ಹಾಸನ: ನೆನ್ನೆಯಿಂದ ರಾಜ್ಯದ ಎಲ್ಲೆಡೆ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅದರಂತೆ ಹಾಸನದಲ್ಲೂ ಎಂಆರ್ಪಿ, ಎಂಎಸ್ಐಎಲ್ ಅಂಗಡಿಗಳನ್ನು ತೆರೆಯಲಾಗಿದೆ. ಆದರೆ, ಒಂದೇ ದಿನದಲ್ಲಿ ಇದ್ದ ಮದ್ಯವೆಲ್ಲಾ ಸಂಪೂರ್ಣ ಖಾಲಿ ಖಾಲಿಯಾಗಿದೆ. ಹಾಸನದಲ್ಲಿ 7 ಸೇರಿ ಜಿಲ್ಲೆಯಲ್ಲಿ ಒಟ್ಟು 33 ಎಂಎಸ್ಐಎಲ್ ಅಂಗಡಿಗಳಿವೆ. ಈ ಎಲ್ಲ ಅಂಗಡಿಗಳಲ್ಲೂ ಮದ್ಯ ಖಾಲಿಯಾಗಿದೆ. ಹಾಸನದಲ್ಲಿರುವ ಎಲ್ಲಾ 7 ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಮದ್ಯ ಖಾಲಿಯಾಗಿದ್ದರೂ ಅಂಗಡಿ ಮುಂದೆ ಜನರು ಕ್ಯೂ ನಿಂತಿದ್ದಾರೆ.
ಈ ಹಿಂದೆ ಪ್ರತಿ ದಿನ 25 ಲಕ್ಷ ರೂ. ಮದ್ಯ ಮಾರಾಟವಾಗುತ್ತಿತ್ತು. ಆದರೆ, ನೆನ್ನೆ ಒಂದೇ ದಿನ ಎಂಎಸ್ಐಎಲ್ನಲ್ಲಿ 1.7 ಕೋಟಿ ರೂ. ವ್ಯಾಪಾರವಾಗಿದೆ. ನೆನ್ನೆಯಿಂದ ಜನರು ಮುಗಿಬಿದ್ದು ಎಣ್ಣೆ ಖರೀದಿ ಮಾಡುತ್ತಿದ್ದಾರೆ. ಹಸಿರು ವಲಯದಲ್ಲಿರುವ ಹಾಸನ ಜಿಲ್ಲೆಯಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
ರಾಜ್ಯದಾದ್ಯಂತ ನೆನ್ನೆ ಭರ್ಜರಿ ಮದ್ಯ ವ್ಯಾಪಾರವಾಗಿದೆ. ಒಂದೇ ದಿನದಲ್ಲಿ ಎಂಎಸ್ಐಎಲ್ ಮತ್ತು ಎಂಆರ್ಪಿಗಳನ್ನು ಬರೋಬ್ಬರಿ 45 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ