• Home
  • »
  • News
  • »
  • coronavirus-latest-news
  • »
  • ಕೊರೋನಾ ಭೀತಿ; ಹಾಸನ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆ, ಪ್ರವಾಸಿ ತಾಣ ಬಂದ್, ದೇವರ ಮೊರೆ ಹೋದ ಭಕ್ತರು

ಕೊರೋನಾ ಭೀತಿ; ಹಾಸನ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆ, ಪ್ರವಾಸಿ ತಾಣ ಬಂದ್, ದೇವರ ಮೊರೆ ಹೋದ ಭಕ್ತರು

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಹೊಳೆನರಸೀಪುರದ ಕೋಟೆ ಮಾರಮ್ಮ ದೇವಾಲಯದಲ್ಲಿ ಕೊರೋನ ರೋಗ ನಿವಾರಣೆಗಾಗಿ ಲಲಿತ ಸಹಸ್ರನಾಮ ಹೋಮ ಮಾಡಲಾಗಿದೆ. ಕೋಟೆ ಮಾರಮ್ಮ ದೇವಾಲಯಕ್ಕೆ ನಾಲ್ಕು ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಹಿಂದೆ ದಡಾರ, ಪ್ಲೇಗ್ ಸೇರಿದಂತೆ ಹಲವು ಸಾಂಕ್ರಾಮಿಕ ರೋಗ ಹರಡಿದಾಗ ಈ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತಂತೆ. 

ಮುಂದೆ ಓದಿ ...
  • Share this:

ಹಾಸನ ; ಕೊರೋನಾ ಭೀತಿ ಹಿನ್ನೆಲೆ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿದ್ದು ದಿನ ಕಳೆದಂತೆ ಭಯದ ವಾತಾವರಣ ಹೆಚ್ಚಾಗಿದೆ. ಈ ವೈರಸ್ ನಿಂದಾಗಿ ಹಾಸನ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಹೈಅಲರ್ಟ್ ಘೋಷಿಸಿದ್ದು, ಇಂದಿನಿಂದ ಮಾರ್ಚ್ ಅಂತ್ಯದವರೆಗೆ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಒಂದೆಡೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಮತ್ತೊಂದೆಡೆ ಈ ಕೊರೋನಾ ಮಹಾಮಾರಿ ತೊಲಗಲಿ ಎಂದು ನೂರಾರು ಭಕ್ತರು ದೇವರ ಮೊರೆ ಹೋಗಿದ್ದಾರೆ. 


ಕೊರೋನಾ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಇಡೀ ಜಿಲ್ಲೆಯಾದ್ಯಂತ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ತಾತ್ಕಾಲಿಕವಾಗಿ ಸಾರ್ವಜನಿಕ ಪ್ರವೇಶ ನಿರ್ಬಂಧ ಹೇರಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದ್ದು, ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಲಾಗಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಗಿರೀಶ್, ಕೊರೋನಾ ಮುನ್ನೆಚ್ಚರಿಕೆಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬೇಲೂರು, ಹಳೇಬೀಡು , ಶ್ರವಣಬೆಳಗೊಳಕ್ಕೆ ಹೆಚ್ಚು ವಿದೇಶಿ ಪ್ರವಾಸಿಗರು ಬರುತ್ತಾರೆ. ವಿದೇಶದಿಂದ ಬಂದವರಲ್ಲೇ ಹೆಚ್ಚು ಶಂಕಿತರು ಕಂಡು ಬರುತ್ತಿರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಾರ್ಚ್ ಕೊನೆಯ ತನಕ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮುಂದಿನ ಸ್ಥಿತಿ ನೋಡಿಕೊಂಡು ಆದೇಶ ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.


ಈವರೆಗೂ 152 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೂ ಪಾಸಿಟಿವ್ ಬಂದಿಲ್ಲಾ. ಎಲ್ಲರಿಗೂ ನೆಗೆಟಿವ್ ಇದೆ. 152 ಮಂದಿ ಪೈಕಿ 50 ಮಂದಿ ಭಾರತದ ಪ್ರಜೆಗಳು ಮತ್ತು 102 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. ಹಾಸನ ಜಿಲ್ಲೆಗೆ  ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ. ವೈರಸ್​ ಶಂಕೆ ಮೇಲೆ ಅವರನ್ನು ಹೆಚ್ಚು ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಇದನ್ನು ಓದಿ: ಕೊರೋನಾ ಭೀತಿ: ಅಂತಾರಾಷ್ಟ್ರೀಯ ವಿಮಾನಗಳು ಒಂದು ವಾರ ಭಾರತದಲ್ಲಿ ಲ್ಯಾಂಡ್​ ಆಗುವಂತಿಲ್ಲ; ಕೇಂದ್ರ ಸರ್ಕಾರ ಆದೇಶ


ಕೊರೋನಾ ವೈರಸ್ ಹರಡದಂತೆ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ನಡುವೆ ಜಿಲ್ಲೆಯ ಹಲವು ಮಂದಿ ಕೊರೋನಾ ತಡೆಗಟ್ಟುವಂತೆ ದೇವರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ಕೋಟೆ ಮಾರಮ್ಮ ದೇವಾಲಯದಲ್ಲಿ ಕೊರೋನ ರೋಗ ನಿವಾರಣೆಗಾಗಿ ಲಲಿತ ಸಹಸ್ರನಾಮ ಹೋಮ ಮಾಡಲಾಗಿದೆ. ಕೋಟೆ ಮಾರಮ್ಮ ದೇವಾಲಯಕ್ಕೆ ನಾಲ್ಕು ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಹಿಂದೆ ದಡಾರ, ಪ್ಲೇಗ್ ಸೇರಿದಂತೆ ಹಲವು ಸಾಂಕ್ರಾಮಿಕ ರೋಗ ಹರಡಿದಾಗ ಈ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತಂತೆ.


ಈ ನಂಬಿಕೆ ನೂರಾರು ವರ್ಷಗಳಿಂದ ನಡೆದು ಬಂದಿದ್ದು ದೇವರಿಗೆ ಪೂಜೆ ಸಲ್ಲಿಸಿದಾಗಲೆಲ್ಲ ಒಳಿತಾಗಿದೆ ಎಂದು ಇಲ್ಲಿಯ ಜನ ನಂಬುತ್ತಾರೆ. ಈಗ ಕೊರೋನ ರೋಗ ಮಹಾಮಾರಿಯಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವಜರಂತೆ ಕೋಟೆ ಮಾರಮ್ಮ ದೇವರ ಮೊರೆ ಹೋಗಿರುವ ಭಕ್ತರು ಕೊರೋನಾ ನಿವಾರಣೆಗೆ ಪೂಜೆ ಸಲ್ಲಿಸಿದ್ದಾರೆ.

Published by:HR Ramesh
First published: