ಜುಬಿಲೆಂಟ್ಸ್​ನಲ್ಲಿ ಕೊರೋನಾ: ಪೊಲೀಸ್ ತನಿಖೆ ಮುಕ್ತಾಯ; ತನಿಖಾಧಿಕಾರಿ ಹರ್ಷಗುಪ್ತ ಹೇಳಿದ್ದೇನು?

ಎರಡು ದಿನದ ಹಿಂದೆ ಜುಬಿಲೆಂಟ್ಸ್ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದಿಂದ ನನಗೆ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಮೊದಲ ಭಾಗವಾಗಿ, ನಾನು ಕೆಲವು ಮಾಹಿತಿ ಕೇಳಿದ್ದೇನೆ ಎಂದು ಹರ್ಷ ಗುಪ್ತ ಹೇಳಿದ್ದಾರೆ.

news18-kannada
Updated:April 28, 2020, 5:03 PM IST
ಜುಬಿಲೆಂಟ್ಸ್​ನಲ್ಲಿ ಕೊರೋನಾ: ಪೊಲೀಸ್ ತನಿಖೆ ಮುಕ್ತಾಯ; ತನಿಖಾಧಿಕಾರಿ ಹರ್ಷಗುಪ್ತ ಹೇಳಿದ್ದೇನು?
ತನಿಖಾಧಿಕಾರಿ ಹರ್ಷ ಗುಪ್ತ
  • Share this:
ಮೈಸೂರು(ಏ. 28): ಜುಬಿಲೆಂಟ್ಸ್ ಕಾರ್ಖಾನೆಗೆ ಸೋಂಕು ವಿಚಾರವಾಗಿ ಸೋಂಕು ತಗುಲಿದ್ದರ ಬಗ್ಗೆ ಪೊಲೀಸ್ ಇಲಾಖೆ ನಡೆಸುತ್ತಿದ್ದ ತನಿಖೆ ಮುಗಿದಿದೆ. ಸರ್ಕಾರ ಹಾಗೂ ನನಗೆ ಪೊಲೀಸ್ ಇಲಾಖೆ ವರದಿ ನೀಡಿದೆ ಅಂತ ಜುಬಿಲೆಂಟ್ಸ್ ಕಾರ್ಖಾನೆ ಕೇಸ್ ತನಿಖಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ನ್ಯೂಸ್‌18 ಜೊತೆ ಮಾತನಾಡಿದ ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ, ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಗಾಗಿ ಹಲವು ಇಲಾಖೆಗೆ ಪತ್ರ ಬರೆದಿದ್ದೇ‌ನೆ. ಯಾವ ಮಾಹಿತಿ ಬೇಕು ಅಂತ ಕೇಳಿ ಪತ್ರ ಬರೆದಿದ್ದೇನೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಆದರೆ, ಪತ್ರದಲ್ಲಿ ಏನಿದೆ ಅಂತ ಮಾಧ್ಯಮದಲ್ಲಿ ಹೇಳೋಕಾಗೋಲ್ಲ ಎಂದು ತಿಳಿಸಿದರು.

ನನ್ನ ಪತ್ರಕ್ಕೆ ಉತ್ತರ ಬಂದ ನಂತರ ಪೊಲೀಸ್ ಹಾಗೂ ನನ್ನ ತನಿಖಾ ವರದಿಯನ್ನ ಸರ್ಕಾರಕ್ಕೆ ಸಲ್ಲಿಸುತ್ತೇನೆ. ಕಾರ್ಖಾನೆ ಪುನಾರಂಭದ ವಿಚಾರ ನನ್ನ ಮುಂದೆ ಇಲ್ಲ. ನಾನು ವರದಿ ನೀಡಿದ ನಂತರ ಸರ್ಕಾರವೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ನನ್ನ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇನೆ ಎಂದು ಜುಬಿಲೆಂಟ್ಸ್ ಕಾರ್ಖಾನೆ ಕೇಸ್ ತನಿಖಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ ಗ್ರೀನ್​​​ ಜೋನ್​​ನಲ್ಲಿರುವ 13 ಜಿಲ್ಲೆಗಳಿಗೆ ಹೊಸ ಮಾರ್ಗಸೂಚಿ: ಅಗತ್ಯ ವ್ಯಾಪಾರಕ್ಕೆ ಅವಕಾಶ ನೀಡಿ ಸರ್ಕಾರ ಆದೇಶ

ನಾನು ವಾರದ ಹಿಂದೆ ಮೈಸೂರಿಗೆ ಬಂದಿದ್ದೇನೆ. ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ‌ ನನ್ನನ್ನ ನೇಮಿಸಿದೆ. ಈ ಜೊತೆಗೆ ಎರಡು ದಿನದ ಹಿಂದೆ ಜುಬಿಲೆಂಟ್ಸ್ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದಿಂದ ನನಗೆ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಮೊದಲ ಭಾಗವಾಗಿ, ನಾನು ಕೆಲವು ಮಾಹಿತಿ ಕೇಳಿದ್ದೇನೆ. ಹಲವು ಇಲಾಖೆಗೆ ಪತ್ರ ಬರೆದಿದ್ದೇನೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಇನ್ನು ಎರಡು ದಿನಗಳ  ಹಿಂದೆ ಜ್ಯುಬಿಲಿಯೆಂಟ್ ಕಾರ್ಖಾನೆಗೆ ನಾನು ಭೇಟಿ ನೀಡಿದ್ದೆ.ಅಲ್ಲಿ 72 ಜನರು ಪಾಸಿಟಿವ್ ಆಗಿದ್ದಾರೆ. ಕಾರ್ಖಾನೆ ಸ್ಥಗಿತ ಆಗಿ,ಕಾರ್ಮಿಕರೆಲ್ಲ ಕ್ವಾರಂಟೈನ್ ಆಗಿದ್ದಾರೆ. ಈ ಸಂದರ್ಭದಲ್ಲಿ ತನಿಖೆಗಿಂತ ಅವಶ್ಯಕವಾಗಿ ಕೊರೋನಾ ನಿಯಂತ್ರಣ ಮಾಡಬೇಕಿದೆ. ನಾನು‌ ಕೊರೋನಾ ನಿಯಂತ್ರಣದ ಬಗ್ಗೆಯೇ ಜಿಲ್ಲಾಡಳಿತದ ಜೊತೆ ಸಮಾಲೋಚನೆಯಲ್ಲಿದ್ದೇನೆ ಎಂದು ತಿಳಿಸಿದರು.

ಇತ್ತ ಮೈಸೂರಿನಲ್ಲಿ ಕೊರೊನಾ ಸೋಂಕು ಸದ್ಯಕ್ಕೆ ಸ್ಥಿರವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ. ಮೇ 3ರವರೆಗೆ ವಿಧಿಸಿರುವ ಲಾಕ್‌ಡೌನ್ ಅವಧಿಯೊಳಗೆ ಮೈಸೂರು ರೆಡ್ ಜೋನ್‌ನಿಂದ ಹೊರಬರಲು ಸಾಧ್ಯವಿಲ್ಲ. ಸತತ 28 ದಿನಗಳಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಬರದಿದ್ದರೆ ಗ್ರೀನ್‌ಜೋನ್‌ಗೆ ಬರಲು ಸಾಧ್ಯವಾಗುತ್ತದೆ. ಇಂದು ಕೆಲ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಾರೆ. ಆದರೂ ಮತ್ತಷ್ಟು ಕೊರೋನಾ ಆಕ್ಟಿವ್ ಪ್ರಕರಣಗಳು ಇರುತ್ತವೆ. ಪಾಸಿಟಿವ್ ಬಂದಿರುವ ಬಹುತೇಕ ಮಂದಿ ಗುಣಮುಖರಾಗಿ ಡಿಸ್ವಾರ್ಜ್ ಆಗಲಿದ್ದಾರೆ. ಇನ್ನು ಹೆಚ್ಚು ಡಿಸ್ವಾರ್ಜ್‌ಗಳು ಮೈಸೂರಿನಲ್ಲಿ ಆಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Open Letter - ಮಾವು, ಮುಸಲ್ಮಾನ ಮತ್ತು ಕೊರೊನಾ! ಅಮೀರ್ ಸಾಬ್, ಪೀರ್ ಸಾಬ್ ಇಲ್ಲದಿದ್ದರೆ ಮರದಲ್ಲೇ ಮಾವು!ಇವೆಲ್ಲದರ ಜೊತೆ ಮೈಸೂರಿನಲ್ಲಿ ಇನ್ಮೇಲೆ‌ ರಸ್ತೆಯಲ್ಲಿ ಉಳುಗಿದರೆ ಫೈನ್ ಹಾಕುವ ನಿರ್ಧಾರ ಮಾಡಲಾಗಿದೆ. ಮಾಸ್ಕ್ ಅಥವ ಯಾವುದೇ ಮುಖಗವಸು ಧರಿಸದಿದ್ದರೂ ದಂಡ ಬಿಳಲಿದೆ. ಏಪ್ರಿಲ್ 30ರ ನಂತರ ಮೈಸೂರಿನಲ್ಲಿ ದಂಡಪ್ರಯೋಗ‌ ನಡೆಯಲಿದೆ. ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಜಾರಿಯಾಗಿದ್ದು, ಏಪ್ರಿಲ್ 30ರವರೆಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳದಂತೆ ಹಾಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಿದೆ. ಇದಕ್ಕಾಗಿ ಪಾಲಿಕೆಯ 9 ವಲಯಗಳಲ್ಲಿ ತಂಡಗಳ ರಚನೆ ಮಾಡಿದೆ. ರಸ್ತೆಯಲ್ಲಿ‌ ಉಗುಳುವವರಿಗೆ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ಹಾಕಿ ತಪ್ಪಿತಸ್ಥರಿಗೆ ₹100 ದಂಡ ಹಾಕಲು ಆದೇಶ ನೀಡುವ ಮೂಲಕ ಪಾಲಿಕೆ ಆಯುಕ್ತರು ಜನರಿಗೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ವರದಿ: ಪುಟ್ಟಪ್ಪ

First published: April 28, 2020, 5:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading