ಜೈಲುಗಳಲ್ಲೂ ಕೊರೋನಾ ವೈರಸ್ ಭೀತಿ; ಹರಿಯಾಣದ ಕೈದಿಗಳಿಗೆ 4 ವಾರ ರಜೆ ಘೋಷಣೆ

ಕೊರೋನಾ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ದೇಶದ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ರಜೆ ನೀಡುವಂತೆ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಸೂಚಿಸಿದ್ದರು.

news18-kannada
Updated:March 26, 2020, 9:09 AM IST
ಜೈಲುಗಳಲ್ಲೂ ಕೊರೋನಾ ವೈರಸ್ ಭೀತಿ; ಹರಿಯಾಣದ ಕೈದಿಗಳಿಗೆ 4 ವಾರ ರಜೆ ಘೋಷಣೆ
ಜೈಲು ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮಾ. 26): ಜೈಲಿನಲ್ಲಿ ಕೊರೋನಾ ವೈರಸ್ ಹರಡುವ ಭೀತಿಯಿಂದ ಹರಿಯಾಣದ ಕೈದಿಗಳಿಗೆ 4 ವಾರಗಳ ಕಾಲ ರಜೆ ಘೋಷಿಸಲಾಗಿದೆ. ಸುಪ್ರೀಂ ಕೋರ್ಟ್​ ಸೂಚನೆ ಮೇರೆಗೆ ಕೈದಿಗಳಿಗೆ ರಜೆ ನೀಡಲಾಗಿದೆ.

ಕೊರೋನಾ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ದೇಶದ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ರಜೆ ನೀಡುವಂತೆ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಸೂಚಿಸಿದ್ದರು. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಮತ್ತೊಂದು ರಾಷ್ಟ್ರ; ವಿಶ್ವಾದ್ಯಂತ 21 ಸಾವಿರ ಸಾವು

ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಿಗೆ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಜೈಲುಗಳ ಸೆಲ್​ಗಳಲ್ಲಿ ಹೆಚ್ಚು ಜನ‌ ಸೇರುವುದರಿಂದ ಕೊರೋನಾ ವೈರಸ್ ಹರಡಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕೈದಿಗಳಿಗೆ ರಜೆ ನೀಡಲು ಸೂಚನೆ ನೀಡಲಾಗಿತ್ತು. ಕೆಲವು ದಿನಗಳ ಹಿಂದಷ್ಟೆ ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ತಿಹಾರ್ ಜೈಲಿನಲ್ಲಿರುವ 3,000 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ನಿರ್ಧರಿಸುವುದಾಗಿತ್ತು.

ಇದನ್ನೂ ಓದಿ: ನನಗೆ ಕೊರೋನಾ ಇದೆ, ಹತ್ರ ಬನ್ನಿ; ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ರಂಪಾಟ ಮಾಡಿದ ಟೆಕ್ಕಿಯೀಗ ಪೊಲೀಸರ ಅತಿಥಿ
First published: March 26, 2020, 9:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading