ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ: ಖಾಸಗಿ ವೈದ್ಯರಿಗೆ ಹಾಸನ ಜಿಲ್ಲಾಧಿಕಾರಿ ಮನವಿ

ಜಿಲ್ಲೆಯಲ್ಲಿ ಎನ್-95 ಮಾಸ್ಕ್ ಹಾಗೂ ಪಿ.ಪಿ.ಕಿಟ್ ಗಳ ಕೊರತೆ ಇದೆ. ಇವು ಮುಂದಿನ ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಲಭ್ಯ ಇರುವ ತ್ರಿಪಲ್ ಲೇಯರ್ ಮಾಸ್ಕ್ ಗಳನ್ನು ಖಾಸಗಿ ಅಸ್ಪತ್ರೆಗಳಿಗೂ ಸ್ವಲ್ಪ ಪ್ರಮಾಣದಲ್ಲಿ ನೀಡಲಾಗುವುದು. ಎಲ್ಲಾ ವೈದ್ಯರು ಅವುಗಳನ್ನು ಹಾಕಿಯೇ ತಪಾಸಣೆ ನಡೆಸಬೇಕು ಎಂದು ಹೇಳಿದರು.

news18-kannada
Updated:April 1, 2020, 2:45 PM IST
ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ: ಖಾಸಗಿ ವೈದ್ಯರಿಗೆ ಹಾಸನ ಜಿಲ್ಲಾಧಿಕಾರಿ ಮನವಿ
ಹಾಸನ ಜಿಲ್ಲಾಧಿಕಾರಿಗಳ ಸಭೆ
  • Share this:
ಹಾಸನ(ಏ.01): ಕೊರೋನಾ  ಸೋಂಕು ನಿಯಂತ್ರಣ ಹಾಗೂ ಚಿಕಿತ್ಸಾ ಸನ್ನದ್ದತೆ ಕುರಿತಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಂಗಳವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಸಂಪೂರ್ಣ ಸಹಕಾರ ಕೋರಿದ್ದಾರೆ. ಇದೊಂದು ಆರೋಗ್ಯ ತುರ್ತು ಪರಿಸ್ಥಿತಿ, ಎಲ್ಲರೂ ಒಂದಾಗಿ ಕೋವಿಡ್ 19 ವಿರುದ್ದ ಹೋರಾಟ ನಡೆಸಬೇಕಿದೆ. ಇದಕ್ಕೆ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಸಹಕಾರ ಅತೀ ಅಮೂಲ್ಯವಾದದ್ದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಹಾಗಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಒ.ಪಿ.ಡಿ ಪ್ರಾರಂಭಿಸಬೇಕು. ಹೊರ ರೋಗಿಗಳ ತಪಾಸಣೆ ಪ್ರಾರಂಭ ಆಗಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಇರುವ ಎಲ್ಲಾ 52 ಖಾಸಗಿ ನರ್ಸಿಂಗ್ ಹೋಂಗಳು ಕನಿಷ್ಠ ಕೊರೊನಾ ಮಹಾಮಾರಿ ತೊಲಗುವವರೆಗಾದರೂ ಸುವರ್ಣ ಆರೋಗ್ಯ ಟ್ರಸ್ಟ್ ನಲ್ಲಿ ನೊಂದಾಯಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನಗರದ ತಣ್ಣೀರುಹಳ್ಳ ದಲ್ಲಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಯುರ್ವೇದ ಆಸ್ಪತ್ರೆಯನ್ನು ಅಗತ್ಯ ಬಿದ್ದರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಕಾಯ್ದುರಿಸಿಕೊಳ್ಳಲಾಗಿದೆ. ಇದೇ ರೀತಿ ಖಾಸಗಿ ಆಸ್ಪತ್ರೆಗಳ ಅಗತ್ಯ ಕೂಡ ಬರಬಹುದು. ಆಗ ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಲು ಅಥವಾ ಖಾಸಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಸಿದ್ದರಿರಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಒಂದು ವರ್ಷದ ಸಂಬಳವನ್ನೇ ದೇಣಿಗೆಯಾಗಿ ನೀಡಿದ ಸಿಎಂ ಬಿಎಸ್​ವೈ

ಜಿಲ್ಲೆಯಲ್ಲಿ ಎನ್-95 ಮಾಸ್ಕ್ ಹಾಗೂ ಪಿ.ಪಿ.ಕಿಟ್ ಗಳ ಕೊರತೆ ಇದೆ. ಇವು ಮುಂದಿನ ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಲಭ್ಯ ಇರುವ ತ್ರಿಪಲ್ ಲೇಯರ್ ಮಾಸ್ಕ್ ಗಳನ್ನು ಖಾಸಗಿ ಅಸ್ಪತ್ರೆಗಳಿಗೂ ಸ್ವಲ್ಪ ಪ್ರಮಾಣದಲ್ಲಿ ನೀಡಲಾಗುವುದು. ಎಲ್ಲಾ ವೈದ್ಯರು ಅವುಗಳನ್ನು ಹಾಕಿಯೇ ತಪಾಸಣೆ ನಡೆಸಬೇಕು ಎಂದು ಹೇಳಿದರು.

ಖಾಸಗಿ ನರ್ಸಿಂಗ್ ಹೋಂಗಳು ಹಾಗೂ ವೈದ್ಯರ ಪರವಾಗಿ ಡಾ ಬಷೀರ್ ,ಡಾ.ರಮೇಶ್ , ಡಾ.ಭಾರತೀ ರಾಜಶೇಖರ್ ಡಾ.ಅಶೋಕ್ ಗೌಡ ಮತ್ತಿತರರು ಮಾತಾನಾಡಿ  ಇಂದೊಂದು ಹೋರಾಟದ ಪರಿಸ್ಥಿತಿ .ವೈದ್ಯರಿಗೆ ಹಣಕ್ಕಿಂತ ವೃತ್ತಿ ಧರ್ಮ ಮತ್ತು ಮಾನವೀಯತೆ ಮುಖ್ಯ ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಶ್ರಮಿಸಲು ಸಿದ್ದ.  ಆದರೆ ಸರ್ಕಾರವೂ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳ ಹಿತ ಕಾಯಬೇಕು ಕೊರೋನಾ ವಿರುದ್ಧ ಹೋರಾಟ ನಡೆಸುವ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗೂ ವಿಮಾ ಸೌಲಭ್ಯ ವಿಸ್ತರಿಸಬೇಕು ಎಂದರು.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading