ದೇಶಾದ್ಯಂತ ಸೋಮವಾರ 227 ಹೊಸ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಈ ಮೂಲಕ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 1251ಕ್ಕೆ ಏರಿಕೆ ಆಗಿದೆ. ಸಾವಿನ ಸಂಖ್ಯೆ 32ರ ಗಡಿ ತಲುಪಿದೆ. ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತಂದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇಯಿದೆ.
ಹೀಗಾಗಿ ಸಿನಿ ತಾರೆಯರು, ಕ್ರಿಕೆಟಿಗರು ಸಾಮಾಜಿಕ ತಾಲತಾಣಗಳಲ್ಲಿ ಮನೆಯ ಒಳಗೆಯೆ ಸುರಕ್ಷಿತವಾಗಿರಿ ಎಂಬ ಸಂದೇಶ ನೀಡುತ್ತಿದ್ದಾರೆ. ಸದ್ಯ ಟೀಂ ಇಂಡಿಯಾ ಡ್ಯಾಶಿಂಗ್ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ದೇಶದ ಜನತೆಗೆ ವಿಶೇಷವಾಗಿ ಸಂದೇಶವೊಂದನ್ನು ನೀಡಿದ್ದಾರೆ.
COVID-19: ಕೊರೋನಾ ವಿರುದ್ಧದ ಹೋರಾಟಕ್ಕೆ 1.25 ಕೋಟಿ ರೂಪಾಯಿ ನೀಡಿದ ಸಾನಿಯಾ ಮಿರ್ಜಾ
ಪಾಂಡ್ಯ ಬ್ರದರ್ಸ್ ತಮ್ಮ ಮನೆಯ ಕೊಠಡಿಯಲ್ಲೇ ಕ್ರಿಕೆಟ್ ಆಟವಾಡಿ, 'ಎಲ್ಲರೂ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ಎಲ್ಲರಿಗೂ ಮನವಿ ಮಾಡುತ್ತೇನೆ ಲಾಕ್‌ಡೌನ್ ಅನ್ನು ಚಾಚು ತಪ್ಪದೇ ಪಾಲಿಸಿ ಹಾಗೂ ಕೊರೋನಾ ವೈರಸ್ ಹರಡುವುದನ್ನು ನಿಲ್ಲಿಸಿ' ಎಂಬ ಸಂದೇಶವನ್ನು ನೀಡಿದ್ದಾರೆ. ಈ ವೀಡಿಯೋವನ್ನು ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
We can have fun indoors too 😊 Please stay home and be safe everyone 🤗 @hardikpandya7 pic.twitter.com/bje9m5n99j
— Krunal Pandya (@krunalpandya24) March 29, 2020
RCB ವಿರುದ್ಧ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ಗಳು ಇವರು..!
ಮೊನ್ನೆಯಷ್ಟೆ ಹಾರ್ದಿಕ್ ಪಾಂಡ್ಯ ತಮ್ಮ ಭಾವಿ ಪತ್ನಿ ನತಾಶ ಸ್ಟ್ಯಾನ್ಕೊವಿಚ್, ಸಹೋದರ ಕ್ರುನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಾಂಖುರಿ ಶರ್ಮಾರೊಂದಿಗೆ ವರ್ಕ್ಔಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.
What a fun session with my babies 💪🏾✌🏾 pic.twitter.com/PFWk7kcKoD
— hardik pandya (@hardikpandya7) March 28, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ