂಡಿದ್ದಾರೆ.ಇದನ್ನು ಓದಿ: ಪ್ರತಿ 3 ದಿನಗಳಿಗೊಮ್ಮೆ ಫ್ರಾನ್ಸ್ ನಲ್ಲಿ ದ್ವಿಗುಣವಾಗುತ್ತಿದೆ ಕೊರೋನಾ ವೈರಸ್ ಪ್ರಕರಣ
ಮಹದೇಶ್ ಪ್ರಸಾದ್ ಸಾಧನೆ
ಹಾಸನ ಜಿಲ್ಲೆ, ಅರಕಲಗೂಡಿನ ಮಹದೇಶ್ ಪ್ರಸಾದ್, ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವೈರಸ್ ತಂಡದಲ್ಲಿ ಸ್ಥಾನ ಪಡೆದ ಹೆಮ್ಮೆಯ ವಿಜ್ಞಾನಿ.

ಮಹದೇಶ್ ಪ್ರಸಾದ್
ಮೈಸೂರು ವಿವಿ ವಿದ್ಯಾರ್ಥಿ
ಮೈಸೂರು ವಿವಿ ವಿದ್ಯಾರ್ಥಿಯಾಗಿದ್ದ ಮಹದೇಶ ಪ್ರಸಾದ್ ಓದುವಾಗಲೇ ಶೈಕ್ಷಣಿಕವಾಗಿ ಗಮನೀಯ ಸಾಧನೆ ಮಾಡಿದ್ದರು. ಮೈಸೂರು ವಿಶ್ವ ವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪಿಎಚ್ಡಿ ಪದವಿ ಗಳಿಸಿದ ಮೊಟ್ಟ ಮೊದಲ ಕಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಕಿರಿಯ ವಯಸ್ಸಿನಲ್ಲಿಯೇ ಸಾಧನೆಗಾಗಿ ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಕೂಡ ಎನಿಸಿಕೊಂಡಿದ್ದಾರೆ.ಇದನ್ನು ಓದಿ: ಪ್ರತಿ 3 ದಿನಗಳಿಗೊಮ್ಮೆ ಫ್ರಾನ್ಸ್ ನಲ್ಲಿ ದ್ವಿಗುಣವಾಗುತ್ತಿದೆ ಕೊರೋನಾ ವೈರಸ್ ಪ್ರಕರಣ
ಮಹದೇಶ್ ಪ್ರಸಾದ್ ಸಾಧನೆ
- 2019-ವಿಸಿಟಿಂಗ್ ವೈರಾಲಜಿ ಫೆಲೋಶಿಪ್, ಬೆಲ್ಜಿಯಂ
- 2016- ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ರೀಸರ್ಚ್ ಬೋರ್ಡ್ನಿಂದ ಯಂಗ್ ಸೈಂಟಿಸ್ಟ್ ಅವಾರ್ಡ್,
- 2012-ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಸ್ವೀಡನ್
- 2010- ಎನ್ಐಹೆಚ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಯುಎಸ್ಎ
- 2009- DAAD ಫೆಲೋಶಿಪ್, ಜರ್ಮನಿ•
- ಬಯೋಕೆಮಿಸ್ಟ್ರಿ, ವೈರಾಲಜಿ, ಸ್ಟೆಮ್ ಸೆಲ್ ಬಯಾಲಜಿ, ಟ್ಯೂಮರ್ ವೈರಾಲಜಿ, ಕ್ಯಾನ್ಸರ್ ಜೆನೆಟಿಕ್ಸ್, ಸಿಸ್ಟಂ ವ್ಯಾಕ್ಸಿನಾಲಜಿ ಸೇರಿದಂತೆ ಹಲವು ವಿಷಯಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ 16 ಪ್ರಬಂಧಗಳ ಮಂಡನೆ
- ಸರ್ಟಿಫೈಡ್ ಲ್ಯಾಬ್ ಅನಿಮಲ್ ಎಕ್ಸ್ ಪರ್ಟ್ ಎಂದು ಯೂರೋಪಿಯನ್ ಕೌನ್ಸಿಲ್ನಿಂದ ಮನ್ನಣೆ